WhatsApp ಬದಲಿಗೆ ಜನರು Signal ಆ್ಯಪ್​ ಬಳಸ್ತಿರೋದೆಕೆ?: ಇಲ್ಲಿದೆ ವಿವರ

ಹೊಸ ವ್ಯವಸ್ಥೆಯಡಿ ವಾಟ್ಸಾಪ್‌ ಗ್ರಾಹಕರ ವ್ಯವಹಾರಗಳು, ಹಣ ಪಾವತಿ ಮಾಹಿತಿ, ಸ್ಥಳ, ವಾಟ್ಸಾಪ್‌ ಮೂಲಕ ನಡೆಸುವ ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿ ಸೇರಿ ವಿಚಾರವನ್ನು ಫೇಸ್‌ಬುಕ್‌ನ ಒಡೆತನದಲ್ಲಿರುವ ಕಂಪನಿಗಳ ಜೊತೆ ವಾಟ್ಸಾಪ್‌ ಹಂಚಿಕೊಳ್ಳಲು ಅವಕಾಶ ಇದೆ ಎನ್ನಲಾಗಿದೆ.

WhatsApp ಬದಲಿಗೆ ಜನರು Signal ಆ್ಯಪ್​ ಬಳಸ್ತಿರೋದೆಕೆ?: ಇಲ್ಲಿದೆ ವಿವರ
ಸಿಗ್ನಲ್​ ಆ್ಯಪ್
Follow us
ರಾಜೇಶ್ ದುಗ್ಗುಮನೆ
|

Updated on: Jan 08, 2021 | 7:32 PM

ವಾಟ್ಸಾಪ್​ ಬಳಕೆದಾರರ ಸಂಖ್ಯೆ ವಿಶ್ವಾದ್ಯಂತ ಸುಮಾರು 200 ಕೋಟಿ ಮೇಲಿದೆ. 2014ರಲ್ಲಿ ವಾಟ್ಸಾಪ್​ಅನ್ನು ಫೇಸ್​ಬುಕ್​ ಖರೀದಿಸಿದ ನಂತರ ಇದರ ಖ್ಯಾತಿ ಮತ್ತಷ್ಟು ಹೆಚ್ಚಿತ್ತು. ಸುರಕ್ಷಿತ ಮೆಸೇಜಿಂಗ್​ ಆ್ಯಪ್​ಗಳಲ್ಲಿ ಇದು ಕೂಡ ಒಂದು ಎಂದೇ ಹೇಳಲಾಗಿತ್ತು.

ಆದರೆ, ವಾಟ್ಸಾಪ್​ ಇತ್ತೀಚೆಗೆ ತನ್ನ ಪಾಲಿಸಿ ಬದಲಿಸಿತ್ತು. ಹೊಸ ವ್ಯವಸ್ಥೆಯಡಿ ವಾಟ್ಸಾಪ್‌ ಗ್ರಾಹಕರ ವ್ಯವಹಾರಗಳು, ಹಣ ಪಾವತಿ ಮಾಹಿತಿ, ಸ್ಥಳ, ವಾಟ್ಸಾಪ್‌ ಮೂಲಕ ನಡೆಸುವ ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿ ಸೇರಿ ವಿಚಾರವನ್ನು ಫೇಸ್‌ಬುಕ್‌ನ ಒಡೆತನದಲ್ಲಿರುವ ಕಂಪನಿಗಳ ಜೊತೆ ವಾಟ್ಸಾಪ್‌ ಹಂಚಿಕೊಳ್ಳಲು ಅವಕಾಶ ಇದೆ ಎನ್ನಲಾಗಿದೆ. ಈ ವಿಚಾರ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ಈಗ ವಾಟ್ಸಾಪ್ ಬದಲಿಗೆ ಬೇರೆ ಯಾವ ಆ್ಯಪ್​ ಬಳಕೆ ಮಾಡಬಹುದು ಎಂದು ಅನೇಕರು ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಅನೇಕರು ‘ಸಿಗ್ನಲ್’​ ಆ್ಯಪ್​ನತ್ತ ವಾಲುತ್ತಿದ್ದಾರೆ. ಹಾಗಾದರೆ, ಏನಿದು ಸಿಗ್ನಲ್​ ಆ್ಯಪ್​? ಇದನ್ನ ಬಳಕೆ ಮಾಡೋಕೆ ಆದ್ಯತೆ ನೀಡ್ತಿರೋದು ಏಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹೆಚ್ಚು ಸುರಕ್ಷಿತ ಸಿಗ್ನಲ್​ ಆ್ಯಪ್​ ಹೆಚ್ಚು ಸುರಕ್ಷಿತ. ಈ​ ಆ್ಯಪ್​ನಲ್ಲಿ ಕಾಲಕ್ರಮೇಣ ಮೆಸೇಜ್​ ಮಾಯವಾಗುತ್ತದೆ. ಅಂದರೆ, ಈ ಆ್ಯಪ್​ನಲ್ಲಿ ನೀವು ಯಾರದ್ದಾದರೂ ಜೊತೆ ಚ್ಯಾಟ್​ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಆ ಮೆಸೇಜ್​ಗೆ ಒಂದು ವ್ಯಾಲಿಡಿಟಿ ನಿರ್ಧಾರವಾಗಿತ್ತದೆ. ನಂತರದಲ್ಲಿ ಮೆಸೇಜ್​ ಸ್ವಯಂಚಾಲಿತವಾಗಿ ಡಿಲೀಟ್​ ಆಗುತ್ತದೆ.

ಓಪನ್ ಸೋರ್ಸ್​ ಸಿಗ್ನಲ್​ ಆ್ಯಪ್​ ಕೋಡ್​ ಓಪನ್​ ಸೋರ್ಸ್​​. ಅಂದರೆ, ಯಾರ ಬೇಕಾದರೂ ಈ ಆ್ಯಪ್​ನಲ್ಲಿ ಏನಾಗುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಬಹುದಾಗಿದೆ. ಆದರೆ, ವಾಟ್ಸಾಪ್​ನಲ್ಲಿ ಇದು ಸಾಧ್ಯವಿಲ್ಲ.

ನಿಮ್ಮದೇ ಸರ್ವರ್​ ರನ್​ ಮಾಡಬಹುದು ಸಿಗ್ನಲ್​ ಆ್ಯಪ್​ ಓಪನ್​ ಸೋರ್ಸ್​ ಆದ ಕಾರಣ ನೀವು ನಿಮ್ಮದೇ ಸರ್ವರ್​ ರನ್​ ಮಾಡಬಹುದು. ವೈಯಕ್ತಿಕ ಬಳಕೆಗೆ ಹಾಗೂ ಉದ್ಯಮಕ್ಕಾಗಿ ಇದು ತುಂಬಾನೇ ಸಹಕಾರಿಯಾಗಲಿದೆ.

ಫೇಸ್​ಬುಕ್​ ನಂಬೋದು ಹೇಗೆ? ಫೇಸ್​ಬುಕ್​ ಬಳಕೆದಾರರ ಮಾಹಿತಿ ಕದಿಯುತ್ತಿದೆ ಎನ್ನುವ ಆರೋಪ ಈ ಮೊದಲಿನಿಂದಲೂ ಇದೆ. ಜಾಹೀರಾತಿನ ಉದ್ದೇಶದಿಂದ ವಾಟ್ಸಾಪ್​ ಬಳಕೆದಾರ ಮೊಬೈಲ್​ ಸಂಖ್ಯೆಯನ್ನು ಫೇಸ್​ಬುಕ್​ ಸೋಷಿಯಲ್​ ನೆಟ್ವರ್ಕ್​ ಜೊತೆ ಹಂಚಿಕೊಂಡಿದ್ದಕ್ಕೆ 2017ರಲ್ಲಿ ಯುರೋಪ್​ನ ನಿಯಂತ್ರಕಗಳು ಫೇಸ್​ಬುಕ್​ ವಿರುದ್ಧ ಕ್ರಮಕೈಗೊಂಡಿತ್ತು. ಒಂದೊಮ್ಮೆ ವಾಟ್ಸಾಪ್​ ತನ್ನ ಬಳಕೆದಾರರ ಮಾಹಿತಿಯನ್ನು ಫೇಸ್​ಬುಕ್​ ಜೊತೆ ಹಂಚಿಕೊಂಡರೆ ಮುಂದೇನು ಎನ್ನುವ ಪ್ರಶ್ನೆ ಸಾಮಾನ್ಯರನ್ನು ಕಾಡುತ್ತಿದೆ.

How to | ವಾಟ್ಸ್ಆ್ಯಪ್ ಸಂದೇಶ ಹೋಮ್ ಸ್ಕ್ರೀನ್​ನಲ್ಲಿ ಪೂರ್ತಿಯಾಗಿ ಕಾಣಿಸದಂತೆ ಮಾಡುವುದು ಹೇಗೆ?

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ