ಕೇವಲ ಕ್ವಾಲಿಟಿ ಮಾತ್ರ ಒಂದು ಹಾಡನ್ನು ಜನಪ್ರಿಯಗೊಳಿಸಬಲ್ಲದು: ದಲೇರ್ ಮೆಹಂದಿ

|

Updated on: Jan 27, 2021 | 8:58 PM

ದಲೇರ್ ಅವರ ಅತ್ಯಂತ ಪಾಪ್ಯುಲರ್ ಆಲ್ಬಂಗಳಾಗಿರುವ, ‘ತುನಕ್ ತುನಕ್ ತುನ್’, ‘ಬೊಲೊ ತಾರಾ ರಾರಾ’, ‘ದರ್ದಿ ರಬ್ ರಬ್ ಕರ್ದಿ’ ಅಥವಾ ‘ಹೊ ಜಾಯೆಗಿ ಬಲ್ಲೆ ಬಲ್ಲೆ,’ ಕೇಳುಗರನ್ನು ಬೇರೊಂದು ಲೋಕ್ಕಕ್ಕೆ ಕೊಂಡೊಯ್ಯುತ್ತವೆ.

ಕೇವಲ ಕ್ವಾಲಿಟಿ ಮಾತ್ರ ಒಂದು ಹಾಡನ್ನು ಜನಪ್ರಿಯಗೊಳಿಸಬಲ್ಲದು: ದಲೇರ್ ಮೆಹಂದಿ
ದಲೇರ್ ಮೆಹಂದಿಯವರ ಹೊಸ ಆಲ್ಬಂ ‘ಇಶ್ಕ್ ನಚಾವೆ’
Follow us on

ಪಂಜಾಬಿ ಹಾಡುಗಳಿಗೆ, ಬಾಂಗ್ಡಾ ನೃತ್ಯಗಳಿಗೆ ಮತ್ತು ಅಲ್ಲಿನ ಸಂಗೀತಕ್ಕಿರುವ ವೈಶಿಷ್ಟ್ಯತೆಯೇ ಭಿನ್ನವಾದದ್ದು. ಸಂಗೀತ ಪ್ರಿಯರನ್ನು ಪಂಜಾಬಿ ಹಾಡುಗಳು ಹುಚ್ಚೆದ್ದು ಕುಣಿಯುವಂತೆ ಮಾಡುತ್ತವೆ ಅಂತ ಹೇಳೋದು ಸುಳ್ಳಲ್ಲ. ಈ ರಾಜ್ಯದ ಮ್ಯೂಸಿಕ್ ವಿಶ್ವದೆಲ್ಲೆಡೆ ಜನಪ್ರಿಯಗೊಂಡು ದಶಕಗಳೇ ಕಳೆದಿವೆ. ಪಾಶ್ಚಾತ್ಯ, ಅಮೆರಿಕ ಮತ್ತು ಇತರ ರಾಷ್ಟ್ರಗಳು ಸಹ ಪಂಜಾಬಿ ಹಾಡುಗಳಿಗೆ ಮಾರು ಹೋಗುವಂತೆ ಮಾಡಿದ ಖ್ಯಾತಿ ನಿಸ್ಸಂದೇಹವಾಗಿ ದಲೇರ್ ಮೆಹೆಂದಿ ಅವರಿಗೆ ಸಲ್ಲುತ್ತದೆ.

ದಲೇರ್ ಅವರ ಅತ್ಯಂತ ಪಾಪ್ಯುಲರ್ ಆಲ್ಬಂಗಳಾಗಿರುವ, ‘ತುನಕ್ ತುನಕ್ ತುನ್’, ‘ಬೊಲೊ ತಾರಾ ರಾರಾ’, ‘ದರ್ದಿ ರಬ್ ರಬ್ ಕರ್ದಿ’ ಅಥವಾ ‘ಹೊ ಜಾಯೆಗಿ ಬಲ್ಲೆ ಬಲ್ಲೆ,’ ಮೊದಲ ಬಾರಿಗೆ ಕೇಳಿಸಿಕೊಂಡರೂ, ಸಂಗೀತದ ಜ್ಞಾನವಿರದವನು ಕೂಡ ಕೂತಲ್ಲೇ ಕೈಕಾಲುಗಳನ್ನು ಹಾಡಿನ ಧಾಟಿ ಮತ್ತು ಅದರ ಸಂಗೀತಕ್ಕೆ ತಕ್ಕಂತೆ ಲಯಬದ್ಧವಾಗಿ ಅಲ್ಲಾಡಿಸುತ್ತಾನೆ. ಜನರನ್ನು ಹಾಗೆ ಮಂತ್ರಮುಗ್ಧಗೊಳಿಸುವ ಶಕ್ತಿ ಅವರ ಹಾಡುಗಳಿಗಿವೆ.

ಇತ್ತೀಚಿಗೆ, ಪ್ರತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದಲೇರ್, ತಮ್ಮ ಹಾಡುಗಳಲ್ಲಿರುವ ನೈಜ್ಯತೆ ಮತ್ತು ಶುದ್ಧತೆಯೆ ಜನರನ್ನು ಪ್ರಭಾವಕ್ಕೊಳಪಡಿಸುತ್ತದೆ ಮತ್ತು ಪದೇಪದೆ ಕೇಳುವಂತೆ ಪ್ರೇರೇಪಿಸುತ್ತವೆ. ಹಾಗೆಯೇ, ತಮ್ಮ ಎಲ್ಲ ಹಾಡುಗಳಲ್ಲಿ ಪಂಜಾಬಿನ ಸೊಗಡು ಅಡಗಿರುತ್ತದೆ, ಎಂದಿದ್ದಾರೆ.

ದಲೇರ್ ಮೆಹಂದಿ

‘ನಿಮಗೆ ಆಶ್ಚರ್ಯವಾಗಬಹುದು, ನಾನು ಪ್ರತಿವರ್ಷ ಕನಿಷ್ಠ ಒಂದಾದರೂ ಆಲ್ಬಂ ಬಿಡುಗಡೆ ಮಾಡಬೇಕೆಂದು ನನ್ನ ಅಭಿಮಾನಿಗಳು ಒತ್ತಾಯಿಸುತ್ತಾರೆ. ನಿಮ್ಮ ಹಾಡುಗಳನ್ನು ಕೇಳದಿದ್ದರೆ ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತಿರುತ್ತದೆ ಎಂದು ಅನೇಕ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಿರುತ್ತಾರೆ. ಅವರನ್ನು ನಿರಾಶೆಗೊಳಿಸುವುದು ನನ್ನಿಂದ ಸಾಧ್ಯವಾಗದ ಮಾತು. ಅವರ ಕೋರಿಕೆಯ ಮೇರೆಗೆ,ನನ್ನ ಹೊಸ ಆಲ್ಬಂ ‘ಇಶ್ಕ್ ನಚಾವೆ’ ಬಿಡುಗಡೆ ಮಾಡುತ್ತಿದ್ದೇನೆ,’ ಎಂದು ದಲೇರ್ ಹೇಳಿದ್ದಾರೆ.

ದಲೇರ್ ಅವರ ‘ತುನಕ್ ತುನಕ್ ತುನ್’ ಆಲ್ಬಂ 164 ಮಿಲಿಯನ್ ವ್ಯೂಗಳನ್ನು ಕಂಡಿದ್ದು, ದಕ್ಷಿಣ ಕೊರಿಯಾದಲ್ಲಿ ಅದು ಈಗಲೂ ಪಾಪ್ಯುಲರ್ ಚಾರ್ಟ್​ಬಸ್ಟರ್ ಅಂತೆ. ಭಾರತದ ವಿಖ್ಯಾತ ಸಿನಿಮಾ ನಿರ್ದೇಶಕರಲ್ಲೊಬ್ಬರಾಗಿರುವ ಎಸ್ ಎಸ್ ರಾಜಾಮೌಳಿ ಅವರ ‘ಬಾಹುಬಲಿ’ ಚಿತ್ರದ ಟೈಟಲ್ ಟ್ರ್ಯಾಕನ್ನು ಮೂರು ಭಾಷೆಗಳಲ್ಲೂ (ಹಿಂದಿ, ತೆಲುಗು ಮತ್ತು ತಮಿಳು) ಹಾಡಿರುವ ದಲೇರ್, ಹಾಡಿನ ಜನಪ್ರಿಯತೆ ಅದರೆ ಗುಣಮಟ್ಟದ ಮೇಲೆ ನೆಲೆಗೊಂಡಿರುತ್ತದೆ ಎಂದು ಹೇಳುತ್ತಾರೆ.

‘ನನ್ನ ತುನಕ್ ತುನಕ್ ತುನ್’ ಹಾಡು 164 ಮಿಲಿಯನ್ ವ್ಯೂಗಳನ್ನು ಕಂಡಿದೆ. ಫೇಕ್ ವ್ಯೂಗಳನ್ನು ಸೃಷ್ಟಸಿಕೊಳ್ಳುವ ಅಲ್ಪತನ ನನ್ನಲಿಲ್ಲ. ಹಾಗೆ ಮಾಡಿಕೊಳ್ಳುವವರ ವ್ಯಕ್ತಿತ್ವವೂ ಫೇಕ್ ಆಗಿರುತ್ತದೆ. ಈಗಿನ ಕೆಲ ಉದಯೋನ್ಮುಖ ಗಾಯಕರು ತಮ್ಮ ಹಾಡುಗಳನ್ನು ಅಪ್ಲೋಡ್ ಮಾಡಿ ಫೇಕ್ ವ್ಯೂಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಅವರಲ್ಲಿ ಅದೊಂದು ಟ್ರೆಂಡ್ ಆಗಿಬಿಟ್ಟಿದೆ. ಹಾಡು ಜನಪ್ರಿಯಗೊಳ್ಳಬೇಕಾದರೆ ಅದರ ಗುಣಮಟ್ಟ ಚೆನ್ನಾಗಿರಬೇಕು. ನನ್ನ ಹೊಸ ‘ಇಶ್ಕ್ ನಚಾವೆ’ ಆಲ್ಬಂನಲ್ಲಿ ಎಂದಿನಂತೆ ನೈಜ್ಯತೆ ಮತ್ತು ಶುದ್ಧತೆ ಇರಲಿದೆ. ಈ ಹಾಡಿನಲ್ಲಿ165 ಸಂಗೀತ ಉಪಕರಣಗಳನ್ನು ಬಳಸಲಾಗಿದೆ. ನನ್ನ ಅಭಿಮಾನಿಗಳಿಗೆ ಅದು ಇಷ್ಟವಾಗಲಿದೆಯೆಂಬ ಭರವಸೆ ನನಗಿದೆ,’ ಎಂದು ದಲೇರ್ ಹೇಳಿದ್ದಾರೆ.

ಬಾಲ್ಯದ ಗೆಳತಿ ನತಾಶಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್​ ಧವನ್

 

 

Published On - 8:56 pm, Wed, 27 January 21