ನಾನು ರಾಜಕೀಯ ಮಾಡಲು ದೆಹಲಿಗೆ ಹೋಗಿರಲಿಲ್ಲ: ವಿಜಯೇಂದ್ರ
ಬೆಂಗಳೂರು: ನನ್ನ ದೆಹಲಿ ಭೇಟಿಗೆ ರಾಜಕಾರಣದ ಬಣ್ಣ ಬಳಿಯುವುದು ಬೇಡ. ನಾನು ರಾಜಕೀಯ ಮಾಡಲು ದೆಹಲಿಗೆ ಹೋಗಿರಲಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಾನು ವೈಯಕ್ತಿಕ ಕಾರ್ಯದ ನಿಮಿತ್ತ ದೆಹಲಿಗೆ ಹೋಗಿದ್ದೆ. ಈ ಸಂದರ್ಭ ಯಾವುದೇ ನಾಯಕರನ್ನು ಭೇಟಿ ಮಾಡುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಮರಾಠ ನಿಗಮವನ್ನು ಸರ್ಕಾರ ಭಾಷೆಯ ಆಧಾರದ ಮೇಲೆ ರಚಿಸಿಲ್ಲ. ಮರಾಠಿಗರು ಕರ್ನಾಟಕದಲ್ಲಿ ಹಲವು ವರ್ಷಗಳಿಂದ ವಾಸಿವಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದು ಬಿಜೆಪಿಯ ಉದ್ದೇಶ. ತಪ್ಪು ಕಲ್ಪನೆಗಳು […]
ಬೆಂಗಳೂರು: ನನ್ನ ದೆಹಲಿ ಭೇಟಿಗೆ ರಾಜಕಾರಣದ ಬಣ್ಣ ಬಳಿಯುವುದು ಬೇಡ. ನಾನು ರಾಜಕೀಯ ಮಾಡಲು ದೆಹಲಿಗೆ ಹೋಗಿರಲಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಾನು ವೈಯಕ್ತಿಕ ಕಾರ್ಯದ ನಿಮಿತ್ತ ದೆಹಲಿಗೆ ಹೋಗಿದ್ದೆ. ಈ ಸಂದರ್ಭ ಯಾವುದೇ ನಾಯಕರನ್ನು ಭೇಟಿ ಮಾಡುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಮರಾಠ ನಿಗಮವನ್ನು ಸರ್ಕಾರ ಭಾಷೆಯ ಆಧಾರದ ಮೇಲೆ ರಚಿಸಿಲ್ಲ. ಮರಾಠಿಗರು ಕರ್ನಾಟಕದಲ್ಲಿ ಹಲವು ವರ್ಷಗಳಿಂದ ವಾಸಿವಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದು ಬಿಜೆಪಿಯ ಉದ್ದೇಶ. ತಪ್ಪು ಕಲ್ಪನೆಗಳು ಬೇಡ ಎಂದು ನುಡಿದರು.
ಬಸವಕಲ್ಯಾಣ ಕ್ಷೇತ್ರದತ್ತ ಹೆಚ್ಚು ಗಮನ ಕೊಡುವಂತೆ ವರಿಷ್ಠರು ನನಗೆ ಸೂಚಿಸಿದ್ದಾರೆ. ನಾನು ಮತ್ತು ಬೀದರ್ ಸಂಸದ ಭಗವಂತ ಖೂಬಾ ಸೇರಿ ಬಸವ ಕಲ್ಯಾಣ ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸುತ್ತೇವೆ ಎಂದು ಹೇಳಿದರು.
ದೆಹಲಿಗೆ ಇಂದು ಸೋಮಣ್ಣ ವಸತಿ ಸಚಿವ ವಿ.ಸೋಮಣ್ಣ ಇಂದು (ನ.23) ದೆಹಲಿಗೆ ತೆರಳಲಿದ್ದಾರೆ. ಸಂಪುಟ ವಿಸ್ತರಣೆ, ಪುನಾರಚನೆ ಚರ್ಚೆಗಳು ಗರಿಗೆದರಿರುವ ಹಿನ್ನೆಲೆಯಲ್ಲಿ ಸೋಮಣ್ಣ ದೆಹಲಿ ಭೇಟಿ ಕುತೂಹಲ ಮೂಡಿಸಿದೆ.
ಈ ಹಿಂದೆ ರಮೇಶ್ ಜಾರಕಿಹೊಳಿ ದೆಹಲಿಗೆ ಭೇಟಿ ನೀಡಿ, ಅಲ್ಲಿಯೇ ಶಾಸಕರನ್ನು ಭೇಟಿಯಾಗಿದ್ದು ರಾಜ್ಯ ರಾಜಕಾರಣದಲ್ಲಿ ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.