‘ಜಂಬೂಸವಾರಿಯನ್ನ ಸರಿಯಾಗಿ ಮಾಡದಿದ್ರೇ.. ಜಟಕಾ ಗಾಡಿಯಲ್ಲಿ ನಾನೇ ಮೆರವಣಿಗೆ ಮಾಡಿಸುವೆ’

  • Publish Date - 7:29 pm, Sun, 13 September 20
‘ಜಂಬೂಸವಾರಿಯನ್ನ ಸರಿಯಾಗಿ ಮಾಡದಿದ್ರೇ.. ಜಟಕಾ ಗಾಡಿಯಲ್ಲಿ ನಾನೇ ಮೆರವಣಿಗೆ ಮಾಡಿಸುವೆ’

ಮೈಸೂರು: ಅರಮನೆ ಆವರಣದಲ್ಲಿ ಜಂಬೂಸವಾರಿ ನಡೆಸಲು ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನದ ಬಗ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್​ ವಿರೋಧ ವ್ಯಕ್ತಪಡಿಸಿದ್ದಾರೆ.

15 ಕೋಟಿ ಖರ್ಚು ಮಾಡಿ ಆಚರಣೆ ಮಾಡುವುದು ಸರಳ ದಸರಾ ಅಲ್ಲ. ಜಂಬೂಸವಾರಿಯನ್ನು ಸಂಭ್ರಮದಿಂದಲೇ ಮಾಡಿಸಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಜಂಬೂಸವಾರಿ ಮೆರವಣಿಗೆ ಬನ್ನಿಮಂಟಪದವರೆಗೆ ಸಾಗಬೇಕು. ಜಂಬೂಸವಾರಿ ಮೆರವಣಿಗೆಗೆ ತನ್ನದೇ ಆದ ಇತಿಹಾಸವಿದೆ ಎಂದು ಹೇಳಿದ್ದಾರೆ.

ಕೊರೊನಾ ಸೋಂಕಿನಿಂದ ದಿನಕ್ಕೆ ನೂರು ಜನ ಸಾಯುತ್ತಿದ್ದಾರೆ. ಇದರಲ್ಲೇ ಸರ್ಕಾರ ಸರಿಯಾದ ಒಂದು ವ್ಯವಸ್ಥೆ ಮಾಡಿಲ್ಲ. ದಸರಾದಲ್ಲಾದ್ರೂ ಜನರನ್ನು ಸರಿಯಾಗಿ ಕೂರಿಸಿ ವಿಜೃಂಭಣೆಯಿಂದ ಆಚರಿಸಲಿ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿ, ಬೇರೆಯವರು ಬೇಡ. ನಮ್ಮಲ್ಲಿ ಸಾಕಷ್ಟು ಒಳ್ಳೆಯ ಕಲಾವಿದರು ಇದ್ದಾರೆ. ಯಡಿಯೂರಪ್ಪನವರೇ, ಇವರು ಯಾರು ನಿಮಗೆ ಕಾಣಲೇ ಇಲ್ವ? ನೀವು ಏನಾದ್ರು ಕನ್ನಡ ಕಲಾವಿದರನ್ನ ಬಿಟ್ಟು ಬೇರೆಯವರನ್ನು ಕರೆತಂದರೆ ನಾನೇ ಅರಮನೆಗೆ ಬರುತ್ತೇನೆ. ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇನೆ ಅಂತಾ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಜೊತೆಗೆ, ದಸರಾ ವೇಳೆ ಜಂಬೂಸವಾರಿ ಪ್ರತಿವರ್ಷದಂತೆ ಸರಿಯಾಗಿ ಮಾಡದಿದ್ರೇ ನಾನೇ ಜಟಕಾ ಗಾಡಿಯಲ್ಲಿ ಮೆರವಣಿಗೆ ಮಾಡಿಸುತ್ತೇನೆ. ತಾಯಿ ಚಾಮುಂಡೇಶ್ವರಿಯ ವಿಗ್ರಹದ ಮೆರವಣಿಗೆಯನ್ನು ಜಟಕಾ ಗಾಡಿಯಲ್ಲಿ ಮಾಡಿಸುತ್ತೇನೆ ಎಂದು ರಾಜ್ಯ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

Click on your DTH Provider to Add TV9 Kannada