
ದೇವನಹಳ್ಳಿ: ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ ರೌಡಿಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಬಾಗಲೂರು ಸರ್ಕಾರಿ ಆಸ್ಪತ್ರೆ ಬಳಿ ನಡೆದಿದೆ.
ರೌಡಿಶೀಟರ್ ಸೈಯ್ಯದ್ ಹನೀಫ್(29) ಮೇಲೆ ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಗುಂಡು ಹಾರಿಸಿದ್ದಾರೆ. ಹಲ್ಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಿದ್ದ ರೌಡಿಶೀಟರ್ ಸೈಯ್ಯದ್ ಬಂಧಿಸಲು ಪೊಲೀಸರು ತೆರಳಿದ್ರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಓಡಿದ್ದಾನೆ. ಆಗ ಸೈಯ್ಯದ್ ಹನೀಫ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಕಳೆದ ವಾರ ಈ ರೌಡಿಶೀಟರ್ ಸೈಯ್ಯದ್ ಸಿಗರೇಟ್ ಹಣ ಕೇಳಿದ ಮಹಿಳೆ ಮೇಲೆ ಹಲ್ಲೆ ಮಾಡಿದ್ದ. ಅಲ್ಲದೆ ಕಾಯುತ್ತಿದ್ದ ಎಣ್ಣೆ ಮೇಲೆ ಮಹಿಳೆಯನ್ನ ತಳ್ಳಿ ಎಸ್ಕೇಪ್ ಆಗಿದ್ದ. ಸದ್ಯ ಈ ಆರೋಪಿಯನ್ನು ಇಂದು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Published On - 11:27 am, Sat, 3 October 20