ನಮ್ಮನ್ನು ಒಂದುಗೂಡಿಸಿದ್ದಕ್ಕೆ ಥ್ಯಾಂಕ್ಸ್ ಕೊರೊನಾ -NS ಪಾಳ್ಯ ಆರೋಗ್ಯ ಸಿಬ್ಬಂದಿ ಡಿಫರೆಂಟ್ ದಸರಾ!
ಬೆಂಗಳೂರು: ನಗರದ BTM ಲೇಔಟ್ನ NS ಪಾಳ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಿಂದ ಇಂದು ವಿಭಿನ್ನವಾಗಿ ದಸರಾ ಹಬ್ಬವನ್ನು ಆಚರಿಸಲಾಯಿತು. ಇಂದು ಪಂಚೆ ಹಾಗೂ ಸೀರೆ ತೊಟ್ಟ ಆರೋಗ್ಯ ಕೇಂದ್ರದ ಸಿಬ್ಬಂದಿ ದೇವಿಯ ಚಿತ್ರಪಟಕ್ಕೆ ಪೂಜೆ ಮಾಡಿ ದಸರಾ ಹಬ್ಬವನ್ನು ಆಚರಿಸಿದರು. ಕೊರೊನಾ ವೈರಸ್ ಆಕಾರವನ್ನು ಪೇಪರ್ ಮೇಲೆ ಬಿಡಿಸುವ ಜೊತೆಗೆ ಅವುಗಳ ಮೇಲೆ ಜಾಗೃತಿ ಸಂದೇಶಗಳನ್ನು ಬರೆದು ಸೋಂಕಿನ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಲು ಮುಂದಾದರು. ಹಾಸ್ಪಿಟಲ್ನ ಬಾಗಿಲಿನ ಬಳಿ ಗೋ ಕೊರೊನಾ ಗೋ ಎಂದು […]
ಬೆಂಗಳೂರು: ನಗರದ BTM ಲೇಔಟ್ನ NS ಪಾಳ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಿಂದ ಇಂದು ವಿಭಿನ್ನವಾಗಿ ದಸರಾ ಹಬ್ಬವನ್ನು ಆಚರಿಸಲಾಯಿತು.
ಇಂದು ಪಂಚೆ ಹಾಗೂ ಸೀರೆ ತೊಟ್ಟ ಆರೋಗ್ಯ ಕೇಂದ್ರದ ಸಿಬ್ಬಂದಿ ದೇವಿಯ ಚಿತ್ರಪಟಕ್ಕೆ ಪೂಜೆ ಮಾಡಿ ದಸರಾ ಹಬ್ಬವನ್ನು ಆಚರಿಸಿದರು. ಕೊರೊನಾ ವೈರಸ್ ಆಕಾರವನ್ನು ಪೇಪರ್ ಮೇಲೆ ಬಿಡಿಸುವ ಜೊತೆಗೆ ಅವುಗಳ ಮೇಲೆ ಜಾಗೃತಿ ಸಂದೇಶಗಳನ್ನು ಬರೆದು ಸೋಂಕಿನ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಲು ಮುಂದಾದರು. ಹಾಸ್ಪಿಟಲ್ನ ಬಾಗಿಲಿನ ಬಳಿ ಗೋ ಕೊರೊನಾ ಗೋ ಎಂದು ಬರೆದರು. ನಮ್ಮನ್ನು ಒಂದುಗೂಡಿಸಿದ್ದಕ್ಕೆ ನಿನಗೆ ಥ್ಯಾಂಕ್ಸ್ ಕೊರೊನಾ ಆದರೆ, ನೀನು ನಮಗೆ ಬೇಡ ಎಂಬ ಸಂದೇಶವನ್ನು ಸಹ ಬರೆದರು.
ಇದಲ್ಲದೆ, ಪೂಜೆ ಬಳಿಕ ಸಿಹಿ ತಿಂದು ಸಂಭ್ರಮಿಸಿದ ಕೊರೊನಾ ವಾರಿಯರ್ಸ್ ಆರೋಗ್ಯ ಕೇಂದ್ರಕ್ಕೆ ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಬಂದು ಟೆಸ್ಟ್ನಲ್ಲಿ ನೆಗೆಟಿವ್ ಬಂದವರಿಗೆ ಸ್ವೀಟ್ ತಿನ್ನಿಸುವ ಮೂಲಕ ಹಬ್ಬದ ಆಚರಣೆಗೆ ಮತ್ತಷ್ಟು ಮೆರುಗು ನೀಡಿದರು.