ಕುಟುಂಬಗಳ ಮಧ್ಯೆ ಜಗಳ, ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಕುಟುಂಬಗಳ ಮಧ್ಯೆ ಜಗಳ, ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಸಾಂದರ್ಭಿಕ ಚಿತ್ರ

ಬಾಗಲಕೋಟೆ: ಆಸ್ತಿಗಾಗಿ 2 ಕುಟುಂಬಗಳ ಮಧ್ಯೆ ಜಗಳವಾಗಿ ವ್ಯಕ್ತಿಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜಿಲ್ಲೆಯ ಬಾದಾಮಿ ತಾಲೂಕಿನ ಲೋಕಾಪುರದಲ್ಲಿ ಇಂತಹ ಘಟನೆ ನಡೆದಿದೆ.

ಚಿಕ್ಕಪ್ಪ ಹಾಗೂ ಮಕ್ಕಳ ಮಧ್ಯೆ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಆಸ್ತಿಗಾಗಿ 2 ಕುಟುಂಬಗಳ ಮಧ್ಯೆ ಜಗಳ ಉಂಟಾಗಿತ್ತು. ಹೀಗಾಗಿ ಪರಸ್ಪರ ಮನೆಗೆ ಬೀಗ ಹಾಕಿಕೊಂಡು ನಿನ್ನೆ ಇಡೀ ದಿನ ಎರಡೂ ಕುಟುಂಬಗಳು ಹೊರಗಿದ್ದವು. ಬಳಿಕ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಓರ್ವನ ಶವ ಪತ್ತೆಯಾಗಿದೆ.

ಹೊಲದಲ್ಲಿ ಹನುಮಂತ ಚಿತ್ರಬಾನುಕೋಟೆ(38) ಶವ ಸಿಕ್ಕಿದ್ದು, ಚಿಕ್ಕಪ್ಪ, ಮಕ್ಕಳು ಸೇರಿ ಹನುಮಂತ ಹತ್ಯೆಗೈದಿದ್ದಾರೆ ಎಂದು ಮೃತ ಹನುಮಂತನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹನುಮಂತ ಹಾಗೂ ಆತನ ಚಿಕ್ಕಪ್ಪ ಸಿದ್ದಪ್ಪನ ಮಧ್ಯೆ ಆಸ್ತಿ ಬಗ್ಗೆ ಆಗಾಗ ಜಗಳ‌ ನಡೆಯುತ್ತಿತ್ತು. ಹೀಗಾಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ

ಬೆಳಗಿನ ಜಾವ ಕೆರೆಯಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿ ಶವ ಪತ್ತೆ

Click on your DTH Provider to Add TV9 Kannada