AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಬಯಲಾಯ್ತು ನಿಗೂಢ ಶಬ್ದದ ಮೂಲ! ನಿಟ್ಟುಸಿರು ಬಿಟ್ಟ ಜನ

ಬೆಂಗಳೂರು: ಕಿಲ್ಲರ್ ಕೊರೊನಾ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಕಾಡ್ತಿದೆ. ಇದ್ರ ಬೆನ್ನಲ್ಲೇ ನಿನ್ನೆ ಕೇಳಿಬಂದ ನಿಗೂಢ ಶಬ್ದವೊಂದು ಜನರ ಆತಂಕವನ್ನ ಮತ್ತಷ್ಟು ಹೆಚ್ಚಿಸಿತ್ತು. ಮತ್ತೇನ್ ಅಪಾಯ ಕಾದಿದೆಯೋ ಅಂತಾ ಜನರು ಜೀವನಾ ಕೈಯಲ್ಲಿಡಿದು ಕೂತಿದ್ರು. ದಿನಪೂರ್ತಿ ಸೌಂಡ್ ಬಗ್ಗೆಯೇ ತಲೆಕೆಡಿಸಿಕೊಂಡಿದ್ರು. ಕೊನೆಗೂ ರಾತ್ರಿ ಎಲ್ಲರ ಗೊಂದಲಗಳಿಗೆ ರಕ್ಷಣಾ ಇಲಾಖೆ ಉತ್ತರ ಕೊಡ್ತು. ನಿಗೂಢ ಶಬ್ದಕ್ಕೆ ನಿನ್ನೆ ರಾಜಧಾನಿಗೆ ರಾಜಧಾನಿಯೇ ಪತರಗುಟ್ಟಿ ಹೋಗಿತ್ತು. ಶಬ್ದದ ಮೂಲ ತಿಳಿಯದೇ ಜನರು ಕಂಗೆಟ್ಟು ಹೋಗಿದ್ರು. ಕೊರೊನಾ ಅಟ್ಟಹಾಸದ ನಡ್ವೆ ಮತ್ತೇನ್ ಆತಂಕ ಕಾದಿದ್ಯೋ […]

ಕೊನೆಗೂ ಬಯಲಾಯ್ತು ನಿಗೂಢ ಶಬ್ದದ ಮೂಲ! ನಿಟ್ಟುಸಿರು ಬಿಟ್ಟ ಜನ
ಸಾಧು ಶ್ರೀನಾಥ್​
| Edited By: |

Updated on:May 21, 2020 | 3:53 PM

Share

ಬೆಂಗಳೂರು: ಕಿಲ್ಲರ್ ಕೊರೊನಾ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಕಾಡ್ತಿದೆ. ಇದ್ರ ಬೆನ್ನಲ್ಲೇ ನಿನ್ನೆ ಕೇಳಿಬಂದ ನಿಗೂಢ ಶಬ್ದವೊಂದು ಜನರ ಆತಂಕವನ್ನ ಮತ್ತಷ್ಟು ಹೆಚ್ಚಿಸಿತ್ತು. ಮತ್ತೇನ್ ಅಪಾಯ ಕಾದಿದೆಯೋ ಅಂತಾ ಜನರು ಜೀವನಾ ಕೈಯಲ್ಲಿಡಿದು ಕೂತಿದ್ರು. ದಿನಪೂರ್ತಿ ಸೌಂಡ್ ಬಗ್ಗೆಯೇ ತಲೆಕೆಡಿಸಿಕೊಂಡಿದ್ರು. ಕೊನೆಗೂ ರಾತ್ರಿ ಎಲ್ಲರ ಗೊಂದಲಗಳಿಗೆ ರಕ್ಷಣಾ ಇಲಾಖೆ ಉತ್ತರ ಕೊಡ್ತು.

ನಿಗೂಢ ಶಬ್ದಕ್ಕೆ ನಿನ್ನೆ ರಾಜಧಾನಿಗೆ ರಾಜಧಾನಿಯೇ ಪತರಗುಟ್ಟಿ ಹೋಗಿತ್ತು. ಶಬ್ದದ ಮೂಲ ತಿಳಿಯದೇ ಜನರು ಕಂಗೆಟ್ಟು ಹೋಗಿದ್ರು. ಕೊರೊನಾ ಅಟ್ಟಹಾಸದ ನಡ್ವೆ ಮತ್ತೇನ್ ಆತಂಕ ಕಾದಿದ್ಯೋ ಅಂತಾ ದಿಗ್ಭ್ರಾಂತರಾಗಿದ್ರು. ನಿನ್ನೆ ಮಟ ಮಟ ಮಧ್ಯಾಹ್ನ 1 ಗಂಟೆ 24 ನಿಮಿಷಕ್ಕೆ ಉಂಟಾದ ಶಬ್ದದಿಂದ ನಮಗೆ ಭೂಮಿಯೇ ಕಂಪಿಸಿದ ಅನುಭವ ಆಯ್ತು. ನಮ್ಮ ಮನೆ ಬಿರುಕು ಬಿಟ್ತು ಅಂತಾ ಆತಂಕಗೊಂಡ ಜನರ ಟಿವಿ9ಗೆ ಕರೆ ಮಾಡಿ ಮಾಹಿತಿ ನೀಡಿದ್ರು. ರಾಷ್ಟ್ರೀಯ ವಿಪತ್ತು ನಿರ್ವಹಣ ಸಂಸ್ಥೆಗೆ ದೂರವಾಣಿ ಕರೆಗಳು ಹೋಗಿದ್ವು. ಬೆಳಗ್ಗೆಯಿಂದ್ಲೂ ಟೆನ್ಷನ್​ನಲ್ಲೇ ಕಾಲ ಕಳೆದ ಜನರಿಗೆ ನಿದ್ದೆಜಾರೋ ಮುನ್ನ ನಿಗೂಢ ಶಬ್ಧಕ್ಕೆ ಕಾರಣ ಗೊತ್ತಾಗೇ ಬಿಡ್ತು.

ಸೂಪರ್​ಸಾನಿಕ್ ವಿಮಾನ ಪರೀಕ್ಷೆ ವೇಳೆ ಉಂಟಾದ ಶಬ್ದ! ಹೌದು, ನಿಗೂಢ ಶಬ್ದ ಕೇಳ್ತಿದ್ದಂತೆಯೇ, ಕೆಲವ್ರು ಭೂಕಂಪ ಅಂದ್ರೆ, ಇನ್ನು ಕೆಲವ್ರು ಸುಖೋಯ್ ಯುದ್ಧ ವಿಮಾನದ ವೇಳೆ ಉಂಟಾದ ಶಬ್ದ ಅಂದಿದ್ರು. ಈ ಎಲ್ಲಾ ಗೊಂದಲಗಳಿಗೆ ನಿನ್ನೆ ರಾತ್ರಿ ರಕ್ಷಣಾ ಇಲಾಖೆ ತೆರೆ ಎಳೀತು. ಸೂಪರ್​ಸಾನಿಕ್ ವಿಮಾನ ಪರೀಕ್ಷೆ ವೇಳೆ ಶಬ್ದ ಉಂಟಾಗಿದೆ ಅಂತಾ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ.

ಇನ್ನು ನಿನ್ನೆ ಬೆಂಗಳೂರಿನ ಜಯನಗರ, ಜೆಪಿನಗರ, ಮಾರತ್ತಳ್ಳಿ, ವೈಟ್‌ಫೀಲ್ಡ್, ಅಗರ, ಇಂದಿರಾನಗರ, ಕೋರಮಂಗಲ, ಮಂಗಮ್ಮನಪಾಳ್ಯ, ಹೀಗೆ ಎಲ್ಲ ಕಡೆ ದೊಡ್ಡ ಪ್ರಮಾಣದಲ್ಲಿ ಶಬ್ದ ಕೇಳಿಸಿತ್ತು. ಬಿಸಿ ಗಾಳಿಗೆ, ತಂಪು ಗಾಳಿ ಸ್ಪರ್ಶವಾದಾಗ ಗಾಳಿ ಸ್ಫೋಟದಿಂದ ಶಬ್ದ ಬರುತ್ತೆ ಅಂತಾ ವಿಜ್ಞಾನಿಗಳು ಹೇಳಿದ್ರೆ, ಪೊಲೀಸರು ಮಾತ್ರ ಸುಖೋಯ್-30 ಯುದ್ಧ ವಿಮಾನದತ್ತ ಬೊಟ್ಟು ಮಾಡಿ ತೋರಿಸಿದ್ರು. ಆದ್ರೆ ಇಂಡಿಯನ್ ಏರ್​ಫೋರ್ಸ್ ಮಾತ್ರ ಸೌಂಡ್ ಸುಖೋಯ್​ದಲ್ಲ ಅಂತಾ ಹೇಳಿತ್ತು.

ಒಟ್ನಲ್ಲಿ ನಿನ್ನೆ ಇಡೀ ದಿನ ಬೆಂಗಳೂರಿನ ಜನರನ್ನ ಚಿಂತೆಗೀಡು ಮಾಡಿದ್ದ ನಿಗೂಢ ಶಬ್ದದ ಪ್ರಹಸಕ್ಕೆ ಕೊನೆಗೂ ರಾತ್ರಿ ತೆರೆ ಬಿತ್ತು. ಇದ್ರಿಂದ ಸಿಟಿ ಮಂದಿ ನಿಟ್ಟುಸಿರು ಬಿಟ್ರು.

Published On - 7:01 am, Thu, 21 May 20