ಹೈದರಾಬಾದ್‌ನ ಬೋರಬಂಡ ಪ್ರದೇಶದಲ್ಲಿ 3-4 ಬಾರಿ ಭೂ ಕಂಪನ, ಜನರಲ್ಲಿ ಭೀತಿಯ ಕಂಪನಗಳು
ಹೈದರಾಬಾದ್: ನಗರದ ಬೋರಬಂಡ ಪ್ರದೇಶದಲ್ಲಿ 3-4 ಬಾರಿ ಭಾರಿ ಶಬ್ದದ ಜೊತೆಗೆ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಮನೆಯೊಳಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿರುವ ಜನ ನಿನ್ನೆ ರಾತ್ರಿಯಿಂದ ಭೂಮಿ ಹಲವು ಬಾರಿ ಕಂಪಿಸಿದ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಭಯ ಶುರುವಾಗಿದೆ. 10-15ನಿಮಿಷಗಳ ಕಾಲ ಸಿಕ್ಕಾಪಟ್ಟೆ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು 3-4 ಸಲ ಒಂದೇ ರೀತಿ ಸ್ಫೋಟದ ಹಾಗೆ ಕೇಳಿ ಜನತೆ ಭಯಗ್ರಸ್ತರಾಗಿದ್ದಾರೆ. ಹಾಗಾಗಿ, ಮನೆಯೊಳಗೆ ಹೋಗುವುದಕ್ಕೆ ಸ್ಥಳೀಯರು ಹೆದರುತ್ತಿದ್ದಾರೆ. ಆದ್ದರಿಂದ, ಮನೆಯಿಂದ ಹೊರಗಡೆಯೇ ಇದ್ದು ಬೀದಿಗಳಲ್ಲಿ ನಿಂತಿದ್ದಾರೆ. […]
ಹೈದರಾಬಾದ್: ನಗರದ ಬೋರಬಂಡ ಪ್ರದೇಶದಲ್ಲಿ 3-4 ಬಾರಿ ಭಾರಿ ಶಬ್ದದ ಜೊತೆಗೆ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ಸ್ಥಳೀಯರು ಹೇಳಿದ್ದಾರೆ.
ಮನೆಯೊಳಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿರುವ ಜನ ನಿನ್ನೆ ರಾತ್ರಿಯಿಂದ ಭೂಮಿ ಹಲವು ಬಾರಿ ಕಂಪಿಸಿದ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಭಯ ಶುರುವಾಗಿದೆ. 10-15ನಿಮಿಷಗಳ ಕಾಲ ಸಿಕ್ಕಾಪಟ್ಟೆ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು 3-4 ಸಲ ಒಂದೇ ರೀತಿ ಸ್ಫೋಟದ ಹಾಗೆ ಕೇಳಿ ಜನತೆ ಭಯಗ್ರಸ್ತರಾಗಿದ್ದಾರೆ. ಹಾಗಾಗಿ, ಮನೆಯೊಳಗೆ ಹೋಗುವುದಕ್ಕೆ ಸ್ಥಳೀಯರು ಹೆದರುತ್ತಿದ್ದಾರೆ. ಆದ್ದರಿಂದ, ಮನೆಯಿಂದ ಹೊರಗಡೆಯೇ ಇದ್ದು ಬೀದಿಗಳಲ್ಲಿ ನಿಂತಿದ್ದಾರೆ.
ರಹಮತ್ ನಗರ, ಅಲ್ಲಾಪೂರದಲ್ಲಿ ಸಹ ಇಂಥದ್ದೇ ಶಬ್ದ ಮತ್ತು ಭೂಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಸ್ಥಳಕ್ಕೆ ತಜ್ಞರ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದ್ದಾರೆ.