AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರ ಕಡಿಯುವಾಗ ಬಿದ್ದು, ಚಿಕಿತ್ಸೆ ಸಿಗದೇ ಸಾವನ್ನಪ್ಪಿದ PWD ಗುತ್ತಿಗೆ ನೌಕರ

ಗದಗ: ಸರ್ಕಾರಿ ಕಚೆರಿಯ ಆವರಣದಲ್ಲಿದ್ದ ಮರ ಕಡಿಯುವಾಗ ಬಿದ್ದು ಗಾಯಗೊಂಡಿದ್ದ ಗುತ್ತಿಗೆ ನೌಕರನಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಗದಗದಲ್ಲಿ ಸಂಭವಿಸಿದೆ. ಕರ್ನಾಟಕ ಸರ್ಕಾರದ ಪಿಡಬ್ಲುಡಿ ಇಲಾಖೆಯ ಆವರಣದಲ್ಲಿದ್ದ ಮರ ಕಡಿಯುವಾಗ ಗುತ್ತಿಗೆ ನೌಕರನೊಬ್ಬ ಮೇಲಿಂದ ಕೆಳಗೆ ಬಿದ್ದಿದ್ದಾನೆ. ಹೀಗೆ ಬಿದ್ದು ಗಂಭೀರ ಗಾಯಗೊಂಡ ಸಿಬ್ಬಂದಿ ನೋವಿನಿಂದ ಒದ್ದಾಡುತ್ತಿದ್ರೆ ಸಕಾಲಕ್ಕೆ ಆ್ಯಂಬುಲೆನ್ಸ್ ಬಂದಿಲ್ಲ. ಪಿಡ್ಲ್ಯೂಡಿ ಇಲಾಖೆ ಅಧಿಕಾರಿಗಳು ಕೂಡಾ ಘಟನೆ ಬಳಿಕ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿಲ್ಲ. ಹಾಗೂ ಹೀಗೂ ಮಾಡಿ […]

ಮರ ಕಡಿಯುವಾಗ ಬಿದ್ದು, ಚಿಕಿತ್ಸೆ ಸಿಗದೇ ಸಾವನ್ನಪ್ಪಿದ PWD ಗುತ್ತಿಗೆ ನೌಕರ
Guru
| Edited By: |

Updated on: Aug 11, 2020 | 3:20 PM

Share

ಗದಗ: ಸರ್ಕಾರಿ ಕಚೆರಿಯ ಆವರಣದಲ್ಲಿದ್ದ ಮರ ಕಡಿಯುವಾಗ ಬಿದ್ದು ಗಾಯಗೊಂಡಿದ್ದ ಗುತ್ತಿಗೆ ನೌಕರನಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಗದಗದಲ್ಲಿ ಸಂಭವಿಸಿದೆ.

ಕರ್ನಾಟಕ ಸರ್ಕಾರದ ಪಿಡಬ್ಲುಡಿ ಇಲಾಖೆಯ ಆವರಣದಲ್ಲಿದ್ದ ಮರ ಕಡಿಯುವಾಗ ಗುತ್ತಿಗೆ ನೌಕರನೊಬ್ಬ ಮೇಲಿಂದ ಕೆಳಗೆ ಬಿದ್ದಿದ್ದಾನೆ. ಹೀಗೆ ಬಿದ್ದು ಗಂಭೀರ ಗಾಯಗೊಂಡ ಸಿಬ್ಬಂದಿ ನೋವಿನಿಂದ ಒದ್ದಾಡುತ್ತಿದ್ರೆ ಸಕಾಲಕ್ಕೆ ಆ್ಯಂಬುಲೆನ್ಸ್ ಬಂದಿಲ್ಲ. ಪಿಡ್ಲ್ಯೂಡಿ ಇಲಾಖೆ ಅಧಿಕಾರಿಗಳು ಕೂಡಾ ಘಟನೆ ಬಳಿಕ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿಲ್ಲ.

ಹಾಗೂ ಹೀಗೂ ಮಾಡಿ ಕೆಲ ಹೊತ್ತಿನ ನಂತರ ಗದಗ ನಗರದಲ್ಲಿ ಚಿಕಿತ್ಸೆಗಾಗಿ ಸುತ್ತಾಡಿದ್ರೂ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿಲ್ಲ. ಗದಗದ ಜಿಮ್ಸ್ ಆಸ್ಪತ್ರೆಯಲ್ಲೂ ದಾಖಲು ಮಾಡಿಕೊಂಡಿಲ್ಲ, ಬದಲು ಪ್ರಾಥಮಿಕ ಚಿಕಿತ್ಸೆ ನೀಡಿ ಸಾಗ ಹಾಕಿದ್ದಾರೆ ಅಲ್ಲಿನ ಸಿಬ್ಬಂದಿ.

ಗದಗನಲ್ಲಿ ಚಿಕಿತ್ಸೆ ಸಿಗದೇ ಅನಿವಾರ್ಯವಾಗಿ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲಿಸಲಾಗಿದೆ. ಆದ್ರೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಗುತ್ತಿಗೆ ನೌಕರ ಸಾವನ್ನಪ್ಪಿದ್ದಾನೆ. ಆತನ ಕುಟುಂಬ ವರ್ಗ ಮತ್ತು ಸ್ಥಳದಲ್ಲಿದ್ದವರು ಸಕಾಲಕ್ಕೆ ಗದಗದಲ್ಲೇ ಚಿಕಿತ್ಸೆ ನೀಡಿದ್ದರೆ ಆತ ಬದುಕುತ್ತಿದ್ದ ಎಂದು ಕಣ್ಣೀರು ಹಾಕುತ್ತಿದ್ದಾರೆ.

Follow Us
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?