ಪೊಲೀಸ್ ಕಾನ್ಸ್‌ಟೇಬಲ್ ಕುಮ್ಮಕ್ಕಿನಿಂದ ಗ್ರಾಮ ಪಂಚಾಯತಿ ಮಾಜಿ ಸದಸ್ಯನ ಮೇಲೆ ಹಲ್ಲೆ.. ಅಟ್ಯಾಕ್ ಮಾಡಿ ಎಸ್ಕೇಪ್ ಆದ ಗ್ಯಾಂಗ್
ಮಾರ್ಚ್ 16. ನಿನ್ನೆ ತಡ ರಾತ್ರಿ ಮದ್ನಾಳ್ ಬಳಿ ಗೋವಿಂದ ಎಂಬುವವರ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಹೊಟ್ಟೆ, ಕೈಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದರು. ಈ ಹಲ್ಲೆಗೆ ರಾಜಕೀಯ ವೈಷಮ್ಯವೇ ಕಾರಣ ಎಂದು ಹೇಳಲಾಗುತ್ತಿದ್ದು ಯಾದಗಿರಿ ಸಂಚಾರಿ ಠಾಣೆ PC ವೆಂಕಟೇಶ್ ಕುಮ್ಮಕ್ಕಿದೆ ಎಂಬ ಆರೋಪ ಕೇಳಿ ಬಂದಿದೆ.

ಯಾದಗಿರಿ: ಗ್ರಾಮ ಪಂಚಾಯಿತಿ ಮಾಜಿ ಸದಸ್ಯನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಗ್ಯಾಂಗ್ವೊಂದು ಪರಾರಿಯಾಗಿರುವ ಘಟನೆ ಯಾದಗಿರಿ ತಾಲೂಕಿನ ಮದ್ನಾಳ್ ಬಳಿ ನಡೆದಿದೆ. ಬಸವಂತಪುರ ಗ್ರಾಮದ ಗೋವಿಂದ ಎಂಬುವವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಅಟ್ಯಾಕ್ ಮಾಡಿದ್ದು ಹೊಟ್ಟೆ, ಕೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಈ ಹಲ್ಲೆ ಹಿಂದೆ ಪೊಲೀಸ್ ಕಾನ್ಸ್‌ಟೇಬಲ್ ಕುಮ್ಮಕ್ಕಿದೆ ಎಂಬ ಆರೋಪ ಕೇಳಿ ಬಂದಿದೆ.
ಮಾರ್ಚ್ 16. ನಿನ್ನೆ ತಡ ರಾತ್ರಿ ಮದ್ನಾಳ್ ಮಾರ್ಗವಾಗಿ ಗೋವಿಂದ್ ತನ್ನೂರಾದ ಬಸವಂತಪುರಕ್ಕೆ ಬೈಕ್ನಲ್ಲಿ ತೆರಳುವಾಗ ಅವರ ಮೇಲೆ ಮೂರು ದುಷ್ಕರ್ಮಿಗಳ ಗ್ಯಾಂಗ್ ಅಟ್ಯಾಕ್ ಮಾಡಿ ಹೊಟ್ಟೆ, ಕೈಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದರು. ಈ ಹಲ್ಲೆಗೆ ರಾಜಕೀಯ ವೈಷಮ್ಯವೇ ಕಾರಣ ಎಂದು ಹೇಳಲಾಗುತ್ತಿದ್ದು ಯಾದಗಿರಿ ಸಂಚಾರಿ ಠಾಣೆ PC ವೆಂಕಟೇಶ್ ಕುಮ್ಮಕ್ಕಿದೆ ಎಂಬ ಆರೋಪ ಕೇಳಿ ಬಂದಿದೆ. ಗಾಯಾಳು ಗೋವಿಂದಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕಂಪೌಂಡ್ ಕಟ್ಟಡ ಕಾಮಗಾರಿಯನ್ನ ಗೋವಿಂದ ಮಾಡಿಸುತ್ತಿದ್ದ. ಗೋವಿಂದ ಇರದೆ ಇರೋ ಸಮಯದಲ್ಲಿಈ ಸ್ಥಳಕ್ಕೆ ಬಂದು ಗೋವಿಂದನನ್ನು ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದರು ಎಂಬ ಮಾಹಿತಿ ಸಿಕ್ಕಿದೆ.

ವೆಂಕಟೇಶ್
ಇದನ್ನೂ ಓದಿ: ಹಳೆ ದ್ವೇಷ: ಕೋಲಾರದಲ್ಲಿ ಮಾಜಿ ಪುರಸಭಾ ಸದಸ್ಯನ ಮೇಲೆ ಹಲ್ಲೆ