ಹೆಬ್ಬಾಳದ ಆ ವ್ಯಕ್ತಿ ಹೇಮಾವತಿ ಸೇತುವೆ ಬಳಿ ರಾತ್ರಿ ಕಾರು ನಿಲ್ಲಿಸಿ ಎಲ್ಲಿ ಹೋದ?

ಹಾಸನ: ಕೆಫೆ ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ್ ಆತ್ಮಹತ್ಯೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ನೇತ್ರಾವತಿ ನದಿ ಬಳಿ ತಮ್ಮ ಕಾರು ನಿಲ್ಲಿಸಿ ಕಾಣೆಯಾಗಿದ್ದರು. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆಯ ಮೂಲಕ ತಿಳಿದು ಬಂದಿತ್ತು. ಈಗ ಇದೇ ಮಾದರಿಯಲ್ಲಿ ಹೇಮಾವತಿ ಸೇತುವೆ ಮೇಲೆ ಕಾರ್ ನಿಲ್ಲಿಸಿ ಮಾಲೀಕ ನಾಪತ್ತೆಯಾಗಿರುವ ಘಟನೆ ಹಾಸನ‌ ಜಿಲ್ಲೆ ಗೊರೂರು ಹೇಮಾವತಿ ಜಲಾಶಯದ ಹಿನ್ನೀರಿನ ಬಳಿ ನಡೆದಿದೆ. ಶೆಟ್ಟಿಹಳ್ಳಿ ಬ್ರಿಡ್ಜ್ ಮೇಲೆ ಕೆಎ 53 ಪಿ 3777 ನಂಬರಿನ ಕಾರು ಬಿಟ್ಟು […]

ಹೆಬ್ಬಾಳದ ಆ ವ್ಯಕ್ತಿ ಹೇಮಾವತಿ ಸೇತುವೆ ಬಳಿ ರಾತ್ರಿ ಕಾರು ನಿಲ್ಲಿಸಿ ಎಲ್ಲಿ ಹೋದ?

Updated on: Sep 08, 2020 | 10:26 AM

ಹಾಸನ: ಕೆಫೆ ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ್ ಆತ್ಮಹತ್ಯೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ನೇತ್ರಾವತಿ ನದಿ ಬಳಿ ತಮ್ಮ ಕಾರು ನಿಲ್ಲಿಸಿ ಕಾಣೆಯಾಗಿದ್ದರು. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆಯ ಮೂಲಕ ತಿಳಿದು ಬಂದಿತ್ತು. ಈಗ ಇದೇ ಮಾದರಿಯಲ್ಲಿ ಹೇಮಾವತಿ ಸೇತುವೆ ಮೇಲೆ ಕಾರ್ ನಿಲ್ಲಿಸಿ ಮಾಲೀಕ ನಾಪತ್ತೆಯಾಗಿರುವ ಘಟನೆ ಹಾಸನ‌ ಜಿಲ್ಲೆ ಗೊರೂರು ಹೇಮಾವತಿ ಜಲಾಶಯದ ಹಿನ್ನೀರಿನ ಬಳಿ ನಡೆದಿದೆ.

ಶೆಟ್ಟಿಹಳ್ಳಿ ಬ್ರಿಡ್ಜ್ ಮೇಲೆ ಕೆಎ 53 ಪಿ 3777 ನಂಬರಿನ ಕಾರು ಬಿಟ್ಟು ಮಾಲೀಕ ನಾಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿಯಿಂದ ಕಾರು ಅಲ್ಲೇ ನಿಂತಿದೆ. ಕಾರಿನಲ್ಲಿ ಬೆಂಗಳೂರಿನ ಹೆಬ್ಬಾಳ ಮೂಲದ ಹರೀಶ್ ಎಂಬುವವರ ಡಿಎಲ್ ಪತ್ತೆಯಾಗಿದ್ದು. ಕಾರು ಬಿಟ್ಟು ಮಾಲೀಕ ಎಲ್ಲಿ ಹೋಗಿರ ಬಹುದೆಂಬ ಬಗ್ಗೆ ಹಲವು ಅನುಮಾನ ಉಂಟಾಗಿದೆ. ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.