ಉಡುಪಿ: ದೀಪಾವಳಿ ಪ್ರಯುಕ್ತ ಸಂಸದೆ ಶೋಭಾ ಕರಂದ್ಲಾಜೆ ನೀಡಿರುವ ಗಿಫ್ಟ್ಗೆ ಎಲ್ಲಾ ಪಕ್ಷಗಳ ರಾಷ್ಟ್ರಮಟ್ಟದ ಮಹಿಳಾ ರಾಜಕೀಯ ನಾಯಕಿರು ಫುಲ್ ಫಿದಾ ಆಗಿದ್ದಾರೆ. ಹೌದು, ಸಂಸದೆ ನೀಡಿರುವ ಭರ್ಜರಿ ದೀಪಾವಳಿ ಉಡುಗೊರೆ ಯಾವುದು ಗೊತ್ತಾ? ಸ್ಪೆಷಲ್ ಉಡುಪಿ ಸೀರೆ.
ಹೌದು, ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರಿಗೆ ಸ್ಪೆಷಲ್ ಉಡುಪಿ ಸೀರೆ ಗಿಫ್ಟ್ ಮಾಡಿದ್ದಾರೆ. ದೀಪಾವಳಿ ಪ್ರಯುಕ್ತ ಅಪ್ಪಟ ಕೈಮಗ್ಗದಿಂದ ನೇಯ್ದ ಉಡುಪಿ ಸೀರೆಯನ್ನು ಗಿಫ್ಟ್ ನೀಡಿದ್ದಾರೆ. ಸಂಸದೆ ಉಡುಗೊರೆಯಾಗಿ ಕೊಟ್ಟಿರುವ ಸೀರೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ.
ಸಚಿವೆ ಸ್ಮೃತಿ ಇರಾನಿ, ಮೇನಕಾ ಗಾಂಧಿ, ಕನಿಮೋಳಿ, ಶೆಫಾಲಿ ವೈದ್ಯ, ಮೀನಾಕ್ಷಿ ಲೇಖಿ ಹಾಗೂ ದೇಬಶ್ರೀಗೆ ಈ ಸ್ಪೆಷಲ್ ಗಿಫ್ಟ್ ಉಡುಗೊರೆ ತಲುಪಿದ್ದು ಇದೇ ‘ಉಡುಪಿ ಸೀರೆ’ ಬಗ್ಗೆ ಈಗ ಎಲ್ಲಾ ಕಡೆ ಚರ್ಚೆಯಾಗುತ್ತಿದೆ. ಸಂಸದೆಯ ಕಾರಣ ಇದೀಗ ಉಡುಪಿ ಕೈಮಗ್ಗದ ಸೀರೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಗಿಫ್ಟ್ ಪಡೆದ ಹಲವು ನಾಯಕಿಯರು ಈ ಬಗ್ಗೆ ತಮ್ಮ ಟ್ವೀಟ್ಟರ್ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಸೀರೆಯನ್ನು ಉಟ್ಟು, ಫೋಟೋ ಕ್ಲಿಕ್ಕಿಸಿ ಅದನ್ನು ಸಹ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಸಂಸದೆ ಶೋಭಾಗೆ ಥ್ಯಾಂಕ್ಸ್ ಸಹ ಹೇಳಿದ್ದಾರೆ. ಇವರ ಧನ್ಯವಾದಗಳಿಗೆಗೆ ಸ್ಪಂದಿಸಿರುವ ಸಂಸದೆ ಉಡುಪಿ ಶ್ರೀಕೃಷ್ಣನಿಗೂ ಇದೇ ಕೈಮಗ್ಗದ ಸೀರೆಯನ್ನು ತೊಡಿಸುತ್ತಾರೆ ಎಂದು ರೀಟ್ವೀಟ್ ಮಾಡಿದ್ದಾರೆ. ಜೊತೆಗೆ, ಎಲ್ಲರೂ ಕೈಮಗ್ಗ ಬಳಸೋಣ, ಆತ್ಮ ನಿರ್ಭರ ಭಾರತ ನಿರ್ಮಾಣ ಮಾಡೋಣ ಎಂದು ಸಹ ಹೇಳಿದ್ದಾರೆ.
OMG! I just got a lovely Udupi Saree from the lovely @ShobhaBJP ji❤️
*Udupi Saree is woven by rural weavers in the coastal district of Udupi in Karnataka😍
PS: I’m quite kicked package said ‘Amrita Bhinder Ji’. Fancy me 😋 😎
PPS: gift box🎁reads ‘She is Power’
Thanks🤩Ma’am! pic.twitter.com/ERPxVW3RkI
— Amrita Bhinder (@amritabhinder) November 16, 2020
Happy that you liked it!
Even Udupi Krishna is seen wearing this #UdupiSaree as he worshiped in the form of Goddess Laxmi on Fridays!
Adamaru Swami Sri Eeshapriya Theertha is been very vocal about reviving these tradition!
Let's support our craftsman!#Vocal4Local @smritiirani https://t.co/NcxuJGqV8W
— Shobha Karandlaje (@ShobhaBJP) November 17, 2020