ಈ ವಾರ ಒಟಿಟಿಗೆ ಬಂದಿವೆ ಕೆಲ ಆಸಕ್ತಿಕರ ಸಿನಿಮಾಗಳು: ಇಲ್ಲಿದೆ ಪಟ್ಟಿ
OTT Release this week: ಡಿಸೆಂಬರ್ ತಿಂಗಳು ಚಿತ್ರಮಂದಿರಗಳಲ್ಲಿ ಭರ್ಜರಿ ಸಿನಿಮಾಗಳು ಬಿಡುಗಡೆ ಆಗುತ್ತವೆ. ಈ ಡಿಸೆಂಬರ್ ಸಹ ಸಿನಿಮಾ ಪ್ರಿಯರ ಪಾಲಿಗೆ ಹಬ್ಬವೇ ಆಗುವುದು ಖಾತ್ರಿ. ಚಿತ್ರಮಂದಿರಗಳಲ್ಲಿ ಭರ್ಜರಿ ಸಿನಿಮಾಗಳು ಸಿನಿಮಾ ರಿಲೀಸ್ ಆಗುತ್ತಿರವ ಕಾರಣಕ್ಕೋ ಏನೋ ಒಟಿಟಿ ಈ ವಾರ ದೊಡ್ಡ ಅಥವಾ ಜನಪ್ರಿಯ ಸಿನಿಮಾಗಳು ಬಂದಿಲ್ಲ, ಆದರೆ ಕೆಲವು ಆಸಕ್ತಿಕರ ಸಿನಿಮಾಗಳು ಒಟಿಟಿಗೆ ಬಂದಿವೆ.
Updated on:Dec 20, 2025 | 2:48 PM

ರಶ್ಮಿಕಾ ಮಂದಣ್ಣ ನಟಿಸಿರುವ ಹಿಂದಿ ಸಿನಿಮಾ ‘ಥಮ’ ಈ ವಾರ ಒಟಿಟಿಗೆ ಬಂದಿದೆ. ಆಯುಷ್ಮಾಕ್ ಖುರಾನಾ, ನವಾಜುದ್ದೀನ್ ಸಿದ್ಧಿಖಿ ನಟಿಸಿರುವ ಈ ಹಾರರ್ ಸಿನಿಮಾ ಡಿಸೆಂಬರ್ 16ಕ್ಕೆ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಕಂಡಿದೆ.

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮತ್ತು ಭಾರತೀಯ ಚಿತ್ರರಂಗದ ಮೋಸ್ಟ್ ವರ್ಸಟೈಲ್ ನಿರ್ದೇಶಕ ಆಗಿರುವ ಮಮ್ಮುಟಿ ನಟಿಸಿರುವ ‘ಡಾಮಿನಿಕ್ ಆಂಡ್ ಲೇಡೀಸ್ ಪರ್ಸ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಹೆಸರೇ ಸುಳಿವು ನೀಡುತ್ತಿರುವಂತೆ ಇದೊಂದು ಥ್ರಿಲ್ಲರ್ ಸಿನಿಮಾ ಆಗಿದೆ. ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಇತ್ತೀಚೆಗೆ ಫೀಲ್ಗುಡ್ ಪ್ರೇಮಕತೆಗಳೇ ಕಡಿಮೆ ಆಗಿವೆ. ಇದೀಗ ಅಂಥಹದ್ದೊಂದು ಸಿನಿಮಾ ಒಟಿಟಿಗೆ ಬಂದಿದೆ. ತಮಿಳಿನ ‘ಅರೊಮಲೈ’ ಸಿನಿಮಾ ಒಂದೊಳ್ಳೆ ಪ್ರೇಮಕತೆಯಾಗಿದ್ದು ಈ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಮಾಧುರಿ ದೀಕ್ಷಿತ್ ನಟಿಸಿರುವ ‘ಮಿಸಸ್ ದೇಶಪಾಂಡೆ’ ಹೆಸರಿನ ಥ್ರಿಲ್ಲರ್ ವೆಬ್ ಸರಣಿ ಇದೇ ವಾರ ಒಟಿಟಿಗೆ ಬಂದಿದೆ. ಮಾಧುರಿ ದೀಕ್ಷಿತ್ ಅವರು ಸೀರಿಯಲ್ ಕಿಲ್ಲರ್ ಪಾತ್ರದಲ್ಲಿ ಈ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಫ್ರೆಂಚ್ನ ವೆಬ್ ಸರಣಿ ‘ಲಾ ಮಾಂಟೆ’ಯ ರೀಮೇಕ್ ಆಗಿದೆ ಮಿಸಸ್ ದೇಶಪಾಂಡೆ. ವೆಬ್ ಸರಣಿ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಕಪಿಲ್ ಶರ್ಮಾ ಅವರ ಹಾಸ್ಯ ಶೋ ದಶಕದಿಂದಲೂ ಭಾರತದ ಜನಪ್ರಿಯ ಟಿವಿ ಶೋ. ಕಳೆದ ಕೆಲ ವರ್ಷಗಳಿಂದ ಈ ಶೋ ಒಟಿಟಿಗೆ ಸೇರಿಕೊಂಡಿದೆ. ನೆಟ್ಫ್ಲಿಕ್ಸ್ನಲ್ಲಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಪ್ರಸಾರ ಆಗುತ್ತಿದ್ದು, ಇಂದಿನಿಂದ (ಡಿಸೆಂಬರ್ 20) ಶೋನ ನಾಲ್ಕನೇ ಸೀಸನ್ ಆರಂಭ ಆಗಲಿದೆ.
Published On - 2:42 pm, Sat, 20 December 25




