Brahmastra: ಬ್ರಹ್ಮಾಸ್ತ್ರ ಚಿತ್ರೀಕರಣ ಪೂರ್ಣ; ಆಲಿಯಾ ಮತ್ತು ರಣ್​ಬೀರ್ ಜತೆ ಫೋಟೊ ಹಂಚಿಕೊಂಡ ನಾಗಾರ್ಜುನ

Actor Nagarjuna Akkineni: ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಾಣದ ಬ್ರಹ್ಮಾಸ್ತ್ರ ಚಿತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ತೆರೆ ಕಾಣಲಿದೆ.

Brahmastra: ಬ್ರಹ್ಮಾಸ್ತ್ರ ಚಿತ್ರೀಕರಣ ಪೂರ್ಣ; ಆಲಿಯಾ ಮತ್ತು ರಣ್​ಬೀರ್ ಜತೆ ಫೋಟೊ ಹಂಚಿಕೊಂಡ ನಾಗಾರ್ಜುನ
ಆಲಿಯಾ, ರಣ್​ಬೀರ್, ಅಯಾನ್ ಮುಖರ್ಜಿ ಜತೆ ನಾಗಾರ್ಜುನ
ರಶ್ಮಿ ಕಲ್ಲಕಟ್ಟ

Updated on: Feb 16, 2021 | 1:15 PM

ಮುಂಬೈ: ಬಾಲಿವುಡ್​ನ ಬಹುನಿರೀಕ್ಷಿತ ಚಿತ್ರ ಬ್ರಹ್ಮಾಸ್ತ್ರದಲ್ಲಿನ ಚಿತ್ರೀಕರಣ ಪೂರ್ತಿಗೊಳಿಸಿರುವ ನಟ ನಾಗಾರ್ಜುನ ಆಲಿಯಾ ಭಟ್, ರಣ್​ಬೀರ್ ಕಪೂರ್ ಮತ್ತು ನಿರ್ದೇಶಕ ಅಯಾನ್ ಮುಖರ್ಜಿ ಜತೆಗಿರುವ ಫೋಟೊ ಶೇರ್ ಮಾಡಿದ್ದಾರೆ. ಆಲಿಯಾ-ರಣ್​ಬೀರ್ ಜತೆ ಅಮಿತಾಬ್ ಬಚ್ಚನ್, ಡಿಂಪಲ್ ಕಪಾಡಿಯಾ ಮತ್ತು ಮೌನಿ ರಾಯ್ ಈ ಸಿನಿಮಾದಲ್ಲಿ ನಟಿಸುತ್ತಿದ್ದು ಮುಂಬೈನಲ್ಲಿ ಶೂಟಿಂಗ್ ಪೂರ್ಣಗೊಂಡಿದೆ.

ತೆಲುಗು ಚಿತ್ರ ಮನ್ಮಥಡು 2ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿರುವ ನಾಗಾರ್ಜುನ ಅಕ್ಕಿನೇನಿ ಮುಂಬರುವ ಬಾಲಿವುಡ್ ಸಿನಿಮಾ ಬ್ರಹ್ಮಾಸ್ತ್ರದ ಬಗ್ಗೆ ಫುಲ್ ಥ್ರಿಲ್ ಆಗಿದ್ದಾರೆ. ಈ ಬಗ್ಗೆ ಫೋಟೊ ಟ್ವೀಟ್ ಮಾಡಿರುವ ನಾಗಾರ್ಜುನ, ರಣ್​ಬೀರ್ ಮತ್ತು ಆಲಿಯಾ ಜತೆಗಿನ ಅನುಭವ ಉತ್ತಮವಾಗಿತ್ತು. ಅಯಾನ್ ಮುಖರ್ಜಿ ಸೃಷ್ಟಿಸಿದ ಅದ್ಭುತ ಜಗತ್ತನ್ನು ನೋಡಲು ಕಾಯುತ್ತಿರುತ್ತೇನೆ ಎಂದಿದ್ದಾರೆ.

ವರ್ಷಗಳ ಹಿಂದೆಯೇ ಶೂಟಿಂಗ್ ಆರಂಭಿಸಿದ್ದ ಬ್ರಹ್ಮಾಸ್ತ್ರ ಈ ವರ್ಷ ತೆರೆಕಾಣುವ ನಿರೀಕ್ಷೆಯಿದೆ. ಆಲಿಯಾ ಮತ್ತು ರಣ್​ಬೀರ್ ಕಪೂರ್ ಜೋಡಿಯ ಮೊದಲ ಸಿನಿಮಾ ಇದಾಗಿದ್ದು ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ವೇಕ್ ಅಪ್ ಸಿದ್, ಯೇ ಜವಾನಿ ಹೈ ದಿವಾನಿ ಚಿತ್ರಗಳನ್ನು ನಿರ್ದೇಶಿಸಿದ್ದ ಅಯಾನ್ ಮುಖರ್ಜಿ ಬ್ರಹ್ಮಾಸ್ತ್ರಕ್ಕೆ ಆಕ್ಷನ್- ಕಟ್ ಹೇಳಿದ್ದಾರೆ.

ಇದನ್ನೂ ಓದಿ:ಬ್ರಹ್ಮಾಸ್ತ್ರ ಮೂಲಕ ಚಂದನವನಕ್ಕೆ ಬರ್ತಿದ್ದಾರೆ ಬಿಟೌನ್ ಬ್ಯೂಟಿ ಆಲಿಯಾ ಭಟ್

ಸಿನಿಮಾ ತೆರೆ ಕಾಣಲು ವಿಳಂಬವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಆಲಿಯಾ ಭಟ್, ಇದೊಂದು ವಿಭಿನ್ನ ಚಿತ್ರ. ಉತ್ತಮ ಚಿತ್ರ ಹೆಚ್ಚು ಸಮಯವನ್ನು ಬೇಡುತ್ತದೆ ಎಂದಿದ್ದಾರೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ತೆರೆ ಕಾಣಲಿದೆ.

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Loading...
Unable to load recommendations.
Follow Us