AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟು ದಿನ ಬಾರದವರು ಈಗ ಯಾಕ್ರೀ ಬಂದ್ರೀ? ಸಚಿವರಿಗೆ ಹಿಗ್ಗಾಮುಗ್ಗಾ ಕ್ಲಾಸ್​

ಬೆಳಗಾವಿ: ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್​ರನ್ನ ಪ್ರವಾಹ ಪೀಡಿತರು ತರಾಟೆಗೆ ತೆಗೆದುಕೊಂಡಿರೋ ಘಟನೆ ಜಿಲ್ಲೆಯ ಕಾಗವಾಡ ತಾಲೂಕಿನ ಮಳವಾಡ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪ್ರವಾಹ ಪೀಡಿತ ಕ್ಷೇತ್ರಕ್ಕೆ ಕಾಟಾಚಾರದ ಭೇಟಿ ನೀಡಿದ್ದ ಶ್ರೀಮಂತ ಪಾಟೀಲ್​ಗೆ ಜವಳಿ ಖಾತೆ ಸಚಿವರೇ ನಾವು ಸತ್ತ ಮೇಲೆ ಬರ್ತೀರಾ? ಇಷ್ಟು ದಿನ ಬಾರದವರು ಈಗ ಯಾಕೆ ಬಂದ್ರೀ? ಅಂತಾ ಪ್ರವಾಹ ಪೀಡಿತರ ಸಚಿವರನ್ನ ತರಾಟೆಗೆ ತೆಗೆದುಕೊಂಡರು. ನಿಮಗೆ ಜನರ ಜೀವಕ್ಕಿಂತ ಅಧಿಕಾರ ದಾಹವೇ ಹೆಚ್ಚಾಯ್ತು ಎಂದು ಸ್ಥಳದಲ್ಲಿದ್ದ ದೇವಸ್ಥಾನದಲ್ಲಿ ಸಭೆ […]

ಇಷ್ಟು ದಿನ ಬಾರದವರು ಈಗ ಯಾಕ್ರೀ ಬಂದ್ರೀ? ಸಚಿವರಿಗೆ ಹಿಗ್ಗಾಮುಗ್ಗಾ ಕ್ಲಾಸ್​
KUSHAL V
| Edited By: |

Updated on:Aug 11, 2020 | 3:57 PM

Share

ಬೆಳಗಾವಿ: ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್​ರನ್ನ ಪ್ರವಾಹ ಪೀಡಿತರು ತರಾಟೆಗೆ ತೆಗೆದುಕೊಂಡಿರೋ ಘಟನೆ ಜಿಲ್ಲೆಯ ಕಾಗವಾಡ ತಾಲೂಕಿನ ಮಳವಾಡ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಪ್ರವಾಹ ಪೀಡಿತ ಕ್ಷೇತ್ರಕ್ಕೆ ಕಾಟಾಚಾರದ ಭೇಟಿ ನೀಡಿದ್ದ ಶ್ರೀಮಂತ ಪಾಟೀಲ್​ಗೆ ಜವಳಿ ಖಾತೆ ಸಚಿವರೇ ನಾವು ಸತ್ತ ಮೇಲೆ ಬರ್ತೀರಾ? ಇಷ್ಟು ದಿನ ಬಾರದವರು ಈಗ ಯಾಕೆ ಬಂದ್ರೀ? ಅಂತಾ ಪ್ರವಾಹ ಪೀಡಿತರ ಸಚಿವರನ್ನ ತರಾಟೆಗೆ ತೆಗೆದುಕೊಂಡರು.

ನಿಮಗೆ ಜನರ ಜೀವಕ್ಕಿಂತ ಅಧಿಕಾರ ದಾಹವೇ ಹೆಚ್ಚಾಯ್ತು ಎಂದು ಸ್ಥಳದಲ್ಲಿದ್ದ ದೇವಸ್ಥಾನದಲ್ಲಿ ಸಭೆ ನಡೆಸುತ್ತಿದ್ದ ಸಚಿವರಿಗೆ ಹಿಗ್ಗಾಮುಗ್ಗ ಕ್ಲಾಸ್​ ತಗೊಂಡರು.

ಸರ್ಕಾರದ ನಿಯಮಗಳಿಗೆ ಸಚಿವರು ಡೋಂಟ್​ ಕೇರ್​ ಇದಲ್ಲದೆ, ಸಚಿವ ಶ್ರೀಮಂತ ಪಾಟೀಲ್ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವ ಪ್ರಸಂಗವು ಸಹ ಕಂಡು ಬಂದಿದೆ. ಪ್ರವಾಹದ ಸ್ಥಳವನ್ನ ಪರಿಶೀಲಿಸಲು ಬಂದ ಸಚಿವರು ಲೈಫ್​ ಜಾಕೆಟ್ ಇಲ್ಲದೆ ಮತ್ತು ಸಾಮಾಜಿಕ ಅಂತರವನ್ನೂ ಪಾಲಿಸದೆ ಬೋಟಿನಲ್ಲಿ ಸಮೀಕ್ಷೆ ನಡೆಸಿದರು. ಜೊತೆಗೆ, ಕೊರೊನಾ ಸುರಕ್ಷತಾ ಕ್ರಮಗಳನ್ನ ಅನುಸರಿಸದೆ ಕೃಷ್ಣಾ ನದಿಯಲ್ಲಿ ಬೋಟ್ ಪ್ರಯಾಣ ನಡೆಸಿದರು.

Published On - 3:55 pm, Tue, 11 August 20