AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇತಿಹಾಸಕ್ಕೆ ಜೀವ ತುಂಬಬೇಕಿದ್ದ ಹೈದರಾಲಿ ಜನ್ಮಸ್ಥಳದ ಕೋಟೆ ನಿರ್ಲ್ಯಕ್ಷಕ್ಕೆ ತುತ್ತು!

ಐತಿಹಾಸಿಕ ಪುರುಷ ಟಿಪ್ಪುವಿನಷ್ಟೇ, ಪ್ರಖ್ಯಾತಿ ಹೊಂದಿದ್ದ ಅವರ ತಂದೆ ಹೈದರಾಲಿಯ ಜನ್ಮಸ್ಥಳ ಒಂದು ಕಾಲದಲ್ಲಿ ಪ್ರೇಕ್ಷಣೀಯ ಸ್ಥಳ, ಆದ್ರೆ ಇಂದು ಅದು ಸರಿಯಾದ ನಿರ್ವಹಣೆಯ ಕೊರತೆಯಿಂದ ನಿರ್ಲ್ಯಕ್ಷಕ್ಕೊಳಗಾಗಿದೆ. ಸುತ್ತಲೂ ಇರುವ ಸುಂದರವಾದ ಕೋಟೆ, ಕೋಟೆಯ ಮೇಲೆ ನಿಂತು ನೋಡಿದಾಗ ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯ ಇಂಥಾ ದೃಶ್ಯಗಳು ನಮಗೆ ಕಾಣಸಿಗೋದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಹೈದರಾಲಿ ಕೋಟೆಯಲ್ಲಿ. ಹೌದು ಇದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಹೈದರಾಲಿ ಹುಟ್ಟಿದ ಸ್ಥಳ ಎಂದೇ ಪ್ರಸಿದ್ದಿ ಪಡೆದಿರುವ […]

ಇತಿಹಾಸಕ್ಕೆ ಜೀವ ತುಂಬಬೇಕಿದ್ದ ಹೈದರಾಲಿ ಜನ್ಮಸ್ಥಳದ ಕೋಟೆ ನಿರ್ಲ್ಯಕ್ಷಕ್ಕೆ ತುತ್ತು!
ಸಾಧು ಶ್ರೀನಾಥ್​
|

Updated on: Jul 17, 2020 | 12:28 PM

Share

ಐತಿಹಾಸಿಕ ಪುರುಷ ಟಿಪ್ಪುವಿನಷ್ಟೇ, ಪ್ರಖ್ಯಾತಿ ಹೊಂದಿದ್ದ ಅವರ ತಂದೆ ಹೈದರಾಲಿಯ ಜನ್ಮಸ್ಥಳ ಒಂದು ಕಾಲದಲ್ಲಿ ಪ್ರೇಕ್ಷಣೀಯ ಸ್ಥಳ, ಆದ್ರೆ ಇಂದು ಅದು ಸರಿಯಾದ ನಿರ್ವಹಣೆಯ ಕೊರತೆಯಿಂದ ನಿರ್ಲ್ಯಕ್ಷಕ್ಕೊಳಗಾಗಿದೆ.

ಸುತ್ತಲೂ ಇರುವ ಸುಂದರವಾದ ಕೋಟೆ, ಕೋಟೆಯ ಮೇಲೆ ನಿಂತು ನೋಡಿದಾಗ ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯ ಇಂಥಾ ದೃಶ್ಯಗಳು ನಮಗೆ ಕಾಣಸಿಗೋದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಹೈದರಾಲಿ ಕೋಟೆಯಲ್ಲಿ. ಹೌದು ಇದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಹೈದರಾಲಿ ಹುಟ್ಟಿದ ಸ್ಥಳ ಎಂದೇ ಪ್ರಸಿದ್ದಿ ಪಡೆದಿರುವ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೂದಿಕೋಟೆ.

ಐತಿಹ್ಯವನ್ನು ಕೂಗಿ ಹೇಳುವಷ್ಟು ಇತಿಹಾಸ ಹೊಂದಿದ್ದರೂ.. ಇಂದಿಗೂ ಈ ಬೂದಿಕೋಟೆಯಲ್ಲಿ ಬೃಹತ್ತಾದ ಕೋಟೆ, ಕಲ್ಯಾಣಿ ಹಾಗೂ ಆಗಿನ ಕಾಲದಲ್ಲಿ ನಿರ್ಮಾಣವಾಗಿರುವ ವೇಣುಗೋಪಾಲ ಸ್ವಾಮಿ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯಗಳು ಕಾಣಸಿಗುತ್ತವೆ. ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಇಲಾಖೆ ಇದನ್ನು ಒಂದು ಪ್ರವಾಸಿ ಕೇಂದ್ರವಾಗಿ ಅಭಿವೃದ್ದಿ ಪಡಿಸುವಲ್ಲಿ ನಿರ್ಲ್ಯಕ್ಷ ತೋರಿರುವ ಪರಿಣಾಮ, ತನ್ನ ಐತಿಹ್ಯವನ್ನು ಕೂಗಿ ಹೇಳುವಷ್ಟು ಇತಿಹಾಸ ಹೊಂದಿದ್ದರು ಹೈದರಾಲಿ ಕೋಟೆಯಲ್ಲಿ ಮಾತ್ರ ಸದ್ದು ಉಡುಗಿಹೋಗಿದೆ. ಇದು ಶಾಲಾ ಮಕ್ಕಳಿಗೆ, ಇತಿಹಾಸಕಾರರಿಗೆ ಅಧ್ಯಯನ ವಸ್ತುವಾಗಬೇಕಿದ್ದ ಬೂದಿಕೋಟೆ ಇಂದು ನಿರ್ಲ್ಯಕ್ಷ ಸ್ಥಳವಾಗಿ ನಿಂತಿದೆ.

ಸರ್ವಧರ್ಮ ಸಮನ್ವಯಿ ಹೈದರಾಲಿ ಹೈದರಾಲಿ ಸರ್ವಧರ್ಮ ಸಮನ್ವಯಿಯಾಗಿ ಭಾಷೆ, ಸಂಸ್ಕೃತಿಗೆ, ರಾಜ್ಯದ ದೇವಾಲಯಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು, ತನ್ನ ಶೌರ್ಯ ಪರಾಕ್ರಮಗಳಿಂದ ಹೆಸರುವಾಸಿಯಾಗಿದ್ದವ. ಇಂಥ ಹೈದರಾಲಿಯ ಹುಟ್ಟಿದ ಸ್ಥಳವನ್ನು ಅಭಿವೃದ್ದಿಪಡಿಸದ ಸರ್ಕಾರಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಆಸಕ್ತಿ ವಹಿಸುತ್ತಿವೆ. ಇತಿಹಾಸವನ್ನು ಹೇಳುವ ಸ್ಮಾರಕಗಳನ್ನು ಉಳಿಸಬೇಕು, ಆದ್ರೆ ಸರ್ಕಾರಗಳಿಗೆ ಸ್ಮಾರಕಗಳ ಬಗ್ಗೆ ಆಸಕ್ತಿ ಇಲ್ಲದ ಕಾರಣ ಇಂಥ ಅದೆಷ್ಟೋ ಅದ್ಬುತಗಳು ಅರಿವಿಗೆ ಬಾರದೆ ಮುಚ್ಚಿ ಹೋಗುತ್ತಿವೆ.

ಒಟ್ಟಾರೆ ಇತಿಹಾಸ ಅಂದ್ರೆ ಕೇವಲ ಪುಸ್ತಕದಲ್ಲಿರುವ ಕಥೆಯಲ್ಲ ಬದಲಾಗಿ ವರ್ಷಾನುಗಟ್ಟೆಲೆ ನೆಲೆ ನಿಂತು ಇತಿಸಾಸಕ್ಕೆ ಸಾಕ್ಷೀಭೂತವಾಗಿ ನಿಲ್ಲುವ ಸ್ಮಾರಕಗಳನ್ನು ಉಳಿಸುವ, ಅದರ ಮಹತ್ವವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ದಾಗ ಮಾತ್ರವೇ ಇತಿಹಾಸಕ್ಕೆ ಜೀವ. ಹಾಗಾಗಿ ಸರ್ಕಾರಗಳು ಐತಿಹಾಸಿಕ ಸ್ಮಾರಕಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಅನ್ನೋದು ಸ್ಥಳೀಯರ ಆಗ್ರಹ. -ರಾಜೇಂದ್ರ ಸಿಂಹ