ಕಾರುಗಳ ಮುಖಾಮುಖಿ ಡಿಕ್ಕಿ: ಕೃಷಿ ಅಧಿಕಾರಿ ಬಚಾವ್

  • Updated On - 8:05 am, Mon, 14 September 20
ಕಾರುಗಳ ಮುಖಾಮುಖಿ ಡಿಕ್ಕಿ: ಕೃಷಿ ಅಧಿಕಾರಿ ಬಚಾವ್

ಕೊಡಗು: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಸೋಮವಾರಪೇಟೆ ತಾಲೂಕು ಯಡವನಾಡು ಗ್ರಾಮದ ಬಳಿ ನಡೆದಿದೆ. ಆದರೆ ಅದೃಷ್ಟವಶಾತ್ ಘಟನೆಯಲ್ಲಿ ಭಾರಿ ಅನಾಹುತ ತಪ್ಪಿದೆ. ಕೃಷಿ ಅಧಿಕಾರಿ ಸೇರಿ ಕಾರಿನಲ್ಲಿದ್ದವ್ರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೋಮವಾರಪೇಟೆಯಿಂದ ಕುಶಾಲನಗರಕ್ಕೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಕೃಷಿ ಅಧಿಕಾರಿ ಪುರಂದ್ ತೆರಳುತ್ತಿದ್ದರು. ಈ ವೇಳೆ ಮತ್ತೊಂದು ಕಾರಿನಲ್ಲಿದ್ದ ರಂಜಿತ್ ಎಂಬುವರು ಮುಖಾಮುಖಿ ಡಿಕ್ಕಿಯಾಗಿದ್ದಾರೆ. ಡಿಕ್ಕಿ ರಭಸಕ್ಕೆ ಎರಡು ಕಾರುಗಳೂ ಮಗುಚಿಬಿದ್ದಿವೆ. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದವ್ರು ಭಾರಿ ಅನಾಹುತದಿಂದ ಪಾರಾದ್ರು. ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Click on your DTH Provider to Add TV9 Kannada