AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

EVM ಬಗ್ಗೆ DK ಸುರೇಶ್​ಗೆ ಅನುಮಾನ..! ಬಿಜೆಪಿ ಶಾಸಕ ಮುನಿರತ್ನ ಎತ್ತಿದರು ಮೂಲ ಪ್ರಶ್ನೆ

ಬೆಂಗಳೂರು: ಆರ್​.ಆರ್​.ನಗರ ಉಪಚುನಾವಣೆಯಲ್ಲಿ EVM ದುರ್ಬಳಕೆ ಆಗಿದೆ. ಅಷ್ಟೊಂದು ಮತಗಳ ಅಂತರದಿಂದ ಬಿಜೆಪಿ ಗೆದ್ದಿದ್ದು ಅನುಮಾನ ಮೂಡಿಸಿದೆ ಎಂದು ಹೇಳಿದ್ದ ಸಂಸದ ಡಿ.ಕೆ.ಸುರೇಶ್​ಗೆ ಬಿಜೆಪಿ ಶಾಸಕ ಮುನಿರತ್ನ ಟಾಂಗ್​ ಕೊಟ್ಟಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್​ 2.5 ಲಕ್ಷ ಮತಗಳ ಅಂತರದಿಂದ ಗೆದ್ದಾಗ EVM ಸಮಸ್ಯೆ ಆಗಿರಲಿಲ್ಲ. ಆದರೆ ಈಗ ನಾನು ಗೆದ್ದಾಗ EVM ಬಗ್ಗೆ ಸಂದೇಹ ಪಡುತ್ತಿದ್ದಾರೆ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ. ‘ಸಚಿವ ಸ್ಥಾನ ಕೊಡೋದು ಸಿಎಂಗೆ ಬಿಟ್ಟ ವಿಚಾರ’ ನಾನು ನಮ್ಮ ನಾಯಕರು […]

EVM ಬಗ್ಗೆ DK ಸುರೇಶ್​ಗೆ ಅನುಮಾನ..! ಬಿಜೆಪಿ ಶಾಸಕ ಮುನಿರತ್ನ ಎತ್ತಿದರು ಮೂಲ ಪ್ರಶ್ನೆ
KUSHAL V
| Edited By: |

Updated on:Nov 23, 2020 | 3:23 PM

Share

ಬೆಂಗಳೂರು: ಆರ್​.ಆರ್​.ನಗರ ಉಪಚುನಾವಣೆಯಲ್ಲಿ EVM ದುರ್ಬಳಕೆ ಆಗಿದೆ. ಅಷ್ಟೊಂದು ಮತಗಳ ಅಂತರದಿಂದ ಬಿಜೆಪಿ ಗೆದ್ದಿದ್ದು ಅನುಮಾನ ಮೂಡಿಸಿದೆ ಎಂದು ಹೇಳಿದ್ದ ಸಂಸದ ಡಿ.ಕೆ.ಸುರೇಶ್​ಗೆ ಬಿಜೆಪಿ ಶಾಸಕ ಮುನಿರತ್ನ ಟಾಂಗ್​ ಕೊಟ್ಟಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್​ 2.5 ಲಕ್ಷ ಮತಗಳ ಅಂತರದಿಂದ ಗೆದ್ದಾಗ EVM ಸಮಸ್ಯೆ ಆಗಿರಲಿಲ್ಲ. ಆದರೆ ಈಗ ನಾನು ಗೆದ್ದಾಗ EVM ಬಗ್ಗೆ ಸಂದೇಹ ಪಡುತ್ತಿದ್ದಾರೆ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ.

‘ಸಚಿವ ಸ್ಥಾನ ಕೊಡೋದು ಸಿಎಂಗೆ ಬಿಟ್ಟ ವಿಚಾರ’ ನಾನು ನಮ್ಮ ನಾಯಕರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಮುಖ್ಯಮಂತ್ರಿಯವರು ಕೊಡುವ ಖಾತೆಯನ್ನು ನಿಭಾಯಿಸುತ್ತೇನೆ. ಸಚಿವ ಸ್ಥಾನ ನೀಡುವುದು ಯಡಿಯೂರಪ್ಪನವರಿಗೆ ಬಿಟ್ಟ ವಿಚಾರ ಎಂದು ಆರ್.​ಆರ್.​ನಗರ ಶಾಸಕ ಮುನಿರತ್ನ ಸ್ಪಷ್ಟಪಡಿಸಿದರು. ಇನ್ನು, ತಮ್ಮ ಹಾಗೂ ಸೋಮಶೇಖರ್​, ಭೈರತಿ ಬಸವರಾಜು ನಡುವಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ SBM ಟೀಂ (ಸೋಮಶೇಖರ್​, ಭೈರತಿ ಬಸವರಾಜು, ಮುನಿರತ್ನ)ನಲ್ಲಿ ಯಾವುದೇ ಬಿರುಕು ಇಲ್ಲ. ಮೂವರೂ ಒಟ್ಟಿಗೇ ರಾಜೀನಾಮೆ ನೀಡಿದ್ದೇವೆ. ಈಗಲೂ ಒಟ್ಟಿಗೇ ಇದ್ದೇವೆ. ನಮ್ಮ SBM ಟೀಂನ ಲೋಗೋ ಎಂದರೆ ಅದು ಬಿಜೆಪಿ ಎಂದು ತಿಳಿಸಿದರು.

ಮುನಿರತ್ನ ಪ್ರಮಾಣ ವಚನ ಸ್ವೀಕಾರ ಆರ್​.ಆರ್.​ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಗೆದ್ದ ಮುನಿರತ್ನ ಮತ್ತು ರಾಜೇಶ್​ ಗೌಡ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮುನಿರತ್ನ ಅವರು ದೇವಿ ರಾಜರಾಜೇಶ್ವರಿ ಹೆಸರಲ್ಲಿ ಹಾಗೂ ರಾಜೇಶ್ ಗೌಡ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇವರಿಬ್ಬರಿಗೂ ವಿಧಾನಸಭಾ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮಾಣ ವಚನ ಬೋಧಿಸಿದರು.

Published On - 3:00 pm, Mon, 23 November 20

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್