ಹೊಸ ಪುಸ್ತಕ Middle Class, Media and Modi | ಮಧ್ಯಮ ವರ್ಗ, ಮಾಧ್ಯಮವನ್ನು ಮೋದಿ ಆವರಿಸಿಕೊಂಡ ಪರಿಯಿದು

ಖಾಸಗೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ, ಭಾರತದ ಬಹಳಷ್ಟು ಬಡ ವರ್ಗದ ಜನಜೀವನ, ಮಧ್ಯಮ ವರ್ಗದ ಕುಟುಂಬ ಹಂತಕ್ಕೆ ಭಡ್ತಿ ಹೊಂದಿದ್ದವು. ಇದನ್ನು ಗುರುತಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿತ್ತು. ಭಾರತದ ಜನತೆಯನ್ನು, ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಅರ್ಥೈಸಿಕೊಂಡದ್ದು ನರೇಂದ್ರ ಮೋದಿ.

ಹೊಸ ಪುಸ್ತಕ Middle Class, Media and Modi | ಮಧ್ಯಮ ವರ್ಗ, ಮಾಧ್ಯಮವನ್ನು ಮೋದಿ ಆವರಿಸಿಕೊಂಡ ಪರಿಯಿದು
Middle Class, Media and Modi ಕೃತಿ ಮತ್ತು ಪ್ರಧಾನಿ ನರೇಂದ್ರ ಮೋದಿ
Follow us
ganapathi bhat
|

Updated on:Feb 24, 2021 | 8:05 PM

ಮಧ್ಯಮ ವರ್ಗದ ಜನಸಮೂಹ, ಮಾಧ್ಯಮ ಹಾಗೂ ಮೋದಿ, ಈ ವಿಚಾರಗಳನ್ನು ಒಳಗೊಂಡಿರುವ, 430 ಪುಟಗಳ ವಿಶ್ಲೇಷಣಾತ್ಮಕ ಬರಹಗಳಿರುವ ಪುಸ್ತಕ ‘Middle Class, Media and Modi’. ದಿ ಹಿಂದೂ ಪತ್ರಿಕೆಯಲ್ಲಿ ವೃತ್ತಿ ನಿರತರಾಗಿರುವ ಹಿರಿಯ ಪತ್ರಕರ್ತ ನಾಗೇಶ್ ಪ್ರಭು ಪುಸ್ತಕದ ಲೇಖಕರು. ಸೇಜ್ ಪಬ್ಲಿಕೇಷನ್ಸ್ ಪ್ರಕಾಶನದ ಈ ಪುಸ್ತಕದ ನೆಪದಲ್ಲಿ ಲೇಖಕರೊಂದಿಗೆ ಟಿವಿ9 ಕನ್ನಡ ಡಿಜಿಟಲ್ ಸಂವಾದ ನಡೆಸಿತು. ಈ ಸಂವಾದದ ಅಕ್ಷರರೂಪ ಇಲ್ಲಿದೆ..

ಚುನಾವಣೆಯಲ್ಲಿ ಮಾಧ್ಯಮ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ನರೇಂದ್ರ ಮೋದಿ ಈ ವಿಚಾರವನ್ನು ಹೇಗೆ ಅರ್ಥಮಾಡಿಕೊಂಡರು? ಮಧ್ಯಮ ವರ್ಗದ ಜನರ ಮನಸನ್ನು ಹೇಗೆ ಆವರಿಸಿದರು? ಮಾಧ್ಯಮವನ್ನು ಬಳಸಿಕೊಳ್ಳುವ ಕಲೆಯನ್ನು ಮೋದಿ ಕರಗತಮಾಡಿಕೊಂಡುದ್ದು ಹೇಗೆ.. ಇತ್ಯಾದಿಗಳೇ ‘Middle Class, Media and Modi’ ಪುಸ್ತಕದ ವಿಷಯ.

1990ರ ದಶಕದಲ್ಲಿ ಆದ ಖಾಸಗೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ, ಭಾರತದ ಬಹಳಷ್ಟು ಬಡ ವರ್ಗದ ಜನಜೀವನ, ಮಧ್ಯಮ ವರ್ಗದ ಕುಟುಂಬ ಹಂತಕ್ಕೆ ಬಡ್ತಿ ಹೊಂದಿದ್ದವು. ಇದನ್ನು ಗುರುತಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿತ್ತು. ಕಾಂಗ್ರೆಸ್ 2010ರ ವರೆಗೂ ಬಡಜನರು, ಬಡ ಜನಜೀವನ ವಿಷಯಗಳ್ನೇ ಕೇಂದ್ರಿಸಿ ಮಾತು, ಕೆಲಸಗಳನ್ನು ಮಾಡುತ್ತಿದ್ದರೆ, ನರೇಂದ್ರ ಮೋದಿ ಭಾರತದ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡರು. ಭಾರತದಲ್ಲಿ ಮಧ್ಯಮ ವರ್ಗದ ಜನಸಮೂಹ ಹೆಚ್ಚಾಗಿದೆ ಎಂದು ಅರಿತು, ಅದಕ್ಕೆ ಬೇಕಾದ ವಿಚಾರಗಳನ್ನು ಮುನ್ನೆಲೆಗೆ ತರಲು ಆರಂಭಿಸಿದರು.

1990ರ ಬಳಿಕ ಆದ ಬದಲಾವಣೆಗಳನ್ನು ಸರಿಯಾಗಿ ಗುರುತಿಸಿದ್ದು ನರೇಂದ್ರ ಮೋದಿ. 90ರ ದಶಕದಿಂದಲೂ ಮಾಧ್ಯಮ ಹಾಗೂ ಬಿಜೆಪಿ ಸಂಘಟನೆ, ಪ್ರಚಾರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಮೋದಿಗೆ, ಭಾರತದ ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲು ಹೊಂದಿರುವ ಮಧ್ಯಮ ವರ್ಗದ ಜನರ ನಾಡಿಮಿಡಿತ ಅರ್ಥವಾಗಿತ್ತು. ಅದಕ್ಕೆ ತಕ್ಕುದಾದ ಯೋಜನೆ, ಯೋಚನೆಗಳನ್ನು ತಮ್ಮ ಆಡಳಿತದಲ್ಲಿ ಮೋದಿ ರೂಪಿಸಿಕೊಂಡರು.

ಮಾಧ್ಯಮ-ನರೇಂದ್ರ ಮೋದಿ ಜಂಟಿ ಪಯಣ ನರೇಂದ್ರ ಮೋದಿ, 1990ರ ಸುಮಾರಿಗೆ ಬಿಜೆಪಿ ಪಕ್ಷದ ಮಾಧ್ಯಮ ವಕ್ತಾರರಾಗಿದ್ದರು. ಲಾಕ್​ಕೃಷ್ಣ ಅಡ್ವಾಣಿ ಮುಂದಾಳತ್ವದ ರಾಮ ರಥಯಾತ್ರೆ ಸಂದರ್ಭದಲ್ಲಿ, ಮಾಧ್ಯಮ ಪ್ರಚಾರ ಉಸ್ತುವಾರಿ ವಹಿಸಿಕೊಂಡಿದ್ದದ್ದು ನರೇಂದ್ರ ಮೋದಿ. ಆಗೆಲ್ಲಾ ಔಟ್ ಆಫ್ ಬಾಕ್ಸ್, ಬಹು ವಿಭಿನ್ನ ಎಂಬಂಥ ಉಪಾಯಗಳನ್ನು ಸೂಚಿಸಿ ಯೋಜನೆಯೊಂದು ಜನರನ್ನು ತಲುಪುವ ಸೂತ್ರ ಹೆಣೆದರು. ಸುದ್ದಿ, ಸುದ್ದಿಗಾರರಿಗೆ ಬೇಕಾಗುವ ವಿಚಾರಗಳೇನು ಎಂದು ಅರ್ಥೈಸಿಕೊಂಡರು.

ಮುರಳಿ ಮನೋಹರ ಜೋಶಿಯವರ ಏಕಥಾ ಯಾತ್ರೆಯನ್ನು ಯಶಸ್ವಿಗೊಳಿಸುವಲ್ಲಿಯೂ ಮೋದಿ ಪಾತ್ರ ಮಹತ್ವದ್ದಾಗಿತ್ತು. ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದ ವರೆಗೆ ಏಕಥಾ ಯಾತ್ರೆಯ ಮಾಧ್ಯಮ ಸಂಬಂಧವನ್ನು ನರೇಂದ್ರ ಮೋದಿ ನೋಡಿಕೊಂಡರು. ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದ ಬಿಜೆಪಿ ಪಕ್ಷದ ಆಡಳಿತದ ಅವಧಿಯಲ್ಲೂ ಮಾಧ್ಯಮ ವಕ್ತಾರರಾಗಿ ಮೋದಿ ಕೆಲಸ ಮಾಡಿದ್ದರು. ಲಾಹೋರ್ ಬಸ್ ಯಾತ್ರೆ ಮೊದಲಾದ ರಾಷ್ಟ್ರ ಮಟ್ಟದ ಮುಖ್ಯ ವಿಷಯಗಳನ್ನು ಜನತೆಗೆ ತಲುಪಿಸುವಲ್ಲಿ ಮೋದಿ ಪ್ರಮುಖಪಾತ್ರ ವಹಿಸಿದರು. 1990ರಿಂದ 2002ರ ವರೆಗೆ ಮೋದಿ ಮತ್ತು ಮಾಧ್ಯಮ ಸಂಬಂಧ ಅತ್ಯುತ್ತಮವಾಗಿತ್ತು.

ಇದನ್ನೂ ಓದಿ: ವ್ಯಕ್ತಿ-ವ್ಯಕ್ತಿತ್ವ | ರೈತ ಹೋರಾಟದ ಹಿಂದಿನ ಶಕ್ತಿ ರಾಕೇಶ್ ಟಿಕಾಯತ್

NARENDRA MODI AND ADVANI

ಲಾಲಕೃಷ್ಣ ಅಡ್ವಾಣಿ ಮತ್ತು ನರೇಂದ್ರ ಮೋದಿ

ಮೋದಿ-ಮಾಧ್ಯಮ ಸಂಪರ್ಕದಲ್ಲಿ ಬಿರುಕು ಆದರೆ, 2002ರ ಗುಜರಾತ್ ಕೋಮುಗಲಭೆಯ ಬಳಿಕ ನರೇಂದ್ರ ಮೋದಿ ಹಾಗೂ ಮಾಧ್ಯಮ ನಡುವಿನ ಸಂಪರ್ಕ, ಸಂಬಂಧ ಹದಗೆಟ್ಟಿತು. ಮಾಧ್ಯಮ ಸಮೂಹದ ಒಂದು ವಿಭಾಗ ನರೇಂದ್ರ ಮೋದಿ ನಡೆಯನ್ನು ವಿರೋಧಿಸಿತು. ದೇಶದ ಬಹುಪಾಲು ಮಾಧ್ಯಮಗಳು ಮೋದಿಯನ್ನು ಟೀಕಿಸಿದವು. ಯಾವತ್ತು ಮೋದಿಗೆ ಮಾಧ್ಯಮಗಳಿಂದ ವಿರೋಧ ವ್ಯಕ್ತವಾಗಲು ಆರಂಭವಾಯಿತೋ, ಅಂದಿನಿಂದ ಮೋದಿ ಮಾಧ್ಯಮದ ಜೊತೆಗೆ ಸಾಗುವುದನ್ನು ನಿಲ್ಲಿಸಿದರು.

ಮತ್ತೆ 2007ರ ಬಳಿಕ ಗುಜರಾತ್ ಮಾದರಿ ಎಂಬ ವಿಚಾರ ಮುನ್ನೆಲೆಗೆ ಬಂತು. ಎಲ್ಲರೂ ಅದನ್ನು ಹೆಸರಿಸಲು, ಪ್ರಶಂಸಿಸಲು ತೊಡಗಿದರು. ಗುಜರಾತ್​ನ ನ್ಯಾನೋ ಯೋಜನೆಗಳು ಪ್ರಖ್ಯಾತವಾದವು. ಗುಜರಾತ್​ನಲ್ಲಿ ಪ್ರವಾಸೋದ್ಯಮವನ್ನು ಬೆಳೆಸಿದರು. ಅಮಿತಾಭ್ ಬಚ್ಚನ್​ರಂಥಾ ಖ್ಯಾತ ನಟರನ್ನು ಪ್ರವಾಸೋದ್ಯಮ ರಾಯಭಾರಿಯಾಗಿ ಬಳಸಿಕೊಂಡರು. Modi means Business ಎಂಬಂತಾಯಿತು. 2012 ನಂತರ, ಮೋದಿ ಟೀಕಿಸಿದ್ದವರೂ ಮತ್ತೆ ಹೊಗಳಲು, ಪ್ರಶಂಸೆ ವ್ಯಕ್ತಪಡಿಸಲು ಶುರುಮಾಡಿದರು. ಇಷ್ಟರಲ್ಲಾಗಲೇ ಮಾಧ್ಯಮವನ್ನು ಅರ್ಥ ಮಾಡಿಕೊಂಡಿದ್ದ ನರೇಂದ್ರ ಮೋದಿ ತಮ್ಮ ಸರ್ಕಾರದ ಕೆಲಸಗಳನ್ನು ಮತ್ತಷ್ಟು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಿದರು.

ಇದನ್ನೂ ಓದಿ: Thank you India ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ ವಿಶ್ವ ಆರೋಗ್ಯ ಸಂಸ್ಥೆ

NARENDRA MODI AND MANAMOHAN SINGH

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜತೆ ಪ್ರಧಾನಿ ನರೇಂದ್ರ ಮೋದಿ

ಮೋದಿಗೆ ಬಲ ತುಂಬಿದ ಬೆಳವಣಿಗೆಗಳು 2011ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ, ಆಗಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆದ ಜನಾಂದೋಲನ, ಮೋದಿಗೆ ಹೊಸ ವೇದಿಕೆ ಒದಗಿಸಿಕೊಟ್ಟಿತು. ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ಹಲವು ಭ್ರಷ್ಟಾಚಾರ ಪ್ರಕರಣಗಳು ಮೋದಿಗೆ ವರವಾಗಿ ಒದಗಿತು. ಕಾಂಗ್ರೆಸ್ ವಿರೋಧಿಸಿ, ಮೋದಿ ರಾಜಕೀಯವಾಗಿ ಉನ್ನತ ಹಂತಕ್ಕೇರಲು ಆರ್​ಎಸ್​ಎಸ್ ಕೂಡ ಸಹಕಾರ ನೀಡಿತು. ಇದರಿಂದ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ, ಭಾರತದ ಪ್ರಧಾನಿ ಹುದ್ದೆಗೆ ಲಗ್ಗೆ ಇಡುವಂತಾಯಿತು.

ಈ ಬಳಿಕದ ಅಧ್ಯಾಯವೇ ಮೋದಿ ಹಾಗೂ ಮಧ್ಯಮ ವರ್ಗದ ವಿಚಾರದ್ದು. 90ರ ದಶಕದಿಂದ ಮಾಧ್ಯಮ ಸಂಪರ್ಕ ಹೊಂದಿದ್ದ ಮೋದಿ, ಅವುಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿ, ಹೊಸ ಚುನಾವಣಾ ನೀತಿ ಅಥವಾ ತಂತ್ರವನ್ನು ಹೆಣೆದರು. ಬಿಜೆಪಿ ಪಕ್ಷ 2014ರಲ್ಲಿ ಅಧಿಕಾರಕ್ಕೇರಲು ಕಾರಣವಾದ ಅಂಶಗಳಲ್ಲಿ ಇವು ಬಹಳ ಮುಖ್ಯ ಪಾತ್ರವಹಿಸಿದವು. ಪ್ರಧಾನಿಯಾದ ಬಳಿಕ ಮಧ್ಯಮ ವರ್ಗದ ಜನತೆಯನ್ನು ಅರ್ಥೈಸಿಕೊಂಡದ್ದು ಮಾತ್ರವಲ್ಲ, ಬಹುಬೇಗ ಮಧ್ಯಮ ವರ್ಗದ ಜನರ ಮನಸು ಗೆದ್ದುಕೊಂಡದ್ದು ಮೋದಿ ಅವರ ಬದುಕಿನಲ್ಲಿ ಎದ್ದು ಕಾಣಿಸುವ ಅಂಶ.

ತಾವು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಯಾವುದೇ ವಿಷಯಕ್ಕೂ ಮಾಧ್ಯಮದ ಎದುರು ಹೋಗದ ಮೋದಿ, ನವಮಾಧ್ಯಮಗಳನ್ನೇ ಅಧಿಕೃತ ವೇದಿಕೆಯಾಗಿ ಬಳಸಿಕೊಂಡರು. ಟ್ವಿಟರ್ ಖಾತೆಯ ಮೂಲಕವೇ ಸರ್ಕಾರದ ಯೋಜನೆಗಳನ್ನು ತಿಳಿಸಿದರು. ಮಾಧ್ಯಮದವರು ಸಾಮಾಜಿಕ ಜಾಲತಾಣಗಳನ್ನು ಕಾದು ಕುಳಿತು ನೋಡಿ, ಸುದ್ದಿ ಮಾಡುವಂತಾಯಿತು. ಸಾಮಾಜಿಕ ಜಾಲತಾಣಗಳಿಗೆ ತಕ್ಕುದಾದ ಹ್ಯಾಷ್​ಟ್ಯಾಗ್​ಗಳು, ಘೋಷವಾಕ್ಯಗಳ ಬಳಕೆಯಲ್ಲಿಯೂ ಮೋದಿ ಜಾಣತನ ಮೆರೆದರು. ತಮ್ಮ ಸಂದೇಶಗಳನ್ನು ಬಹುಬೇಗ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: 45 ಕನ್ನಡ ಮನಸ್ಸುಗಳು ಪರಿಚಯಿಸಿದ್ದು 90 ಅತ್ಯುತ್ತಮ ಪುಸ್ತಕಗಳು; ನೀವೂ ಓದಿ, ಓದಿಸಿ

SURESH PRABHU WRITER

ಲೇಖಕ, ಹಿರಿಯ ಪತ್ರಕರ್ತ  ನಾಗೇಶ್ ಪ್ರಭು

ಚಾಯ್ ವಾಲಾ ಮೋದಿ.. ಇನ್ನಷ್ಟು ಮತ್ತಷ್ಟು ಆಡಳಿತದ ಮೊದಲ ಅವಧಿಯಲ್ಲಿ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ನೋಟು ರದ್ಧತಿ, ಆಯುಷ್ಮಾನ್ ಭಾರತ್, ಸ್ಕಿಲ್ ಇಂಡಿಯಾದಂಥ ಯೋಜನೆಗಳನ್ನು ಪರಿಚಯಿಸಿದರು. ನವೋದ್ಯಮಗಳಿಗೆ ಸಬ್ಸಿಡಿ, ಡಿಜಿಟಲ್ ಇಂಡಿಯಾ ಮೊದಲಾದ ಯೋಜನೆಗಳು, ಅಬ್ ಕಿ ಬಾರ್ ಮೋದಿ ಸರ್ಕಾರ್, ಭ್ರಷ್ಟಾಚಾರವಿಲ್ಲದ ಅಧಿಕಾರ ನಡೆಸುತ್ತೇವೆ ಎಂಬ ಘೋಷಣೆಗಳು ಜನರಲ್ಲಿ ಭರವಸೆ ಮೂಡಿಸಿದವು. ದೇಶದ ರಕ್ಷಣಾ ವಿಚಾರಗಳ ಬಗ್ಗೆಯೂ ಮೋದಿ ಮಾತನಾಡಿದರು. ಮಧ್ಯಮ ವರ್ಗ ಹಾಗೂ ಯುವ ಸಮುದಾಯ ಇಷ್ಟಪಡುವಂಥ ಯೋಜನೆಗಳು ಮೋದಿ ಆಡಳಿತದಿಂದ ಜನಪ್ರಿಯವಾದವು.

ಮಧ್ಯಮ ವರ್ಗದ ಜನರಿಗೆ, ಯುವಜನತೆಗೆ ಆಪ್ತ ಎನಿಸುವ ಧಾರ್ಮಿಕ ವಿಚಾರಗಳು, ರಕ್ಷಣೆ, ಉದ್ಯಮ, ಭ್ರಷ್ಟಾಚಾರ ಮುಕ್ತ ಭಾರತ, ಚಾಯ್ ವಾಲಾ ಮೋದಿ ಮುಂತಾದ ವಿಷಯಗಳು ಜನರ ಮನದಲ್ಲಿ ಅಚ್ಚಳಿಯದೆ ಉಳಿಯಿತು. ಈ ಎಲ್ಲಾ ಕಾರಣಗಳಿಂದ, 2019ರಲ್ಲಿ ಬಿಜೆಪಿ ಪಕ್ಷ ಎರಡನೇ ಬಾರಿಗೆ ಅಧಿಕಾರ ಅನುಭವಿಸುವಂತಾಯಿತು.

ಈ ಅವಧಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ರದ್ದುಗೊಳಿಸಿತು. ತ್ರಿವಳಿ ತಲಾಖ್, ಸಿಎಎ, ಎನ್​ಆರ್​ಸಿ, ರಾಮ ಮಂದಿರ ಮುಂತಾದ ನಿರ್ಧಾರಗಳನ್ನು ಮುಂದಿಟ್ಟಿತು. ಮೊದಲ ಅವಧಿಯಲ್ಲಿ ತಮ್ಮ ಹಾಗೂ ಪಕ್ಷದ ಸ್ಥಾನಕ್ಕೆ ಭದ್ರ ಅಡಿಪಾಯ ಹಾಕಿಕೊಂಡ ನರೇಂದ್ರ ಮೋದಿ, ಸಿಕ್ಕಿದ ಎರಡನೇ ಅವಧಿಯ ಅಧಿಕಾರವನ್ನು ಪಕ್ಷದ ಮೂಲ ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರಲು ಬಳಸಿಕೊಂಡರು.

ನರೇಂದ್ರ ಮೋದಿ, ಮಧ್ಯಮ ವರ್ಗದ ಜನತೆ ಹಾಗೂ ಮಾಧ್ಯಮದ ನಡುವಣ ಚರ್ಚೆಯನ್ನು ಹೊಂದಿರುವ ‘Middle Class, Media and Modi’ ಪುಸ್ತಕದ ಪಕ್ಷಿನೋಟವಿದು. 90ರ ದಶಕದಿಂದ ಮೋದಿ ನಡೆದು ಬಂದ ಹಾದಿಯನ್ನು ಎಳೆಎಳೆಯಾಗಿ ತಿಳಿಯಲು ಪುಸ್ತಕವನ್ನೇ ಓದುವುದು ಸೂಕ್ತ.

ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣರಿಂದ ಪುಸ್ತಕ ಬಿಡುಗಡೆ ಶನಿವಾರ (ಜ.23)ರಂದು ‘Middle Class, Media and Modi’ ಪುಸ್ತಕವನ್ನು, ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಬಿಡುಗಡೆಗೊಳಿಸಿದರು. ಮಣಿಪಾಲ್ ಗ್ಲೋಬಲ್ ಎಜ್ಯುಕೇಷನ್ ಸಂಸ್ಥೆಯ ಅಧ್ಯಕ್ಷ ಟಿ.ವಿ. ಮೋಹನ್​ದಾಸ್ ಪೈ, ಚಿತ್ರಕಲಾ ಪರಿಷತ್​ನ ಅಧ್ಯಕ್ಷ ಬಿ.ಎಲ್. ಶಂಕರ್ ಹಾಗೂ ಆರ್ಥಿಕ ತಜ್ಞ ಪ್ರೊ. ಆರ್.ಎಸ್. ದೇಶಪಾಂಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

MIDDLE CLASS,MODI AND MEDIA

ಪುಸ್ತಕ ಬಿಡುಗಡೆ ಸಮಾರಂಭ

ಪುಸ್ತಕದ ಹೆಸರು: Middle Class, Media and Modi, ಪ್ರಕಾಶನ: ಸೇಜ್ ಪಬ್ಲಿಕೇಶನ್ಸ್​, ಬೆಲೆ: ₹ 1,109

(ನಿರೂಪಣೆ: ಗಣಪತಿ ದಿವಾಣ)

ಇಂಡಿಯಾ ಟುಡೆ ಸಮೀಕ್ಷೆ: ಈಗಲೇ ಲೋಕಸಭಾ ಚುನಾವಣೆ ನಡೆದರೆ ಯಾರು ಗೆಲ್ಲುತ್ತಾರೆ?

Published On - 9:37 pm, Wed, 27 January 21

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!