‘ರಿಚರ್ಡ್ ಆಂಟನಿ’ ಸಿನಿಮಾ ಕುರಿತು ರಾಜ್ ನೀಡಿದ ಹೇಳಿಕೆ ಬಗ್ಗೆ ಶುರುವಾಗಿದೆ ಚರ್ಚೆ
ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಕೆಲಸಗಳಲ್ಲಿ ನಿರತರಾಗಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇತ್ತೀಚೆಗೆ ರಾಜ್ ಬಿ. ಶೆಟ್ಟಿ ನೀಡಿದ ಹೇಳಿಕೆ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. 'ರಿಚರ್ಡ್ ಆಂಟನಿ' ಚಿತ್ರದ ಕೆಲಸಗಳು ಇನ್ನೂ ಆರಂಭವಾಗಿಲ್ಲವೇ ಎಂದು ಪ್ರಶ್ನಿಸುವಂತೆ ಮಾಡಿದೆ. 'ಸಪ್ತ ಸಾಗರದಾಚೆ ಎಲ್ಲೋ' ನಂತರ ರಕ್ಷಿತ್ ಶೆಟ್ಟಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ.

ರಕ್ಷಿತ್ ಶೆಟ್ಟಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಗಮನ ಸೆಳೆದಿದ್ದಾರೆ. ಅವರು ಕಳೆದ ಕೆಲ ಸಮಯದಿಂದ ಯಾರ ಕಣ್ಣೀಗು ಕಾಣಿಸುತ್ತಿಲ್ಲ. ಅವರು ‘ರಿಚರ್ಡ್ ಆಂಟನಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಿರುವಾಗಲೇ ರಾಜ್ ಅವರು ನೀಡಿದ ಹೇಳಿಕೆ ಚರ್ಚೆ ಹುಟ್ಟುಹಾಕಿದೆ. ಆ ಚಿತ್ರಕ್ಕಾಗಿ ಇನ್ನೂ ಎಷ್ಟು ವರ್ಷ ಕಾಯಬೇಕು ಎಂಬ ಪ್ರಶ್ನೆ ಮೂಡಿದೆ.
ರಾಜ್ ಬಿ. ಶೆಟ್ಟಿ ಅವರು ‘45’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಬಗ್ಗೆ ಟ್ರೇಲರ್ನಲ್ಲಿ ಹಿಂಟ್ ಸಿಕ್ಕಿದೆ. ಓರ್ವ ಜನಸಾಮಾನ್ಯನ ಪಾತ್ರದಲ್ಲಿ ರಾಜ್ ಅವರು ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಸಾಕಷ್ಟು ಸಂದರ್ಶನಗಳನ್ನು ಅವರು ನೀಡುತ್ತಿದ್ದಾರೆ. ಈ ವೇಳೆ ಅವರಿಗೆ ರಕ್ಷಿತ್ ಶೆಟ್ಟಿ ಬಗ್ಗೆಯೂ ಪ್ರಶ್ನೆ ಎದುರಾಗುತ್ತಿದೆ. ಸಂದರ್ಶನ ಒಂದರಲ್ಲಿ ರಾಜ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ‘45’ ಸಿನಿಮಾ ಶೂಟ್ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್ಗೆ ಶಾಕ್
ರಿಷಬ್ ಹಾಗೂ ರಾಜ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತಿದೆ. ಆದರೆ, ಇದನ್ನು ರಾಜ್ ಅಲ್ಲಗಳೆದಿದ್ದಾರೆ. ಅಲ್ಲದೆ, ಎಲ್ಲರ ಸಿನಿಮಾಗಳಲ್ಲಿ ಕೆಲಸ ಮಾಡಲು ಅವರು ಸಿದ್ಧರಿದ್ದಾರಂತೆ. ‘ರಕ್ಷಿತ್ ಅವರು ರಿಚರ್ಡ್ ಆಂಟನಿ ಸ್ಟಾರ್ಟ್ ಮಾಡಿದ್ರು ಅಂದ್ರೆ’ ಎಂದು ಏನನ್ನೋ ಹೇಳಲು ರಾಜ್ ಮುಂದಾದರು. ‘ನಾನು ಅದರಲ್ಲಿ ಕೆಲಸ ಮಾಡಲು ರೆಡಿ’ ಎಂದು ಅವರು ಹೇಳಲು ಮುಂದಾಗಿರಬಹುದು. ಆದರೆ, ಫ್ಯಾನ್ಸ್ ಇಲ್ಲಿ ಗಮನಿಸಿದ್ದೇ ಬೇರೆ. ಈ ವಿಡಿಯೋಗೆ ಫ್ಯಾನ್ಸ್ ರಿಯಾಕ್ಟ್ ಮಾಡಿದ್ದಾರೆ.
View this post on Instagram
‘ಮಾಡಿದ್ರು ಅಂದ್ರೆ’ ಎಂಬುದರ ನಿಜವಾದ ಅರ್ಥವೇನು ಎಂದು ಅನೇಕರು ಕೇಳಿದ್ದಾರೆ. ‘ಹಾಗಾದ್ರೆ ಅವರು ಸಿನಿಮಾ ಕೆಲಸನ ಇನ್ನೂ ಆರಂಭಿಸಿಲ್ಲವೇ’ ಎಂದು ಅನೇಕರು ಕೇಳುತ್ತಿದ್ದಾರೆ. 2023ರಲ್ಲಿ ಬಂದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:48 pm, Sat, 20 December 25




