ಟೋಲ್ ಕೇಳಿದ್ದಕ್ಕೆ ಗಲಾಟೆ ಶುರು.. ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿ ಎಸ್ಕೇಪ್

| Updated By: ಸಾಧು ಶ್ರೀನಾಥ್​

Updated on: Jan 04, 2021 | 12:20 PM

ಟೋಲ್ ಹಣ ಪಾವತಿಸುವಂತೆ ಕೇಳಿದ್ದಕ್ಕೆ ಕಾರಿನಲ್ಲಿ ಬಂದಿದ್ದ 7 ಜನರ ಗುಂಪು ಏಕಾಏಕಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಟೋಲ್ ಕೇಳಿದ್ದಕ್ಕೆ ಗಲಾಟೆ ಶುರು.. ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿ ಎಸ್ಕೇಪ್
ಟೋಲ್ ಕೇಳಿದ್ದಕ್ಕೆ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿತ
Follow us on

ಮಂಗಳೂರು: ಟೋಲ್ ಕೇಳಿದ್ದಕ್ಕೆ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ಮಂಗಳೂರು ಹೊರವಲಯದ ಸುರತ್ಕಲ್​ನಲ್ಲಿರೋ ಟೋಲ್‌ನಲ್ಲಿ ನಡೆದಿದೆ. ಭಟ್ಕಳ ನೋಂದಣಿಯ ಕಾರಿನಲ್ಲಿ ಬಂದಿದ್ದ 7 ಜನರು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಟೋಲ್ ಹಣ ಕೇಳಿದ್ದೇ ತಪ್ಪಾಯ್ತಾ?
ಟೋಲ್ ಬಳಿ ಬಂದಾಗ ಪ್ರತಿಯೊಬ್ಬರೂ ಹಣ ಪಾವತಿಸಲೇ ಬೇಕು. ಇದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ರೆ ಇಲ್ಲಿ ಟೋಲ್ ಹಣ ಪಾವತಿಸುವಂತೆ ಕೇಳಿದ್ದಕ್ಕೆ ಕಾರಿನಲ್ಲಿ ಬಂದಿದ್ದ 7 ಜನರ ಗುಂಪು ಏಕಾಏಕಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಸಿಬ್ದಂದಿ ಕೈ ಮುರಿದುಕೊಂಡಿದ್ದಾನೆ.

ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಗೂ ಟೋಲ್ ಸಿಬ್ಬಂದಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭವಾಗಿದೆ. ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಹಣ ಕೊಡೋಕೆ ಆಗದೆ ಸೀನ್ ಕ್ರಿಯೇಟ್ ಮಾಡಿ ಗಲಾಟೆ ಮಾಡಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ನೆಲಮಂಗಲ: ಲಾರಿ ಹರಿದು ಟೋಲ್ ಸಿಬ್ಬಂದಿ ಸಾವು, ಚಾಲಕ ಪೊಲೀಸರ ವಶಕ್ಕೆ