AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PFI, SDPI ಸಂಘಟನೆಗಳನ್ನ ಬೆಳೆಸುತ್ತಿರುವುದೇ BJP; ಅವರದೇ ಸರ್ಕಾರವಿದೆ, ಬೇಕಿದ್ದರೆ ಬ್ಯಾನ್​ ಮಾಡಲಿ: ಸಿದ್ದರಾಮಯ್ಯ ಸವಾಲ್

ಅಸಲಿಗೆ, PFI ಹಾಗೂ SDPI ಬಿಜೆಪಿ ಪಕ್ಷದ B ಟೀಂ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಮಲ ಪಾಳಯಕ್ಕೆ ಟಾಂಗ್ ಕೊಟ್ಟಿದ್ದಾರೆ. ಜೊತೆಗೆ, ಎರಡೂ ಸಂಘಟೆನಗಳನ್ನು ನಿಷೇಧಿಸುವಂತೆ ಬಿಜೆಪಿ ಸರ್ಕಾರಕ್ಕೆ ಸವಾಲ್​ ಹಾಕಿದ್ದಾರೆ.

PFI, SDPI ಸಂಘಟನೆಗಳನ್ನ ಬೆಳೆಸುತ್ತಿರುವುದೇ BJP; ಅವರದೇ ಸರ್ಕಾರವಿದೆ, ಬೇಕಿದ್ದರೆ ಬ್ಯಾನ್​ ಮಾಡಲಿ: ಸಿದ್ದರಾಮಯ್ಯ ಸವಾಲ್
ಸಿದ್ದರಾಮಯ್ಯ
KUSHAL V
|

Updated on:Feb 22, 2021 | 5:16 PM

Share

ಮಂಗಳೂರು: ಅಸಲಿಗೆ, PFI ಹಾಗೂ SDPI ಬಿಜೆಪಿ ಪಕ್ಷದ B ಟೀಂ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಮಲ ಪಾಳಯಕ್ಕೆ ಟಾಂಗ್ ಕೊಟ್ಟಿದ್ದಾರೆ. ಜೊತೆಗೆ, ಎರಡೂ ಸಂಘಟೆನಗಳನ್ನು ನಿಷೇಧಿಸುವಂತೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಬಿಜೆಪಿ ಸರ್ಕಾರಕ್ಕೆ ಸವಾಲ್​ ಹಾಕಿದ್ದಾರೆ.

ಸರ್ಕಾರವೇ PFI ಗೆ ಱಲಿ ನಡೆಸಲು ಅನುಮತಿ ಕೊಟ್ಟು ಇದೀಗ ಎರಡೂ ಸಂಘಟನೆಗಳನ್ನ ಬ್ಯಾನ್​ ಮಾಡಲೇಬೇಕು ಎಂಬ ಹೇಳಿಕೆಗಳನ್ನು ಕೆಲ ಬಿಜೆಪಿ ನಾಯಕರು ನೀಡುತ್ತಿದ್ದಾರೆ. PFI ಮತ್ತು SDPI ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರ ನಮ್ಮ ಬಳಿಯಿದೆ ಎಂದು ಹಲವು ಬಿಜೆಪಿ ನಾಯಕರು ಹೇಳಿದ್ದಾರೆ. ಹೀಗಿರುವಾಗ ರಾಜ್ಯ ಸರ್ಕಾರವು ಅವರದ್ದೇ ಕೇಂದ್ರಕ್ಕೆ ಇವೆಲ್ಲವನ್ನು ನೀಡಿ ಎರಡೂ ಸಂಘಟನೆಗಳನ್ನು ಬ್ಯಾನ್​ ಮಾಡಿಸಲಿ ಎಂದು ಸಿದ್ದರಾಮಯ್ಯ ಸವಾಲ್​ ಹಾಕಿದ್ದಾರೆ.

ಈಗ ರಾಜ್ಯ ಮತ್ತು ಕೇಂದ್ರದಲ್ಲಿ BJP ಪಕ್ಷವೇ ಅಧಿಕಾರದಲ್ಲಿರುವುದು. ಹಾಗಾಗಿ, ಒಂದು ವೇಳೆ, ಇವರು PFI ಹಾಗೂ SDPIನ ಬ್ಯಾನ್​ ಮಾಡೋಕೆ ಮುಂದಾದರೆ ನಾವು ವಿರೋಧಿಸುವುದಿಲ್ಲ. ಆದರೆ, ಬಿಜೆಪಿಯವರಿಗೆ PFI ಹಾಗೂ SDPIನ ಬ್ಯಾನ್​ ಮಾಡುವ ಯಾವುದೇ ಆಸಕ್ತಿಯಿಲ್ಲ. ತಮ್ಮ ಅನುಕೂಲಕ್ಕಾಗಿ ಬಿಜೆಪಿಯವರು ಈ ಎರಡು ಸಂಘಟನೆಗಳನ್ನು ಪೋಷಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಅಂದ ಹಾಗೆ, ಕಳೆದ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆಸಿದ್ದ ಱಲಿ ವೇಳೆ PFI ಸಂಘಟನೆಯ ಕಾರ್ಯದರ್ಶಿ ಅನೀಸ್​ ಅಹ್ಮದ್​ ರಾಮಮಂದಿರಕ್ಕೆ ಒಂದು ಪೈಸೆಯೂ ಕೊಡಬೇಡಿ ಎಂದು ಭಾಷಣ ಮಾಡಿದ್ದರು. ಜೊತೆಗೆ, RSS ವಿರುದ್ಧ ಸಹ ಹರಿಹಾಯ್ದಿದ್ದರು. ಅನೀಸ್​ ಹೇಳಿಕೆಗೆ ಹಲವಾರು ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿ ಸಂಘಟನೆಯನ್ನು ಬ್ಯಾನ್​ ಮಾಡೋಕೆ ಒತ್ತಾಯ ಮಾಡಿದ್ದರು.

‘ಮೀಸಲಾತಿ ಕೇಳುವುದರಲ್ಲಿ ತಪ್ಪೇನಿಲ್ಲ’ ಮೀಸಲಾತಿಗಾಗಿ ಹಲವು ಸಮಾಜಗಳ ಹೋರಾಟ ವಿಚಾರವಾಗಿ ಮೀಸಲಾತಿ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಸಂವಿಧಾನಾತ್ಮಕವಾಗಿ ಅರ್ಹತೆ ಇರುವವರಿಗೆ ನೀಡಲಿ ಎಂದು ಮಂಗಳೂರಿನಿಂದ ಉಡುಪಿಗೆ ತೆರಳಿದ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಪರಿಶೀಲಿಸಿ. ಮೀಸಲಾತಿಯ ಬಗ್ಗೆ ಶಿಫಾರಸು ಮಾಡಬೇಕು. ಸರ್ಕಾರ ಸಂವಿಧಾನಾತ್ಮಕವಾಗಿ ಶೀಘ್ರವೇ ತೀರ್ಮಾನಿಸಲಿ ಎಂದು ಉಡುಪಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

‘ನಾನು ಯಾರಿಂದಲೂ 5 ಪೈಸೆಯನ್ನೂ ಪಡೆದಿಲ್ಲ’ IMA ಮುಖ್ಯಸ್ಥ ಮನ್ಸೂರ್‌ ₹5 ಕೋಟಿ ನೀಡಿರುವ ವಿಚಾರವಾಗಿ ನನಗೂ ಮನ್ಸೂರ್‌ ಖಾನ್‌ಗೂ ಯಾವುದೇ ಸಂಬಂಧ ಇಲ್ಲ. ಯಾರಿಗೋ ಕೊಟ್ಟು, ನನಗೆ ಕೊಟ್ಟಿದ್ದಾನೆ ಅಂದರೆ ಹೇಗೆ? ಅವನು ಯಾರಿಗೆ ಕೊಟ್ಟಿದ್ದಾನೋ ಅವನಿಂದ ವಸೂಲಿ ಮಾಡಿ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ರಾಮಮಂದಿರ ನಿರ್ಮಾಣಕ್ಕೆ 1 ಪೈಸೆಯೂ ಕೊಡಬೇಡಿ; ಅದು ರಾಮಮಂದಿರವಲ್ಲ, RSS​ ಮಂದಿರ -PFI ಕಾರ್ಯದರ್ಶಿ ಅನೀಸ್ ಅಹ್ಮದ್

Published On - 5:11 pm, Mon, 22 February 21

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?