ಭಿಕ್ಷೆ ಬೇಡುತ್ತಿದ್ದ ವಿಶೇಷಚೇತನ ತಾಯಿ-ಮಗನಿಗೆ ಕ್ರೇನ್ ಡಿಕ್ಕಿ, ಇಬ್ಬರೂ ಸ್ಥಳದಲ್ಲೇ ಸಾವು
ಭಿಕ್ಷೆ ಬೇಡುತ್ತಿದ್ದ ಅಂಗವಿಕಲ ತಾಯಿ ಮತ್ತು ಮಗವಿಗೆ ಕ್ರೇನ್ ಡಿಕ್ಕಿಯಾಗಿ ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಳಿ ನಡೆದಿದೆ.
ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಭಿಕ್ಷೆ ಬೇಡುತ್ತಿದ್ದ ಅಂಗವಿಕಲ ತಾಯಿ ಮತ್ತು ಮಗವಿಗೆ ಕ್ರೇನ್ ಡಿಕ್ಕಿಯಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದೃಶ್ಯ ನೋಡಲು ಭೀಭತ್ಸವಾಗಿದ್ದು 40 ವರ್ಷದ ಮಹಿಳೆ ಮತ್ತು 10 ವರ್ಷದ ಮಗನ ತಲೆ ಹೊಡೆದು ಹೋಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮ ಇಂತಹದೊಂದು ಭಯಾನಕ ಘಟನೆಗೆ ಸಾಕ್ಷಿಯಾಗಿದೆ. ಚನ್ನಗಿರಿಯಿಂದ ನಲ್ಲೂರಿಗೆ ಬರುತ್ತಿದ್ದ ಕ್ರೇನ್, ವೀಲ್ ಚೇರ್ನಲ್ಲಿ ರಸ್ತೆ ಬದಿ ಭಿಕ್ಷೆ ಬೇಡುತ್ತಿದ್ದ ಅಂಗವಿಕಲ ತಾಯಿ, ಮಗನ ಮೇಲೆ ಏಕಾಏಕಿ ನುಗ್ಗಿದೆ. ಇಬ್ಬರೂ ಶೀವನ ಪಾದ ಸೇರಿದ್ದು ಮೃತರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BJP ಮುಖಂಡನ ಸ್ಕಾರ್ಪಿಯೋ ಗಾಡಿ ಬೈಕ್ಗೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು