AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

R.R. ನಗರ ಮಿನಿ ಕುರುಕ್ಷೇತ್ರ: ಮುನಿರತ್ನಗೆ ಭರ್ಜರಿ ಗೆಲುವು

ಬೆಂಗಳೂರು: ಇಡೀ ರಾಜ್ಯವೇ ಕುತೂಹಲದಿಂದ ನೋಡ್ತಿದ್ದ RR ನಗರ ಬೈಎಲೆಕ್ಷನ್ ರಿಸಲ್ಟ್​ ಹೊರ ಬಿದ್ದಿದೆ. ಎಕ್ಸಿಟ್ ಪೋಲ್ ಭವಿಷ್ಯದಂತೆ ರಾಜರಾಜೇಶ್ವರಿ ನಗರದಲ್ಲಿ ಕಮಲ ಅರಳಿದೆ. ಮಿನಿ ಕುರುಕ್ಷೇತ್ರದಲ್ಲಿ ಮುನಿರತ್ನ ಭರ್ಜರಿ ಮತಗಳಿಂದ ಕುಸುಮಾಳನ್ನ ಸೋಲಿಸಿದ್ದಾರೆ. ಆರ್.ಆರ್.ನಗರದಲ್ಲಿ ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವು ಸಿಕ್ಕಿದೆ. ಮುನಿರತ್ನಗೆ 57,672 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಒಟ್ಟು 25 ಸುತ್ತಿನ ಮತ ಎಣಿಕೆ ನಡೆದಿದ್ದು ಅದರಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 1,25,990 ಮತಗಳು ಲಭಿಸಿವೆ. ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 67,877 […]

R.R. ನಗರ ಮಿನಿ ಕುರುಕ್ಷೇತ್ರ: ಮುನಿರತ್ನಗೆ ಭರ್ಜರಿ ಗೆಲುವು
ಆಯೇಷಾ ಬಾನು
| Edited By: |

Updated on:Nov 10, 2020 | 5:12 PM

Share

ಬೆಂಗಳೂರು: ಇಡೀ ರಾಜ್ಯವೇ ಕುತೂಹಲದಿಂದ ನೋಡ್ತಿದ್ದ RR ನಗರ ಬೈಎಲೆಕ್ಷನ್ ರಿಸಲ್ಟ್​ ಹೊರ ಬಿದ್ದಿದೆ. ಎಕ್ಸಿಟ್ ಪೋಲ್ ಭವಿಷ್ಯದಂತೆ ರಾಜರಾಜೇಶ್ವರಿ ನಗರದಲ್ಲಿ ಕಮಲ ಅರಳಿದೆ. ಮಿನಿ ಕುರುಕ್ಷೇತ್ರದಲ್ಲಿ ಮುನಿರತ್ನ ಭರ್ಜರಿ ಮತಗಳಿಂದ ಕುಸುಮಾಳನ್ನ ಸೋಲಿಸಿದ್ದಾರೆ.

ಆರ್.ಆರ್.ನಗರದಲ್ಲಿ ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವು ಸಿಕ್ಕಿದೆ. ಮುನಿರತ್ನಗೆ 57,672 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಒಟ್ಟು 25 ಸುತ್ತಿನ ಮತ ಎಣಿಕೆ ನಡೆದಿದ್ದು ಅದರಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 1,25,990 ಮತಗಳು ಲಭಿಸಿವೆ. ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 67,877 ಮತಗಳು ಸಿಕ್ಕಿದ್ದು, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿಗೆ 10,269 ಮತಗಳು ಸಿಕ್ಕಿವೆ. ಹಾಗೂ 2495 ನೋಟಾ ಮತಗಳು ಚಲಾವಣೆಯಾಗಿವೆ.

ದಿನಕ್ಕೆ 22 ಗಂಟೆ ಕೆಲಸ ಮಾಡ್ತೀನಿ: ಇನ್ನು RR ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ತಮ್ಮ ಗೆಲುವಿನ ಸಂತಸವನ್ನು ಹಂಚಿಕೊಂಡಿದ್ದಾರೆ. ಕೈಮುಗಿದು ಹೇಳುತ್ತೇನೆ ಇಡೀ ಕ್ಷೇತ್ರ ಅಭಿವೃದ್ದಿ ಆಗಬೇಕು. ಇನ್ನಷ್ಟು ಅಭಿವೃದ್ದಿ ಮಾಡುವ ಗುರಿ ಇದೆ. ಸಿಎಂ ನನ್ನ ಮೇಲೆ ಇಟ್ಟಿರೋ ಭರವಸೆ ಉಳಿಸಿಕೊಳ್ತೀನಿ. ದಿನಕ್ಕೆ 22 ಗಂಟೆ ಕೆಲಸ ಮಾಡ್ತೀನಿ. ಕಳೆದ ಬಾರಿಗಿಂತ ಹೆಚ್ಚು ಲೀಡ್ ಬಂದಿದೆ. ಮತದಾರರು ನನ್ನ ಮೇಲೆ ಇಟ್ಟಿರೋ ನಂಬಿಕೆ, ಮತದಾರರ ಖಣ ತೀರಿಸಲು ಸಾಧ್ಯವಿಲ್ಲ ಎಂದು ಮತದಾರರಿಗೆ ಮುನಿರತ್ನ ಅಭಿನಂದನೆ ಸಲ್ಲಿಸಿದ್ದಾರೆ.

ಗೆಲುವಿಗೆ ಪಕ್ಷ, ಮುಖಂಡರು ಕಾರಣ. ಗೆಲುವನ್ನ ಪಕ್ಷದ ಮುಖಂಡರಿಗೆ ಅರ್ಪಣೆ ಮಾಡ್ತಿದ್ದೇನೆ. ಪ್ರತಿಸ್ಪರ್ಧಿಗೆ ಸತ್ಯ ಮಾತನಾಡುವಂತೆ ಮನವಿ ಮಾಡ್ತೀನಿ. ನಾನು ಬಳಸದ ಪದ ಹೇಳಿದ್ದೀನಿ ಅಂತ ಅವ್ರು ಹೇಳಿದ್ದಾರೆ. ನನ್ನ ಜೀವನದಲ್ಲಿ ನಾನು ಯಾವ ಹೆಣ್ಣು ಮಗಳಿಗೂ ಮುಂಡೆ ಅಂತ ಹೇಳಿಲ್ಲ. ಪ್ರಮಾಣ ಪತ್ರ ಪಡೆದು ಬಿಜೆಪಿ ಕಚೇರಿಗೆ ಹೋಗ್ತೀನಿ. ತದನಂತರ ಮುಖ್ಯಮಂತ್ರಿಗಳು ಹಾಗೂ ರಾಜ್ಯಾಧ್ಯಕ್ಷರನ್ನ ಭೇಟಿ ಮಾಡ್ತೀನಿ. ಸಚಿವ ಸ್ಥಾನ ನೀಡುವುದು ಸಿಎಂಗೆ ಬಿಟ್ಟಿದ್ದು. ನಾನು ಇಂಥ ಖಾತೆ ಬೇಕು ಎಂದು ಕೇಳೋದಿಲ್ಲ. ಎಲ್ಲವೂ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದ ಮುನಿರತ್ನ ಪ್ರತಿಕ್ರಿಯೆಸಿದ್ದಾರೆ.

ಇದನ್ನೂ ಓದಿ: ಶಿರಾದಲ್ಲಿ ಚೊಚ್ಚಲ ಜಯ ದಾಖಲಿಸಿಯೇ ಬಿಟ್ಟಿತು ಬಿಜೆಪಿ!

Published On - 2:39 pm, Tue, 10 November 20