AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಕೂಡ ಮುಖದವರೆಗೂ ಬ್ಲಾಂಕೆಟ್ ಹೊದ್ದು ಮಲಗ್ತೀರಾ ಈ ಅಭ್ಯಾಸ ಎಷ್ಟು ಡೇಂಜರ್ ನೋಡಿ!

ಅನೇಕರು ಚಳಿಯಿಂದ ರಕ್ಷಣೆ ಪಡೆಯಲು, ಮಲಗುವಾಗ ಕಂಬಳಿ ಅಥವಾ ಬೆಡ್ ಶಿಟ್ ಅನ್ನು ಮುಖದವರೆಗೆ ಹೊದ್ದು ಮಲಗುತ್ತಾರೆ. ಈ ಅಭ್ಯಾಸ ದೇಹವನ್ನು ಬೆಚ್ಚಗಿಡುತ್ತದೆಯಾದರೂ ಕೂಡ ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಹೌದು, ಇದು ನಮ್ಮ ಶ್ವಾಸಕೋಶಗಳಿಗೆ ತುಂಬಾ ಹಾನಿಕಾರಕವಾಗಿದೆ. ಅಷ್ಟೇ ಅಲ್ಲ, ಚರ್ಮದ ಆರೋಗ್ಯಕ್ಕೂ ಒಳ್ಳೆಯದಲ್ಲ ಎನ್ನಲಾಗುತ್ತದೆ. ಹಾಗಾದರೆ ಇದು ಆರೋಗ್ಯದ ಮೇಲೆ ಯಾವ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನೀವು ಕೂಡ ಮುಖದವರೆಗೂ ಬ್ಲಾಂಕೆಟ್ ಹೊದ್ದು ಮಲಗ್ತೀರಾ ಈ ಅಭ್ಯಾಸ ಎಷ್ಟು ಡೇಂಜರ್ ನೋಡಿ!
Covering Face While Sleeping
ಪ್ರೀತಿ ಭಟ್​, ಗುಣವಂತೆ
|

Updated on: Dec 20, 2025 | 3:38 PM

Share

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲಿಯೂ ದಿನದಿಂದ ದಿನಕ್ಕೆ ಚಳಿ (winter) ಹೆಚ್ಚಾಗುತ್ತಿದೆ. ಈ ರೀತಿ ತಾಪಮಾನ ಕಡಿಮೆಯಾದಾಗ, ಸ್ವಾಭಾವಿಕವಾಗಿ ಚಳಿಯಿಂದ ರಕ್ಷಣೆ ಪಡೆಯಲು ಮುಖದ ವರೆಗೆ ಬೆಡ್ ಶಿಟ್ ಅಥವಾ ಕಂಬಳಿ ಹೊದ್ದು ಮಲಗುತ್ತೇವೆ. ಇದು ಉಷ್ಣತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ಬಹಳ ಆರಾಮದಾಯಕವೆನಿಸುತ್ತದೆ, ಆದರೆ ಇತ್ತೀಚಿನ ಸಂಶೋಧನೆ ಹೇಳುವ ಪ್ರಕಾರ, ಈ ರೀತಿಯ ಅಭ್ಯಾಸ ಉಸಿರಾಟದ ವ್ಯವಸ್ಥೆಯ ಮೇಲೆ ಗಮನಾರ್ಹ ಒತ್ತಡವನ್ನು ಬೀರುತ್ತದೆ ಎಂದು ತಿಳಿಸಿದೆ. ಹೌದು, ರಾತ್ರಿ ಮಲಗುವಾಗ ಮುಖ ಮುಚ್ಚಿಕೊಳ್ಳುವುದರಿಂದ (Face Covering at Night) ಉಸಿರಾಟ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗಾದರೆ ಇದು ಆರೋಗ್ಯದ ಮೇಲೆ ಯಾವ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿದ್ರೆ ಮಾಡುವ ಸಮಯದಲ್ಲಿ ಮುಖವನ್ನು ಕಂಬಳಿ ಅಥವಾ ಬೆಡ್ ಶಿಟ್ ನಿಂದ ಮುಚ್ಚಿಕೊಂಡು ಮಲಗುವುದರಿಂದ, ನಾವು ಹೊರಹಾಕುವ ಗಾಳಿ (ಕಾರ್ಬನ್ ಡೈಆಕ್ಸೈಡ್) ಹೊರಹೋಗಲು ಜಾಗವಿಲ್ಲದೆ ಅಲ್ಲಿಯೇ ಸಿಲುಕುತ್ತದೆ. ಪರಿಣಾಮವಾಗಿ, ನಾವು ಅರಿವಿಲ್ಲದೆಯೇ ಪದೇ ಪದೇ ಇಂಗಾಲದ ಡೈಆಕ್ಸೈಡ್ ಅನ್ನು ಉಸಿರಾಡುತ್ತೇವೆ. ಇದು ದೇಹವು ಪಡೆಯುವ ತಾಜಾ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಬೆಳಿಗ್ಗೆ ಎಚ್ಚರಗೊಳ್ಳುವಾಗ ತಲೆನೋವು ಕಂಡುಬರುವುದು, ದಿನವಿಡೀ ದಣಿದ ಅನುಭವ, ಏಕಾಗ್ರತೆಯ ಕೊರತೆ, ನಿದ್ರೆ ಮಾಡುವಾಗ ಆಗಾಗ ಎಚ್ಚರಗೊಳ್ಳುವಂತಹ ಸಮಸ್ಯೆಗಳು ಉದ್ಭವಿಸಬಹುದು. ಅಷ್ಟು ಮಾತ್ರವಲ್ಲ, ಮುಖ ಮುಚ್ಚಿಕೊಳ್ಳುವುದರಿಂದ ಆ ಪ್ರದೇಶದಲ್ಲಿ ತೇವಾಂಶ ಮತ್ತು ಬೆವರು ಸಂಗ್ರಹವಾಗುತ್ತದೆ. ಕಂಬಳಿಯ ಮೇಲಿನ ಧೂಳು ಮತ್ತು ಬ್ಯಾಕ್ಟೀರಿಯಾಗಳು ಕೂಡ ಚರ್ಮದ ಸಂಪರ್ಕಕ್ಕೆ ಬರಬಹುದು, ಇದು ಮೊಡವೆ ಮತ್ತು ಉರಿಯೂತದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ನಿದ್ರೆಯ ಸಮಯದಲ್ಲಿ ದೇಹದ ಉಷ್ಣತೆಯ ಹೆಚ್ಚಳವು ನಿದ್ರೆಗೆ ಅಡ್ಡಿಪಡಿಸುತ್ತದೆ.

ಕಂಬಳಿಯಿಂದ ಮುಖ ಮುಚ್ಚಿ ಮಲಗುವ ಅಭ್ಯಾಸ ಯಾರಿಗೆ ಹೆಚ್ಚು ಅಪಾಯಕಾರಿ?

ಈ ಅಭ್ಯಾಸವು ಅಸ್ತಮಾ, ಸೈನಸ್ ಮತ್ತು ಅಲರ್ಜಿ ಸಮಸ್ಯೆಗಳಿರುವವರಿಗೆ ತುಂಬಾ ಅಪಾಯಕಾರಿ. ಅದರಲ್ಲಿಯೂ ಶಿಶುಗಳಲ್ಲಿ ಈ ಅಪಾಯ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಇತರರಿಗಿಂತ ತುಸು ಹೆಚ್ಚೆ ನಿಮ್ಗೆ ಚಳಿಯಾಗುತ್ತಾ? ಇದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ

ಮುನ್ನೆಚ್ಚರಿಕೆ ಅಥವಾ ಪರ್ಯಾಯಗಳು:

  • ಯಾವಾಗಲೂ ಕಂಬಳಿ ಅಥವಾ ಬೆಡ್ ಶಿಟ್ ಅನ್ನು ಭುಜದವರೆಗೆ ಮಾತ್ರ ಹೊದ್ದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.
  • ಬೆಚ್ಚಗಿರಲು ದಪ್ಪ ಬಟ್ಟೆ ಅಥವಾ ಸಾಕ್ಸ್‌ಗಳನ್ನು ಧರಿಸಿ.
  • ಹತ್ತಿಯ ಹಾಸಿಗೆಯನ್ನು ಬಳಸಿ.
  • ಬೆಳಕು ಬರದೆ ಕತ್ತಲೆಯಾಗಬೇಕೆಂದರೆ ಮುಖದ ಮೇಲೆ ಕಂಬಳಿ ಅಥವಾ ಬೆಡ್ ಶಿಟ್ ಹಾಕಿಕೊಳ್ಳುವ ಬದಲು ಐ ಮಾಸ್ಕ್ ಧರಿಸಿ.
  • ನಿಮ್ಮ ಪಾದಗಳ ಬಳಿ ಬಿಸಿನೀರಿನ ಬಾಟಲಿಗಳನ್ನು ಇಡುವುದರಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ