ಪಿಲೇಕೆಮ್ಮಾ.. ಕೆಟ್ಟ ಕೊರೊನಾದಿಂದ ನಮ್ಮನ್ನು ಕಾಪಾಡಮ್ಮ!

ಸಾಧು ಶ್ರೀನಾಥ್​

|

Updated on:May 20, 2020 | 7:18 PM

ಇಂದು ಇಡೀ ಜಗತ್ತು ಮಹಾಮಾರಿ ಕೊರೊನಾದಿಂದ ತತ್ತರಿಸುತ್ತಿದೆ. ಇದಕ್ಕೆ ನಮ್ಮ ದೇಶ ರಾಜ್ಯ ಹೊರತಾಗಿಲ್ಲಾ. ಕಣ್ಣಿಗೆ ಕಾಣಿಸದ ವೈರಸ್ ನಿಂದ ಜನರು ತತ್ತರಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾ ಗುಣಪಡಿಸುವ ಔಷಧಿಯನ್ನು ಇನ್ನೂ ಕಂಡು ಹಿಡಿದಿಲ್ಲ. ಸಾಮಾಜಿಕ ಅಂತರ ಕಾಪಾಡುವುದೇ ಒಂದು ಉತ್ತಮ ಔಷಧಿಯಾಗಿದೆ. ಇದರ ಜೊತೆಗೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಜನರು ಕೊರೊನಾದಿಂದ ಕಾಪಾಡಮ್ಮಾ ಎಂದು ಪಿಲೇಕೆಮ್ಮನಿಗೆ ಮೊರೆ ಹೋಗಿದ್ದಾರೆ. ಮುದ್ದೇಬಿಹಾಳದಿಂದ ತಂಗಡಗಿಗೆ ತರೆಳುವ ರಸ್ತೆಯಲ್ಲಿ ಈ ಪಿಲೇಕೆಮ್ಮ ದೇವಸ್ಥಾನವಿದೆ. ಶತನಾಮಾನದ ಐತಿಹ್ಯ […]

ಪಿಲೇಕೆಮ್ಮಾ.. ಕೆಟ್ಟ ಕೊರೊನಾದಿಂದ ನಮ್ಮನ್ನು ಕಾಪಾಡಮ್ಮ!

ಇಂದು ಇಡೀ ಜಗತ್ತು ಮಹಾಮಾರಿ ಕೊರೊನಾದಿಂದ ತತ್ತರಿಸುತ್ತಿದೆ. ಇದಕ್ಕೆ ನಮ್ಮ ದೇಶ ರಾಜ್ಯ ಹೊರತಾಗಿಲ್ಲಾ. ಕಣ್ಣಿಗೆ ಕಾಣಿಸದ ವೈರಸ್ ನಿಂದ ಜನರು ತತ್ತರಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾ ಗುಣಪಡಿಸುವ ಔಷಧಿಯನ್ನು ಇನ್ನೂ ಕಂಡು ಹಿಡಿದಿಲ್ಲ. ಸಾಮಾಜಿಕ ಅಂತರ ಕಾಪಾಡುವುದೇ ಒಂದು ಉತ್ತಮ ಔಷಧಿಯಾಗಿದೆ. ಇದರ ಜೊತೆಗೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಜನರು ಕೊರೊನಾದಿಂದ ಕಾಪಾಡಮ್ಮಾ ಎಂದು ಪಿಲೇಕೆಮ್ಮನಿಗೆ ಮೊರೆ ಹೋಗಿದ್ದಾರೆ. ಮುದ್ದೇಬಿಹಾಳದಿಂದ ತಂಗಡಗಿಗೆ ತರೆಳುವ ರಸ್ತೆಯಲ್ಲಿ ಈ ಪಿಲೇಕೆಮ್ಮ ದೇವಸ್ಥಾನವಿದೆ. ಶತನಾಮಾನದ ಐತಿಹ್ಯ ಹೊಂದಿರುವ ಪಿಲೇಕೆಮ್ಮ ದೇವಸ್ಥಾನಕ್ಕೆ ನಿತ್ಯ ಪಟ್ಟಣದ ಜನರು ಕೈಮುಗಿದು ಕೊರೊನಾದಿಂದ ಕಾಪಾಡಮ್ಮಾ ಪಿಲೇಕೆಮ್ಮಾ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.

ಮುದ್ದೇಬಿಹಾಳ ಪಟ್ಟಣದ ಹಿರಿಯ ತಲೆಗಳು ಹೇಳುವಂತೆ.. ಅರೇ! ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮಾಡಿದರೆ ಕೊರೊನಾ ವಾಸಿಯಾಗುತ್ತಾ? ಕೊರೊನಾ ಹತ್ತಿರ ಸುಳಿಯಲ್ವಾ? ಎಂದು ನೀವು ಪ್ರಶ್ನಿಸಬಹುದು. ಆದ್ರೆ.. ಈ ದೇವಸ್ಥಾನಕ್ಕೂ ಸಾಂಕ್ರಾಮಿಕ ರೋಗಕ್ಕೂ ಸಂಬಂಧವಿದೆ. ಮುದ್ದೇಬಿಹಾಳ ಪಟ್ಟಣದ ಹಿರಿಯ ತಲೆಗಳು ಹೇಳುವಂತೆ. ಈ ಹಿಂದೆ ಪ್ಲೇಗ್ ಮಹಾಮಾರಿ ರೋಗ ಬಂದಾಗ ಇಲ್ಲಿನ ಜನರನ್ನು ಪಿಲೇಕೆಮ್ಮ ದೇವಿಯೇ ರಕ್ಷಣೆ ಮಾಡಿದ್ದಳಂತೆ! ಪ್ಲೇಗ್ ಹರಡದಂತೆ ತಡೆದಿದ್ದಳಂತೆ. ಶತಮಾನದ ಐತಿಹ್ಯವನ್ನು ಹೊಂದಿರುವ ಪಿಲೇಕೆಮ್ಮ ದೇವಸ್ಥಾನ ನಿರ್ಮಾಣವಾಗಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ.

ಅದು 1918 ರ ಸಮಯವಂತೆ. ಈಗಿನ ಮುದ್ದೇಬಿಹಾಳ ಪಟ್ಟಣ ಆಗ ಒಂದು ಪುಟ್ಟ ಗ್ರಾಮದಷ್ಟಿತ್ತಂತೆ. ಆಗಿನ ಕಾಲದಲ್ಲಿ ಪ್ಲೇಗ್ ಹರಡಿ ಇಡೀ ಗ್ರಾಮಕ್ಕೆ ಗ್ರಾಮಗಳೇ ಸರ್ವನಾಶವಾಗಿ ಎಲ್ಲರೂ ಮೃತಪಡುತ್ತಿದ್ದರು. ಇಂಥ ಸಮಯದಲ್ಲಿಯೇ ಮುದ್ದೇಬಿಹಾಳದಲ್ಲಿಯೂ ಪ್ಲೇಗ್ ಹರಿಡಿತ್ತಂತೆ. ಅಲ್ಲಿ ಜನರು ಮೃತಪಡಲು ಆರಂಭವಾಗುತ್ತಿದ್ದಂತೆ ಜನರು ಮುದ್ದೇಬಿಹಾಳ ಬಿಟ್ಟು ದೂರದಲ್ಲಿ ಬಂದು ವಾಸ ಮಾಡಲು ಆರಂಭಿಸಿದ್ದರಂತೆ. ಆಗಲೂ ಪ್ಲೇಗ್ ಆ ಜನರನ್ನು ಕಾಡಿತ್ತಂತೆ. ಆಗ ಓರ್ವ ಮಹಿಳೆಯ ಕನಸಿನಲ್ಲಿ ದೇವಿಯೊಬ್ಬಳು ಬಂದು ನನಗೆ ದೇವಸ್ಥಾನ ಕಟ್ಟಿಸಿ ಪೂಜೆ ಮಾಡಿ ಪ್ಲೇಗ್ ರೋಗವನ್ನು ತಡೆಯುತ್ತೇನೆ. ನಿಮ್ಮನ್ನು ರಕ್ಷಣೆ ಮಾಡುತ್ತೇನೆಂದು ಹೇಳಿದಳಂತೆ.

ಅದರಂತೆ ಆಗಿನ ಜನರು ದೇವಿಯ ದೇವಸ್ಥಾನ ಕಟ್ಟಿಸಿ, ಒಂದು ಕಲ್ಲನ್ನೇ ದೇವಿಯ ಮೂರ್ತಿಯನ್ನಾಗಿ ಮಾಡಿ ಪೂಜಿಸಿದಂತೆ. ಆಗ ಪ್ಲೇಗ್ ರೋಗ ಹರಡಲಿಲ್ಲವಂತೆ. ಪ್ಲೇಗ್ ವಾಸಿಯಾಗಿ ಎಲ್ಲರೂ ಆರೋಗ್ಯವಂತರಾದಂತೆ. ಅಂದಿನಿಂದ ಜನರು ಈ ದೇವಸ್ಥಾನವನ್ನು ಪ್ಲೇಗಮ್ಮ ದೇವಸ್ಥಾನವೆಂದು ಕರೆಯಲು ಆರಂಭಿಸಿದರಂತೆ. ಆಗಿನಿಂದ ಪ್ಲೇಗಮ್ಮ ದೇವಿಯ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಿಕೊಂಡು ಬಂದರಂತೆ. ಪ್ಲೇಗ್ ರೋಗದಿಂದ ರಕ್ಷಿಸಿದ ದೇವರೆಂದು ಪ್ರಸಿದ್ದಿ ಪಡೆದಿತ್ತಂತೆ ಈ ದೇವಸ್ಥಾನ. ಕಾಲಾನಂತರ ಪ್ಲೇಗಮ್ಮ ದೇವಸ್ಥಾನ ಹೆಸರಿನ ಬದಲಾಗಿ ಪಿಲೇಕಮ್ಮ ದೇವಸ್ಥಾನವಾಗಿದೆ ಎಂದು ಪಟ್ಟಣದ ಹಿರಿಯರು ನೆನಪಿಸಿಕೊಂಡು ಹೇಳುತ್ತಾರೆ.

ಸಂಪ್ರಯದಾಯ ಮುಂದುವರೆದುಕೊಂಡು ಬಂದಿದೆ ಕಾಲ ಬದಲಾಗುತ್ತಾ ಗ್ರಾಮ ಹೋಗಿ ಇದೀಗಾ ಮುದ್ದೇಬಿಹಾಳ ಪಟ್ಟಣವಾಗಿದೆ. ಪಟ್ಟಣದಿಂದ ತಂಗಡಿಗೆ ತೆರಳುವ ಮಾರ್ಗದಲ್ಲಿರುವ ಪಿಲೇಕೆಮ್ಮ ದೇವಸ್ಥಾನದಲ್ಲಿ ಇಂದಿಗೂ ಜನರು ಭಕ್ತಿಯಿಂದಲೇ ಪ್ರಾರ್ಥನೆ ಮಾಡುತ್ತಾರೆ. ಮುದ್ದೇಬಿಹಾಳ ಪಟ್ಟಣದಲ್ಲಿ ಯಾವುದೇ ಜಾತ್ರೆ, ಹಬ್ಬ ನಡೆದರೂ ಮೊದಲು ಪಿಲೇಕೆಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ಸಂಪ್ರಯದಾಯ ಮುಂದುವರೆದುಕೊಂಡು ಬಂದಿದೆ.

ಸದ್ಯ ಕೊರೊನಾ ಹಾವಳಿ ಮಿತಿ ಮೀರಿದೆ. ವಿಜಯಪುರ ಜಿಲ್ಲೆಯಲ್ಲಿಯೂ ಪಾಸಿಟಿವ್ ಪ್ರಕರಣಗಳಿಗೆ ಬ್ರೇಕ್ ಬೀಳುತ್ತಿಲ್ಲ. ಕಾರಣ ಮುದ್ದೇಬಿಹಾಳ ಪಟ್ಟಣದ ಜನರು ಕೊರೊನಾದಿಂದ ಕಾಪಾಡಮ್ಮಾ ಪಿಲೇಕೆಮ್ಮ ಎಂದು ಪೂಜಿಸಿ ಪ್ರಾರ್ಥನೆ ಮಾಡುತ್ತಿದ್ದಾರೆ. ಪ್ಲೇಗ್ ನಿಯಂತ್ರಿಸಿ ಎಲ್ಲರ ಕಾಪಾಡಿದ ಪಿಲೇಕೆಮ್ಮ ಕೊರೊನಾದಿಂದಲೂ ರಕ್ಷಣೆ ಮಾಡುತ್ತಾಳೆ ಎಂಬುದು ಜನರ ನಂಬಿಕೆಯಾಗಿದೆ.

ನಾವು ಚಿಕ್ಕವರಿದ್ದಾಗ ಪಿಲೇಕೆಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದೆವು.  ಪ್ಲೇಗ್ ಹರಡಿದಾಗ ಪಿಲೇಕೆಮ್ಮ ದೇವಿ ಪ್ಲೇಗ್ ಹರಡದಂತೆ ತಡೆದು ಎಲ್ಲರನ್ನು ಕಾಪಾಡಿದ್ದಳಂತೆ. ಈಗಾ ಕೊರೊನಾ ಭಯದಿಂದ ಜನ ಪಿಲೇಕೆಮ್ಮ ದೇವಿಯ ಮೊರೆ ಹೋಗುತ್ತಿದ್ದಾರೆ. -ಸಿದ್ದಪ್ಪ, ಮುದ್ದೇಬಿಹಾಳ ಪಟ್ಟಣದ ವಾಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada