ಧಾವಂತದಲ್ಲಿ ಶೂ ಕಳಚದೆ ದೇವಸ್ಥಾನದೊಳಗೆ ಹೋದರು ಮೈಸೂರಿನ ಪೊಲೀಸ್ ವರಿಷ್ಠಾಧಿಕಾರಿ ಚೇತನ್!
ಅದ್ಯಾವುದೋ ಕಾರಣಕ್ಕೆ ಚೇತನ್ ಅವರು ಚಾಮುಂಡಿ ದೇವಸ್ಥಾನದೊಳಗೆ ಹೋಗಬೇಕಾಗಿ ಬಂದಾಗ ಧಾವಂತದಲ್ಲಿ ಅವರು ತಮ್ಮ ಶೂ ಕಳಚದೆ ಒಳಗೆ ಹೋದರು.
ದೇವಸ್ಥಾನಗಳು ಯಾವೇ ಅಗಿರಲಿ, ಅವು ಜನರಿಗೆ ಪವಿತ್ರ ಸ್ಥಳಗಳೇ. ಜನರು ಭಕ್ತಭಾವದಿಂದ, ಆಸ್ಥೆಯಿಂದ ಭೇಟಿ ನೀಡಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವ ಪೂಜಾ ಇಲ್ಲವೇ ಪ್ರಾರ್ಥನಾ ಸ್ಥಳಗಳನ್ನು ಜನ ಪವಿತ್ರ ಅಂತ ಪರಿಗಣಿಸುತ್ತಾರೆ. ಗುಡಿಯಲ್ಲಿ ಮಲಿನತೆಯ ಅಂಶವೇ ಕಾಣದ ಹಾಗೆ ಸ್ವಚ್ಛವಾಗಿಟ್ಟುಕೊಂಡಿರುತ್ತಾರೆ. ನೀವು ಯಾವುದೇ ದೇವಸ್ಥಾನಕ್ಕೆ ಹೋದರೂ ಚಪ್ಪಲಿ, ಶೂಗಳನ್ನು ಹೊರಗೆ ಬಿಟ್ಟಿರುವುದನ್ನು ಕಾಣಬಹುದು. ಚಪ್ಪಲಿಗಳಿಗೆಂದೇ ಗುಡಿಯ ಹೊರಗೆ ಪ್ರತ್ಯೇಕ ಸ್ಥಳ ಮಾಡಿರುತ್ತಾರೆ. ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಚಪ್ಪಲಿಗಳನ್ನು ಕಾಯಲೆಂದು ಟ್ರಸ್ಟ್ನವರು ಸಿಬ್ಬಂದಿಯನ್ನು ನೇಮಿಸಿರುತ್ತಾರೆ. ಅದಕ್ಕಾಗಿ ಅವರು ದೇಗುಲಕ್ಕೆ ಭೇಟಿ ನೀಡುವವರಿಂದ ಹಣ ಸಂಗ್ರಹಿಸುತ್ತಾರೆ ಅನ್ನೋದು ಬೇರೆ ವಿಷಯ.
ಈ ಚಪ್ಪಲಿಗಳ ವಿಷಯವನ್ನು ಪ್ರಸ್ತಾಪಿಸುವ ಸಂದರ್ಭವನ್ನು ಮೈಸೂರಿನ ಪೊಲೀಸ್ ವರಷ್ಠಾಧಿಕಾರಿ ಎಸ್ ಪಿ ಚೇತನ್ ಕಲ್ಪಿಸಿದ್ದಾರೆ. ಗುರುವಾರದಂದು ದಸರಾ ಉತ್ಸವದ ಉದ್ಘಾಟನೆ ಮತ್ತು ಗಣ್ಯರ ಆಗಮನದ ನಿಮಿತ್ತ ಮೈಸೂರಿನ ಚಾಮುಂಡಿ ಬೆಟ್ಟ ಮತ್ತು ಚಾಮುಂಡಿ ದೇವಸ್ಥಾನದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಅಲ್ಲಿದ್ದುದ್ದರಿಂದ ಬಂದೋಬಸ್ತ್ ಉಸ್ತುವಾರಿಯನ್ನು ಖುದ್ದು ಎಸ್ ಪಿ ಚೇತನ್ ಅವರೇ ವಹಿಸಿಕೊಂಡಿದ್ದರು.
ಅದ್ಯಾವುದೋ ಕಾರಣಕ್ಕೆ ಚೇತನ್ ಅವರು ಚಾಮುಂಡಿ ದೇವಸ್ಥಾನದೊಳಗೆ ಹೋಗಬೇಕಾಗಿ ಬಂದಾಗ ಧಾವಂತದಲ್ಲಿ ಅವರು ತಮ್ಮ ಶೂ ಕಳಚದೆ ಒಳಗೆ ಹೋದರು. ಅದನ್ನು ಗಮನಿಸಿದ ಅವರ ಸಿಬ್ಬಂದಿ ಸಾರ್ ಸಾರ್ ಎನ್ನುತ್ತಾ ಅವರ ಹಿಂದೆಯೇ ಓಡಿ ಅವರನ್ನು ಹೊರಕರೆತಂದರು.
ತಪ್ಪನ್ನು ಕೂಡಲೇ ಅರ್ಥಮಾಡಿಕೊಂಡ ಚೇತನ್ ಅವರು ಶೂ ಕಳಚಿ ದೇವಸ್ಥಾನದೊಳಗೆ ಹೋದರು.
ಇದನ್ನೂ ಓದಿ: Viral Video: ತನ್ನ ತಾಯಿಗಾಗಿ ಹುಡುಕಾಡುತ್ತಿರುವ ಆನೆ ಮರಿ; ಮನಮಿಡಿಯುವ ವಿಡಿಯೋ ನೋಡಿ