ಆರ್‌ಆರ್‌ಆರ್, ನಿರ್ದೇಶಕ ರಾಜಮೌಳಿ ಆ್ಯಕ್ಷನ್ ಕಟ್ ಹೇಳ್ತಿರೋ ಸಿನಿಮಾ. ಕೋಮರಂ ಭೀಮ್ ಪಾತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ಹಾಗೆಯೇ ಅಲ್ಲುರಿ ಸೀತಾರಾಮ್ ಪಾತ್ರದಲ್ಲಿ ರಾಮ್ ಚರಣ್ ತೇಜಾ ನಟಿಸಿ ಕಮಾಲ್ ಮಾಡ್ತಿರೋದು ಒಂದೆಡೆಯಾದ್ರೆ ಸಿನಿಮಾ ಕುರಿತ ಲೇಟೆಸ್ಟ್ ಅಪ್‌ಡೇಟ್ ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟುಹಾಕಿದೆ.
ತೆರೆಮೇಲೆ ಅದ್ಭುತ ದೃಶ್ಯ ವೈಭವ:
ರಾಜಮೌಳಿ ಆ್ಯಕ್ಷನ್ ಕಟ್ ಹೇಳ್ತಿರೋ ಆರ್‌ಆರ್‌ಆರ್ ಸಿನಿಮಾ ಬರೋಬ್ಬರಿ 10 ಭಾಷೆಯಲ್ಲಿ ರಿಲೀಸ್ ಆಗಲಿದೆ ಅನ್ನೋ ಮಾಹಿತಿ ಇದೆ. ಹೀಗಾಗಿ ಸದ್ಯ ಹಿಂದಿ ಭಾಷೆಯ ಸಿನಿಮಾದಲ್ಲಿ ನಾಯಕರನ್ನ ಪರಿಚಯಿಸೋ ಕೆಲ್ಸಕ್ಕೆ ಆಮೀರ್ ಖಾನ್ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಈಗಾಗ್ಲೇ ಬಾಲಿವುಡ್ ನಟ ಅಜೇಯ್ ದೇವಗನ್ ಹಾಗೂ ಆಲಿಯಾ ಭಟ್ ನಟಿಸ್ತಿದ್ದಾರೆ. ಈಗ ಆಮೀರ್ ಖಾನ್ ಕೂಡ ಆರ್‌ಆರ್‌ಆರ್ ತಂಡ ಸೇರಿದ್ದಾರೆ. ಇದೆಲ್ಲಾ ಮಾಹಿತಿ ಒಂದು ಕಡೆಯಾದ್ರೆ ಸದ್ಯ ಸಿನಿಮಾದ ಗ್ರಾಫಿಕ್ಸ್‌ಗಾಗಿ ಚಿತ್ರತಂಡ ಖರ್ಚು ಮಾಡ್ತಿರೋ ಮೊತ್ತ ಎಲ್ಲರನ್ನೂ ಬೆರಗುಗೊಳಿಸಲಿದ್ಯಂತೆ. ಆದ್ರೆ, ಇದ್ರ ಪರಿಣಾಮ ತೆರೆಮೇಲೆ ಒಂದು ಅದ್ಭುತ ದೃಶ್ಯ ವೈಭವ ಕಟ್ಟಿಕೊಡೋಕೆ ತಯಾರಾಗಿದೆ ಆರ್‌ಆರ್‌ಆರ್ ತಂಡ.
ಈಗಾಗ್ಲೇ ಆರ್‌ಆರ್‌ಆರ್ ಸಿನಿಮಾವನ್ನ ಬರೋಬ್ಬರಿ 400 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡ್ತಿದೆ ಚಿತ್ರತಂಡ. ವಿಶೇಷ ಅಂದ್ರೆ ಆರ್‌ಆರ್‌ಆರ್ ಸಿನಿಮಾದ ಶೂಟಿಂಗ್ ಗಿಂತ ಗ್ರಾಫಿಕ್ಸ್‌ಗೇ ಅತಿಹೆಚ್ಚು ಹಣ ಖರ್ಚಾಗಲಿದ್ಯಂತೆ. ಸದ್ಯ ಈ ಸುದ್ದಿ ಭಾರಿ ಸಂಚಲನ ಸೃಷ್ಟಿಸಿದೆ. ಮೊದಲೇ ರಾಜಮೌಳಿ ತಮ್ಮ ಕಲ್ಪನೆಯಂತೆ ಕೆತ್ತಿರೋ ಕಥೆ ಅಚ್ಚುಕಟ್ಟಾಗಿ ತೆರೆ ಮೇಲೆ ಮೂಡೋಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳೋ ನಿರ್ದೇಶಕ. ಹೀಗಾಗಿ ಈಗ ಗ್ರಾಫಿಕ್ಸ್ ವಿಚಾರವಾಗಿ ಸಿನಿಮಾ ಮೇಲಿನಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಒಟ್ಟಿನಲ್ಲಿ ಆರ್‌ಆರ್‌ಆರ್ ಐತಿಹಾಸಿಕ ಸಿನಿಮಾಗಾಗಿ ನುರಿತ ತಂತ್ರಜ್ಞರ ತಂಡ ಕೆಲಸ ಮಾಡ್ತಿದೆ. ಆದ್ರೆ ಗ್ರಾಫಿಕ್ಸ್‌ಗಾಗಿ ಸುರೀತಿರೋ ಹಣ ಎಷ್ಟು ಅನ್ನೋದನ್ನ ಮಾತ್ರ ಚಿತ್ರತಂಡ ರಿವೀಲ್ ಮಾಡಿಲ್ಲ.