ಮೃತ ವೃದ್ಧನ ಮನೆಯನ್ನ ದರೋಡೆ ಮಾಡಿದ ಪೊಲೀಸ್​ ಅಧಿಕಾರಿ ಅರೆಸ್ಟ್

  • Updated On - 6:42 pm, Sun, 13 September 20
ಮೃತ ವೃದ್ಧನ ಮನೆಯನ್ನ ದರೋಡೆ ಮಾಡಿದ ಪೊಲೀಸ್​ ಅಧಿಕಾರಿ ಅರೆಸ್ಟ್

ಮೃತ ವೃದ್ಧನ ಮನೆಯಲ್ಲಿ ಪೊಲೀಸ್​ ಅಧಿಕಾರಿಯೊಬ್ಬ ದರೋಡೆ ಮಾಡಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಆರೆಂಜ್​ ಕೌಂಟಿಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸ್​ ಇಲಾಖೆಯಲ್ಲಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಅಧಿಕಾರಿ ಸ್ಟೀವ್ ಹೋರ್ಟ್ಸ್​ ಕೆಲವು ದಿನಗಳ ಹಿಂದೆ ಗಸ್ತು ತಿರುಗುವ ವೇಳೆ ತನ್ನ ಏರಿಯಾದಲ್ಲಿ ವೃದ್ಧನೊಬ್ಬ ಸಾವನ್ನಪ್ಪಿರೋ ಘಟನೆ ವರದಿಯಾಗಿತ್ತು. ಈ ವೇಳೆ ಮೃತನ ಮನೆಗೆ ಭೇಟಿಕೊಟ್ಟಿದ್ದ ಅಧಿಕಾರಿಗೆ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳ ಮೇಲೆ ಕಣ್ಣುಬಿದ್ದಿದೆ.

ಹಾಗಾಗಿ, ಮೃತನ ಕುಟುಂಬದವರ ಬಗ್ಗೆ ವಿಚಾರಿಸಿದ್ದಾನೆ. ವೃದ್ಧನಿಗೆ ಕುಟುಂಬಸ್ಥರು ಇಲ್ಲ ಎಂದು ತಿಳಿದ ಸ್ಟೀವ್​ ಕೆಲವು ದಿನಗಳ ಬಳಿಕ ರಾತ್ರಿವೇಳೆ ಮೃತನ ಮನೆಗೆ ಎಂಟ್ರಿ ಕೊಟ್ಟು ಮನೆಯಲ್ಲಿದ್ದ ಬಂದೂಕು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದಾನೆ. ಮನೆಯಲ್ಲಿದ್ದ ಸೀಲಿಂಗ್​ ಫ್ಯಾನ್​ ಸಹ ಬಿಟ್ಟಿಲ್ಲವಂತೆ.

ಆದರೆ, ದುರದೃಷ್ಟಕ್ಕೆ ಪೊಲೀಸಪ್ಪನ ಕುಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿಬಿಟ್ಟಿದೆ. ಇನ್ನೂ ಈತನ ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಆತನ ಇಲಾಖೆಯವರೇ ಸ್ಟೀವ್​ನ ಬಂಧಿಸಿದ್ದಾರೆ. ಒಟ್ನಲ್ಲಿ, ಪೊಲೀಸ್​ ಅಧಿಕಾರಿ ವರ್ತನೆಯಿಂದ ಬೇಲಿಯೇ ಎದ್ದು ಹೊಲ ಮೇಯ್ದಿದೆ ಅಂತಾ ಜನರು ಮಾತನಾಡಿಕೊಂಡಿದ್ದಾರೆ.

Click on your DTH Provider to Add TV9 Kannada