ಬಿಗ್ ರಿಲೀಫ್! EMI ಮೇಲಿನ ಚಕ್ರಬಡ್ಡಿ ಮನ್ನಾಗೆ ಕೇಂದ್ರ ಸರ್ಕಾರ ಶಿಫಾರಸ್ಸು
ಬೆಂಗಳೂರು: ಕೊರೊನಾ ವೇಳೆ ವಿಧಿಸಿದ್ದ ಬಡ್ಡಿಯ ಮೇಲಿನ ಬಡ್ಡಿ ಮನ್ನಾಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಗ್ರಾಹಕರು, ಎಂಎಸ್ಎಂಇ ವಲಯಕ್ಕೆ ಕೇಂದ್ರದಿಂದ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇದರಿಂದ ರೂ 2 ಕೋಟಿವರೆಗಿನ ಸಾಲದ ಚಕ್ರಬಡ್ಡಿ ಮನ್ನಾ ಆಗಲಿದೆ. ಸಾಲ ಮರುಪಾವತಿ ಮಾಡಿರುವವರಿಗೂ ಕೇಂದ್ರದಿಂದ ರಿಲೀಫ್ ಸಿಗಲಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ಬಗ್ಗೆ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಎಂಎಸ್ಎಂಇ, ಶೈಕ್ಷಣಿಕ ಸಾಲ, ಗೃಹ ಸಾಲ, ವಾಹನ ಸಾಲ, ಕ್ರೆಡಿಟ್ ಕಾರ್ಡ್ ಬಿಲ್, ಗೃಹೋಪಯೋಗಿ ವಸ್ತು ಕೊಳ್ಳಲು ವೈಯಕ್ತಿಕ […]
ಬೆಂಗಳೂರು: ಕೊರೊನಾ ವೇಳೆ ವಿಧಿಸಿದ್ದ ಬಡ್ಡಿಯ ಮೇಲಿನ ಬಡ್ಡಿ ಮನ್ನಾಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಗ್ರಾಹಕರು, ಎಂಎಸ್ಎಂಇ ವಲಯಕ್ಕೆ ಕೇಂದ್ರದಿಂದ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಇದರಿಂದ ರೂ 2 ಕೋಟಿವರೆಗಿನ ಸಾಲದ ಚಕ್ರಬಡ್ಡಿ ಮನ್ನಾ ಆಗಲಿದೆ. ಸಾಲ ಮರುಪಾವತಿ ಮಾಡಿರುವವರಿಗೂ ಕೇಂದ್ರದಿಂದ ರಿಲೀಫ್ ಸಿಗಲಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ಬಗ್ಗೆ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
ಎಂಎಸ್ಎಂಇ, ಶೈಕ್ಷಣಿಕ ಸಾಲ, ಗೃಹ ಸಾಲ, ವಾಹನ ಸಾಲ, ಕ್ರೆಡಿಟ್ ಕಾರ್ಡ್ ಬಿಲ್, ಗೃಹೋಪಯೋಗಿ ವಸ್ತು ಕೊಳ್ಳಲು ವೈಯಕ್ತಿಕ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ ಮಾಡಲು ನಿರ್ಧರಿಸಲಾಗಿದೆ.
Published On - 9:30 am, Sat, 3 October 20