ರಾಜ್ಯದಲ್ಲಿ ನಾವೇ ಮಂತ್ರಿಗಿರಿ ಕೊಡೋ ಯೋಗ ಬರಲಿದೆ -ಸಿಎಂ BSYಗೆ ಮತ್ತೆ ಟಾಂಗ್ ಕೊಟ್ಟ ಯತ್ನಾಳ್
ನಾನು ಏನೆಂಬುದು ದೆಹಲಿ ಹೈಕಮಾಂಡ್‌ಗೆ ಗೊತ್ತಿದೆ. ರಾಜ್ಯದಲ್ಲಿ ನಾವೇ ಮಂತ್ರಿಗಿರಿ ಕೊಡುವ ಯೋಗ ಬರಲಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದರು.
ಚಿತ್ರದುರ್ಗ: ಯುಗಾದಿ ಒಳಗೆ ಉತ್ತರ ಕರ್ನಾಟಕದವರೇ ಸಿಎಂ ಆಗ್ತಾರೆ. ಬಿಜೆಪಿ ಹೈಕಮಾಂಡ್ ಈ ಬಗ್ಗೆ ತೀರ್ಮಾನಿಸಲಿದೆ ಎಂದು ಜಿಲ್ಲೆಯಲ್ಲಿ BJP ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಹೇಳಿದ್ದಾರೆ.
ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದ ಯತ್ನಾಳ್ ಯಾರು ಸಿಎಂ ಆಗ್ತಾರೆಂಬುದು ಗೊತ್ತಿಲ್ಲ. ಆದರೆ, ಉತ್ತರ ಕರ್ನಾಟಕದವರು ಸಿಎಂ ಆಗುವ ಕಾಲ ಸನ್ನಿಹಿತವಾಗಿದೆ. ರಾಜ್ಯದಲ್ಲಿ ಎರಡನೇ ಹಂತದ ನಾಯಕತ್ವದ ಯುಗಾರಂಭವಾಗಿದೆ ಎಂದು ಹೇಳಿದರು.
ರಾಜ್ಯಕ್ಕೆ ಪ್ರಾಮಾಣಿಕ, ಹಿಂದುತ್ವ ಪರವಿರುವ ವ್ಯಕ್ತಿ ಬೇಕಿದೆ. ಯಾವುದೇ ಕಾರಣಕ್ಕೂ BSY ಸಂಪುಟದಲ್ಲಿ ಸಚಿವನಾಗಲ್ಲ. ನಾನು ಮಠಾಧೀಶರ ಕಾಲು ಹಿಡಿದಿಲ್ಲ, ಲಾಬಿ ಮಾಡಿಲ್ಲ. ಕೆಲವರು ಏನೇನೋ ಲಾಬಿ ಮಾಡಿ ಸಚಿವರಾಗಿದ್ದಾರೆ ಎಂದು ಹೇಳಿದರು.
ನನಗೆ ಡಿನ್ನರ್ ಪಾರ್ಟಿ ಬೇಡ, ಸಭೆ ಕರೆಯಲು ಒತ್ತಾಯಿಸಿದ್ದೇವೆ. ಶಾಸಕಾಂಗ ಪಕ್ಷದ ಸಭೆ ಕರೆಯಲು ಸಿಎಂಗೆ ಆಗ್ರಹಿಸಿದ್ದೇವೆ. ಡಿಕೆಶಿ, ಸಿದ್ದರಾಮಯ್ಯ, ಜಮೀರ್, ಜಾರ್ಜ್ ಕ್ಷೇತ್ರಕ್ಕೆ ಹಣ ಕೊಟ್ಟಿದ್ದಾರೆ. ಬಿಜೆಪಿ ಶಾಸಕರಿಗೂ ಸಿಎಂ ಹೆಚ್ಚಿನ ಅನುದಾನ ನೀಡಬೇಕು ಎಂದು ಯತ್ನಾಳ್ ಹೇಳಿದರು.
ಸಿಎಂ ಊಟ, ತಿಂಡಿ ಮಾಡಿಸುವುದರಿಂದ ಬೇಡಿಕೆ ಈಡೇರಲ್ಲ. ನಮ್ಮ ಬೇಡಿಕೆ ಈಡೇರಲ್ಲವೆಂದು ಸಿಎಂಗೆ ಯತ್ನಾಳ್ ಟಾಂಗ್ ಕೊಟ್ಟರು. ನಾವು ಪಕ್ಷದಲ್ಲಿದ್ರೂ ಗೆಲ್ತೀವಿ, ಹೊರ ಹಾಕಿದ್ರೂ ಗೆಲ್ತೀವಿ. ಪಕ್ಷೇತರನಾಗಿ ವಿಧಾನಪರಿಷತ್‌ಗೆ ನಾನು ಗೆದ್ದು ಬಂದಿದ್ದೇನೆ. ನಾವು ಶಾಸಕರು, ಸಂಸದರು ಹೇಗೆ ಆಗಬೇಕೆಂದು ಗೊತ್ತಿದೆ ಎಂದು ಹೇಳಿದರು.
ದೆಹಲಿಗೆ ಹೋಗಿ ಯಾರು ಏನು ಹೇಳಿದರೂ ಏನೂ ಆಗಲ್ಲ. ನಾನು ಏನೆಂಬುದು ದೆಹಲಿ ಹೈಕಮಾಂಡ್‌ಗೆ ಗೊತ್ತಿದೆ. ರಾಜ್ಯದಲ್ಲಿ ನಾವೇ ಮಂತ್ರಿಗಿರಿ ಕೊಡುವ ಯೋಗ ಬರಲಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದರು.
ನಾಡಿನ ಜನತೆಗೆ ಅನಾನುಕೂಲವಾದ್ರೆ ಕಾಯ್ದೆಗೆ ಬೆಂಬಲವಿಲ್ಲ -ಗೋಹತ್ಯೆ ನಿಷೇಧಕ್ಕೆ HDK ಪರೋಕ್ಷ ವಿರೋಧ