ಬೆಂಗಳೂರು: ಮಾದಕ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಕೇಶವ್ ಮೂರ್ತಿ ಮಗನಿಗೆ NCB ನೋಟಿಸ್ ನೀಡಿದೆ.
ಇದೇ ತಿಂಗಳ 7 ನೇ ತಾರೀಖಿನಂದು NCB ಅಧಿಕಾರಿಗಳ ಎದುರು ಹಾಜರಾಗುವಂತೆ ಈ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಅದರಂತೆ ಮಾಜಿ ಕಾರ್ಪೋರೇಟರ್ ಕೇಶವ್ ಮೂರ್ತಿ ಅವರು ನನ್ನ ಮಗ ಮುಂಬೈಗೆ ಹೋಗಿದ್ದಾನೆ. NCB ಅಧಿಕಾಗಳ ಎದುರು ಹಾಜರಾಗುತ್ತಾನೆ ಎಂದಿದ್ದರು. ಆದರೆ ಕೇಶವ್ ಮೂರ್ತಿ ಮಗ ಯಶಸ್ ತನಿಖೆಗೆ ಸ್ಪಂದಿಸಿಲ್ಲ. NCB ಕಚೇರಿಗೆ ಭೇಟಿ ನೀಡಿಲ್ಲ. ಅನಾರೋಗ್ಯದ ನಾಟಕವಾಡಿದ್ದಾನೆ.
ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ವಕೀಲರ ಮುಖಾಂತರ ಮಾಹಿತಿ ನೀಡಲು ಪ್ಲಾನ್ ಮಾಡಿಕೊಂಡಿದ್ದ. ಮಗನಿಗೆ NCB ನೋಟಿಸ್ ನೀಡ್ತಿದ್ದಂತೆ ಮನೆ ಬಿಟ್ಟು ಕದಲದ ಕೇಶವ್ ಮೂರ್ತಿ, ಯಶಸ್ NCB ಅಧಿಕಾರಿಗಳ ಎದುರು ಹಾಜರಾದ್ರೆ ಬೆಂಗಳೂರಿನ ಮತ್ತಷ್ಟು ಕಾರ್ಪೋರೇಟರ್ಸ್ಗಳು ಹಾಗೂ ಮಾಜಿ ಶಾಸಕರ ಮಕ್ಕಳ ಹೆಸರು ಬಯಲಾಗುವ ಸಾಧ್ಯತೆ ಇದೆ. ಹೀಗಾಗಿ ಯಶಸ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನ ಉದ್ಭವಿಸಿದೆ.
Published On - 8:02 am, Mon, 14 September 20