ಪಾಪ.. ದೇವೇಗೌಡರ ಬಗ್ಗೆ ಪ್ರತಿಕ್ರಿಯೆ ನೀಡಬಾರದು ಅಂದುಕೊಂಡಿದ್ದೀನಿ -ಸಿದ್ದರಾಮಯ್ಯ ಟಾಂಗ್
ಪಾಪ.. ದೇವೇಗೌಡರ ಬಗ್ಗೆ ನಾನು ಪ್ರತಿಕ್ರಿಯೆ ನೀಡಬಾರದು ಅಂದುಕೊಂಡಿದ್ದೀನಿ ಅಂತಾ ಹೇಳುತ್ತಲೇ ವಿಪಕ್ಷ ನಾಯಕ ಸಿದ್ದರಾಮಯ್ಯ JDS ವರಿಷ್ಠರಿಗೆ ಟಾಂಗ್ ಕೊಡೋಕೆ ಮುಂದಾದರು.
ಮೈಸೂರು: ಪಾಪ.. ದೇವೇಗೌಡರ ಬಗ್ಗೆ ನಾನು ಪ್ರತಿಕ್ರಿಯೆ ನೀಡಬಾರದು ಅಂದುಕೊಂಡಿದ್ದೀನಿ ಅಂತಾ ಹೇಳುತ್ತಲೇ ವಿಪಕ್ಷ ನಾಯಕ ಸಿದ್ದರಾಮಯ್ಯ JDS ವರಿಷ್ಠರಿಗೆ ಟಾಂಗ್ ಕೊಡೋಕೆ ಮುಂದಾದರು.
ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಕಟ್ಟಿಲ್ಲ ಎಂಬ ಹೇಳಿಕೆ ವಿಚಾರವಾಗಿ ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು 1999ರಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿದ್ದವರು ಯಾರು? 6 ವರ್ಷಗಳ ಕಾಲ JDS ಅಧ್ಯಕ್ಷನಾಗಿದ್ದವನು ನಾನು. ಹಾಗಾದರೆ ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ ಎಂದು ಹೆಚ್.ಡಿ.ದೇವೇಗೌಡರಿಗೆ ಸಿದ್ದರಾಮಯ್ಯ ಪ್ರಶ್ನೆ ಹಾಕಿದ್ದಾರೆ.
‘ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ತಿರಸ್ಕರಿಸಿದ್ದು ನಾನಂತೂ ಅಲ್ಲ’ ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ತಿರಸ್ಕರಿಸಿದ್ದು ನಾನಂತೂ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಖರ್ಗೆ ಹೆಸರು ಯಾರು ತಿರಸ್ಕರಿಸಿದ್ದರೆಂದು ಹೆಸರು ಹೇಳಲಿ. ಹೆಚ್.ಡಿ.ದೇವೇಗೌಡರು ಹೆಸರು ಹೇಳಲಿ ಎಂದು ಸಿದ್ದರಾಮನಹುಂಡಿ ಗ್ರಾಮದಲ್ಲಿ ಸಿದ್ದರಾಮಯ್ಯ ಸವಾಲು ಹಾಕಿದರು.
‘ವರದಿ ಸ್ವೀಕಾರ ಮಾಡದಂತೆ ಕುಮಾರಸ್ವಾಮಿ ಹೆದರಿಸಿದ್ದರು’ ಜಾತಿ ಗಣತಿ ವರದಿ ಪಡೆಯಲು HDK ಅಡ್ಡಿಪಡಿಸಿದ್ದರು ಎಂಬ ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿಕೆಗೆ ಪುಟ್ಟರಂಗಶೆಟ್ಟಿ ಸತ್ಯವನ್ನು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ವರದಿ ಸ್ವೀಕಾರ ಮಾಡದಂತೆ ಕುಮಾರಸ್ವಾಮಿ ಅವರನ್ನು ಹೆದರಿಸಿದ್ದರು. HDK ಏಕೆ ವರದಿ ಪಡೆಯಲು ಹಿಂದೇಟು ಹಾಕಿದ್ರೋ ಗೊತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
‘ಇದು ಕುರುಬರನ್ನ ಇಬ್ಭಾಗ ಮಾಡುವ ಹುನ್ನಾರ’ ಕುರುಬ ಸಮುದಾಯಕ್ಕೆ ST ಮೀಸಲಾತಿಗೆ ಹೋರಾಟ ವಿಚಾರವಾಗಿ ಹೋರಾಟ ಮಾಡುವ ಅಗತ್ಯವೇ ಇಲ್ಲ ಎಂದ ಸಿದ್ದರಾಮಯ್ಯ ಇದು ಕುರುಬರನ್ನ ಇಬ್ಭಾಗ ಮಾಡುವ ಹುನ್ನಾರ ಎಂದು ಹೇಳಿದರು.
ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಶಿಫಾರಸು ಮಾಡಿದ್ದೆ. ಸಿಎಂ ಆಗಿದ್ದಾಗ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸು ಮಾಡಿದ್ದೆ. ಈಶ್ವರಪ್ಪ, ಹೆಚ್.ವಿಶ್ವನಾಥ್ ಇಬ್ಬರೂ ಬಿಜೆಪಿಯಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಅವರದೇ ಸರ್ಕಾರ ಇದೆ. ಕುಲಶಾಸ್ತ್ರ ಅಧ್ಯಯನ ವರದಿ ಪಡೆದು ಶಿಫಾರಸು ಮಾಡಿಸಲಿ ಎಂದು ಹೇಳಿದರು.
ಇತ್ತ, ಗ್ರಾ.ಪಂ. ಚುನಾವಣೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ತಮ್ಮ ಮತ ಚಲಾಯಿಸಿದರು. ಜಿಲ್ಲೆಯ ಸಿದ್ದರಾಮನಹುಂಡಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಳಿಕ ಗ್ರಾಮದ ಸಿದ್ದರಾಮೇಶ್ವರ ದೇವಾಲಯಕ್ಕೆ ಭೇಟಿಕೊಟ್ಟು ದೇವರ ದರ್ಶನ ಪಡೆದರು. ದೇವರ ದರ್ಶನ ಪಡೆದ ನಂತರ ತಮ್ಮ ಸ್ನೇಹಿತರ ಮನೆಯಲ್ಲಿ ಸಿದ್ದು ಭಾನುವಾರದ ಬಾಡೂಟದ ಅಂಗವಾಗಿ ಮುದ್ದೆ ಜೊತೆ ನಾಟೀಕೋಳಿ, ಚಿಕನ್ ಚಾಪ್ಸ್ ಸವಿದರು.
ಅಖಂಡ ಪ್ರತಿಜ್ಞೆ: ಪ್ರಧಾನಿ ಮೋದಿಯ ಉದ್ದನೆಯ ಕೇಶದ ಹಿಂದಿನ ಕಾರಣ ಬಿಚ್ಚಿಟ್ಟ ಪೇಜಾವರ ಶ್ರೀಗಳು