‘ವಕೀಲ್ ಸಾಬ್’ ಆಗ್ತಿದ್ದಾರೆ ಪವನ್ ಕಲ್ಯಾಣ್

ಚಿತ್ರದ ಪೋಸ್ಟರ್​ ನೋಡಿ ಖುಷಿಪಟ್ಟಿರುವ ಅಭಿಮಾನಿಗಳು, ಪವರ್​ ಸ್ಟಾರ್​ ಸಿನಿಮಾ ಕಣ್ತುಂಬಿಕೊಳ್ಳಲು ಹಾತೊರೆಯುತ್ತಿದ್ದಾರೆ.

‘ವಕೀಲ್ ಸಾಬ್’ ಆಗ್ತಿದ್ದಾರೆ ಪವನ್ ಕಲ್ಯಾಣ್
ಪವರ್ ಸ್ಟಾರ್ ಪವನ್ ಕಲ್ಯಾಣ್
sandhya thejappa

|

Dec 16, 2020 | 5:57 PM

ಮುಂಬೈ: ಬಹಳ ಸಮಯದ ನಂತರ ಜನಪ್ರಿಯ ನಟ ಪವರ್ ಸ್ಟಾರ್ ಪವನ್ ಕಲ್ಯಾಟ್ ‘ವಕೀಲ್ ಸಾಬ್’ ಚಿತ್ರದೊಂದಿಗೆ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಪೋಸ್ಟರ್​ ನೋಡಿ ಖುಷಿಪಟ್ಟಿರುವ ಅಭಿಮಾನಿಗಳು, ಪವರ್​ ಸ್ಟಾರ್​ ಸಿನಿಮಾ ಕಣ್ತುಂಬಿಕೊಳ್ಳಲು ಹಾತೊರೆಯುತ್ತಿದ್ದಾರೆ. ಹೆಸರಿಗೆ ತಕ್ಕಂತೆ ಪೋಸ್ಟರ್​ನಲ್ಲಿ ವಕೀಲರ ಕೋಟ್​ ಧರಿಸಿ ಪೋಸ್​ ಕೊಟ್ಟಿರುವ ಪವನ್ ಕಲ್ಯಾಣ್, ಈ ಚಿತ್ರವು ನ್ಯಾಯಲಯದಲ್ಲಿ ನಡೆಯುವ ವಾದ-ವಿವಾದನಗಳನ್ನು ಆಧರಿಸಿದ ಕಥೆ ಹೊಂದಿದೆ ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಇಂದು ಪವನ್ ಶೂಟಿಂಗ್ ಸೆಟ್​ನಲ್ಲಿ ಕಾಣಿಸಿಕೊಂಡಿದ್ದು, ಹೊಡೆದಾಟದ ದೃಶ್ಯಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ದಿಲ್ ರಾಜು ಹಾಗೂ ಬೋನಿ ಕಪೂರ್ ಸೇರಿ ನಿರ್ಮಿಸುತ್ತಿರುವ  ಈ ಸಿನಿಮಾಕ್ಕೆ ಶ್ರುತಿ ಹಾಸನ್ ನಾಯಕಿ.

ಬಾಲಿವುಡ್ ವಿಡಿಯೋ ಸಾಂಗ್​ನಲ್ಲಿ ಮಿಂಚಲಿದ್ದಾರೆ ರಶ್ಮಿಕಾ ಮಂದಣ್ಣ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada