ತ್ರಿವಳಿ ಅರ್ಚಕರ ಕೊಲೆ ಪ್ರಕರಣ: ಆರೋಪಿಗಳ ಮೇಲೆ ಫೈರಿಂಗ್, ಪೊಲೀಸ್ ವಶಕ್ಕೆ ಮೂವರು

  • Updated On - 8:48 am, Mon, 14 September 20
ತ್ರಿವಳಿ ಅರ್ಚಕರ ಕೊಲೆ ಪ್ರಕರಣ: ಆರೋಪಿಗಳ ಮೇಲೆ ಫೈರಿಂಗ್, ಪೊಲೀಸ್ ವಶಕ್ಕೆ ಮೂವರು

ಮಂಡ್ಯ: ತೀವ್ರ ಆತಂಕ ಸೃಷ್ಟಿಸಿರುವ ಮಂಡ್ಯದ ಅರ್ಕೇಶ್ವರ ದೇಗುಲದಲ್ಲಿ ಮೂವರು ಅರ್ಚಕರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲು ಹೊರಟಿದ್ದ ಪೊಲೀಸರ ಮೇಲೆ ಆರೋಪಿಗಳು ಚಾಕು, ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರಿಂದ ಗುಂಡಿನ ದಾಳಿ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು-ಮಳವಳ್ಳಿ ರಸ್ತೆಯ ಸಾದೊಳಲು ಗೇಟ್ ಬಳಿ ಗುಂಡಿನದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.

ಘಟನೆಯಲ್ಲಿ ಪಿ.ಎಸ್.ಐ ಸೇರಿದಂತೆ ಇಬ್ಬರು ಪೇದೆಗಳಿಗೆ ಗಾಯಗಳಾಗಿವೆ. ಗಾಯಾಳುಗಳಾದ ಅನಿಲ್ ಕುಮಾರ್ ಮತ್ತು ಕೃಷ್ಣಕುಮಾರ್​ನನ್ನು ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ದೈವೀ ಸನ್ನಿಧಿಯಲ್ಲಿ ಪೈಶಾಚಿಕ ಕೃತ್ಯ: ಮೂವರ ಬರ್ಬರ ಕೊಲೆ, ಹುಂಡಿ ಕದ್ದೊಯ್ದ ದುಷ್ಕರ್ಮಿಗಳು

Click on your DTH Provider to Add TV9 Kannada