ಇದೇನು ಕೋವಿಡ್ ಕೇರ್ ಸೆಂಟರಾ? ಸಾವಿನ ಕೇಂದ್ರವಾ? ಆಹಾರವೇ ಇಲ್ಲ ಇಲ್ಲಿ

ಕಲಬುರಗಿ: ಕೊರೊನಾ ಹೆಮ್ಮಾರಿಯನ್ನು ನಿಯಂತ್ರಿಸಲು ಇನ್ನಿಲ್ಲದ ಸರ್ಕಸ್ ನಡೆಯುತ್ತಿದೆ. ಆದ್ರೆ ಕೆಲ ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯವನ್ನ ಸರಿಯಾಗಿ ನಿಭಾಯಿಸುತ್ತಿಲ್ಲ. ಪರಿಣಾಮ ಕಲಬುರಗಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೊರೊನಾ ಸೋಂಕಿತರು ಉಟ, ತಿಂಡಿಯಿಲ್ಲದೇ ಪರದಾಡುತ್ತಿದ್ದಾರೆ. ಹೌದು ಕಲಬುರಗಿ ನಗರದ ಹೊರವಲಯದ ಸ್ಲಂಬೋರ್ಡ್‌ನಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೊರೊನಾ ಸೋಂಕಿತರು 11 ಗಂಟೆಯಾದ್ರೂ ತಿಂಡಿ, ಉಪಹಾರ ಸಿಗದೆ ಉಪವಾಸದಿಂದ ಪರದಾಡುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಸೋಂಕಿತರಿಗೆ ಬೆಳಗಿನ ಉಪಹಾರವೇ ಸಿಗುತ್ತಿಲ್ಲ. ಇದು ಕೊರೊನಾ ಸೋಂಕಿತರಿಗೆ ತೀವ್ರ ಹತಾಶೆ ಮತ್ತು […]

ಇದೇನು ಕೋವಿಡ್ ಕೇರ್ ಸೆಂಟರಾ? ಸಾವಿನ ಕೇಂದ್ರವಾ? ಆಹಾರವೇ ಇಲ್ಲ ಇಲ್ಲಿ

Updated on: Jul 17, 2020 | 2:16 PM

ಕಲಬುರಗಿ: ಕೊರೊನಾ ಹೆಮ್ಮಾರಿಯನ್ನು ನಿಯಂತ್ರಿಸಲು ಇನ್ನಿಲ್ಲದ ಸರ್ಕಸ್ ನಡೆಯುತ್ತಿದೆ. ಆದ್ರೆ ಕೆಲ ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯವನ್ನ ಸರಿಯಾಗಿ ನಿಭಾಯಿಸುತ್ತಿಲ್ಲ. ಪರಿಣಾಮ ಕಲಬುರಗಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೊರೊನಾ ಸೋಂಕಿತರು ಉಟ, ತಿಂಡಿಯಿಲ್ಲದೇ ಪರದಾಡುತ್ತಿದ್ದಾರೆ.

ಹೌದು ಕಲಬುರಗಿ ನಗರದ ಹೊರವಲಯದ ಸ್ಲಂಬೋರ್ಡ್‌ನಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೊರೊನಾ ಸೋಂಕಿತರು 11 ಗಂಟೆಯಾದ್ರೂ ತಿಂಡಿ, ಉಪಹಾರ ಸಿಗದೆ ಉಪವಾಸದಿಂದ ಪರದಾಡುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಸೋಂಕಿತರಿಗೆ ಬೆಳಗಿನ ಉಪಹಾರವೇ ಸಿಗುತ್ತಿಲ್ಲ. ಇದು ಕೊರೊನಾ ಸೋಂಕಿತರಿಗೆ ತೀವ್ರ ಹತಾಶೆ ಮತ್ತು ಆಕ್ರೋಶ ತರಿಸಿದೆ.

ಈ ಬಗ್ಗೆ ಕೋವಿಡ್ ಕೇರ್ ಸೆಂಟರ್ ಮೇಲ್ವಿಚಾರಕರನ್ನು ಕೇಳಿದ್ರೆ, ಅವರು ನಮಗೆ ಕಳಿಸಿದಷ್ಟು ಆಹಾರವನ್ನ ಮಾತ್ರ ಹಂಚಿದ್ದೇವೆ. ಕಡಿಮೆ ಕಳಿಸಿದ್ರೆ ನಾವೇನು ಮಾಡೋಕಾಗುತ್ತೆ, ಉಳಿದವರಿಗೆ ನಾವೇನೂ ಮಾಡುವುದಕ್ಕೆ ಆಗುವುದಿಲ್ಲ ಅಂತಾ ಉಡಾಫೆಯ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ. ಪರಿಣಾಮ ಕೊರೊನಾ ಸೋಂಕಿತರು ಉಪವಾಸವೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Published On - 1:00 pm, Fri, 17 July 20