ಕಾರಿನಲ್ಲಿ ಮಲಗಿದ್ದ ಪ್ರಾಧ್ಯಾಪಕ ಸುಲಿಗೆ ಮಾಡಿ ಕಾರು ಸಮೇತ ಎಸ್ಕೇಪ್ ಆದ ಖದೀಮರು
ಕಾರನ್ನು ನಿಲ್ಲಿಸಿ ಮಲಗಿದ್ದ ಪ್ರಾಧ್ಯಾಪಕ ರಮೇಶ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸುಲಿಗೆ ಮಾಡಿದ್ದಾರೆ. ರಮೇಶ್ರನ್ನು ಬೆದರಿಸಿ ಅವರ ಬಳಿಯಿದ್ದ ಡೆಬಿಟ್ ಕಾರ್ಡ್, ಮೊಬೈಲ್ ಕಸಿದು ಬಳಿಕ ಕಾರಿನಿಂದ ರಮೇಶ್ರನ್ನು ಇಳಿಸಿ ಕಾರು ಸಮೇತ ಪರಾರಿಯಾಗಿದ್ದಾರೆ.
ಮೈಸೂರು: ವ್ಯಕ್ತಿಯನ್ನು ಬೆದರಿಸಿ ಸುಲಿಗೆ ಮಾಡಿ ಕಾರಿನ ಸಮೇತ ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹಳ್ಳದ ಮನುಗನಹಳ್ಳಿ ಗೇಟ್ ಬಳಿ ನಡೆದಿದೆ.
ಕಾರನ್ನು ನಿಲ್ಲಿಸಿ ಮಲಗಿದ್ದ ಪ್ರಾಧ್ಯಾಪಕ ರಮೇಶ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸುಲಿಗೆ ಮಾಡಿದ್ದಾರೆ. ರಮೇಶ್ರನ್ನು ಬೆದರಿಸಿ ಅವರ ಬಳಿಯಿದ್ದ ಡೆಬಿಟ್ ಕಾರ್ಡ್, ಮೊಬೈಲ್ ಕಸಿದು ಬಳಿಕ ಕಾರಿನಿಂದ ರಮೇಶ್ರನ್ನು ಇಳಿಸಿ ಕಾರು ಸಮೇತ ಪರಾರಿಯಾಗಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಂಗಳೂರಿನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ರಮೇಶ್, ಸಂಬಂಧಿಯನ್ನು ದೊಡ್ಡಮಾರ ಗೌಡನಹಳ್ಳಿಗೆ ಬಿಡಲು ಬಂದಿದ್ದರು. ವಾಪಸ್ಸು ತೆರಳುವ ದಾರಿಯಲ್ಲಿ ನಿದ್ದೆ ಬಂದ ಕಾರಣ ಕಾರು ನಿಲ್ಲಿಸಿ ಕೆಲ ಸಮಯ ವಿಶ್ರಾಂತಿ ಪಡೆಯಲು ಮಲಗಿದ್ದರು. ಈ ವೇಳೆ ರಮೇಶ್‌ರನ್ನು ಸುಳಿಗೆ ಮಾಡಿ ಕಾರಿನಿಂದ ಕೆಳಗಿಳಿಸಿ ಕಾರು ಸಮೇತ ಖದೀಮರು ಪರಾರಿಯಾಗಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿದೇಶಕ್ಕೆ ಹಾರಲಿದ್ದ 6 ಕೋಟಿ ರೂಪಾಯಿ ಮೌಲ್ಯದ ರಕ್ತ ಚಂದನ ಬೆಂಗಳೂರು ಏರ್ಪೋರ್ಟ್ನಲ್ಲಿ ವಶಕ್ಕೆ
Published On - 10:50 am, Fri, 30 July 21