ಪ್ರಭಾಸ್ ನಟನೆಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್.. ಕನ್ನಡದಲ್ಲಿ ಸಿಗಲಿಲ್ವಾ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕ?

ಒಂದು ದೊಡ್ಡ ಇಂಡಿಯನ್ ಸಿನಿಮಾಗೆ ಪ್ಲಾನ್ ಮಾಡಿದೆ ಅನ್ನೋ ಸುದ್ದಿ ಹರಡಿದಾಗಲೇ ಸಿನಿಮಾದ ಬಗ್ಗೆ ಸಂಚಲನ ಶುರುವಾಗಿತ್ತು. ಇಂಡಿಯನ್ ಸಿನಿಮಾ ಅಂದ ತಕ್ಷಣ ಸಿನಿಮಾಸಕ್ತರೂ ಕೂಡ ಕುತೂಹಲ ಹೆಚ್ಚು ಮಾಡಿಕೊಂಡಿದ್ರು. ಸದ್ಯ ಹೊಂಬಾಳೇ ಫಿಲಮ್ಸ್ ಸಿನಿಮಾದ ಬಗ್ಗೆ ದೊಡ್ಡ ಗುಟ್ಟು ಬಿಟ್ಟು ಕೊಟ್ಟಿದೆ. ಆದ್ರೆ ಸೋಶಿಯೊಲ್ ಮಿಡಿಯಾದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಪರ ವಿರೋಧದ ದೊಡ್ಡ ಚರ್ಚೆ ಶರುವಾಗಿದೆ.

ಪ್ರಭಾಸ್ ನಟನೆಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್.. ಕನ್ನಡದಲ್ಲಿ ಸಿಗಲಿಲ್ವಾ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕ?
ನಟ ಪ್ರಭಾಸ್
Ayesha Banu

|

Dec 03, 2020 | 10:43 AM

ಸೌತ್ ಸಿನಿ ದುನಿಯಾದಲ್ಲಿ ದೊಡ್ಡ ಕ್ರೇಜ್ ಹುಟ್ಟುಹಾಕಿದ್ದ ಸಂದೇಶದ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಡಿಸೆಂಬರ್ 2 ರಂದು ಹೊಂಬಾಳೆ ಫಿಲಮ್ಸ್ ಅನೌನ್ಸ್ ಮಾಡೋ ಸಿನಿಮಾ ಯಾವುದು. ಅದ್ಯಾವ ಸ್ಟಾರ್ ನಟನಿಗೆ ಇಂಡಿಯನ್ ಸಿನಿಮಾ ಆಗುತ್ತೆ ಅನ್ನೋದಕ್ಕೆ ಸದ್ಯಕ್ಕಂತೂ ಉತ್ತರ ಸಿಕ್ಕಿದೆ. ಸಿನಿಮಾಸಕ್ತರ ನಿರೀಕ್ಷೆಯಂತೆ ಡಿಸೆಂಬರ್‌ 2ರ ಮದ್ಯಾಹ್ನ 2 ಘಂಟೆ 9 ನಿಮಿಷಕ್ಕೆ ಸಾಮಾಜಿಕ ಜಾಲತಾಣದಲ್ಲಿ ಇಂಡಿಯನ್ ಸಿನಿಮಾ ಟೈಟಲ್ ಸಲಾರ್ ಅನ್ನೋದರ ಜೊತೆಗೆ ಕನ್ನಡ ಸೇರಿದಂತೆ ಹಲವು ಭಾಷೆ ಸಿನಿಮಾಗಳಲ್ಲಿ ಪ್ರಬಾಸ್ ನಟಿಸ್ತಾರೆ ಅನ್ನೋ ಗುಟ್ಟು ರಟ್ಟಾಗಿದೆ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆದ್ರೆ ಹೇಗಿರುತ್ತೆ. ಯಾವ ಸ್ಟಾರ್ ನಾಯಕನಾಗಬಹುದು ಅನ್ನೋ ಚರ್ಚೆ ಶುರುವಾಗಿತ್ತು. ಕೆಲವು ಲೆಕ್ಕಾಚಾರಗಳನ್ನ.. ಊಹಾಪೋಹಗಳಿಗೆ ಬ್ರೇಕ್ ಹಾಕಿ ಕಡೆಗೂ ಬಾಹುಬಲಿ ನಟ ಪ್ರಬಾಸ್‌ಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳೋದು ಪಕ್ಕಾ ಅನ್ನೋ ಸುದ್ದಿ ಹೊರ ಹಾಕಿದೆ ಹೊಂಬಾಳೇ ಫಿಲಮ್ಸ್.

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆ: ಆದ್ರೆ ಒಂದು ಕಡೆ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಬಾಹುಬಲಿಯಂತ ಸಿನಿಮಾ ಮಾಡಿರೋ ಪ್ರಬಾಸ್ ಗೆ ಆಕ್ಷನ್ ಕಟ್ ಹೇಳ್ತಾರೆ ಅನ್ನೋ ಹೆಮ್ಮೆ ಕನ್ನಡಿಗರಿಗಿದೆ. ಆದ್ರೆ ಇನ್ನೊಂದು ಕಡೆ ಕನ್ನಡದ ನಟರನ್ನ ಆಯ್ಕೆ ಮಾಡಿಕೊಳ್ಳಬಹುದಿತ್ತು. ಕನ್ನಡ ಇಂಡಸ್ಟ್ರಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವಂಥಾ ನಾಯಕ ನಟರಿರಲಿಲ್ಲವೇ ಅನ್ನೋ ಚರ್ಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

ಒಟ್ಟಿನಲ್ಲಿ ಸದ್ಯ ಒಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾದ ನಾಯಕ ಯಾರು ಟೈಟಲ್ ಏನು ಅನ್ನೋ ಕುತೂಹಲಕ್ಕೆ ಬ್ರೇಕ್ ಹಾಕಿದೆ ಹಾಗಾದ್ರೆ ಮುಂದಿನ ದಿನಗಳಲ್ಲಿ ಕನ್ನಡಿಗರು ಹೇಗೆ ಪ್ರತಿಕ್ರಿಯಿಸ್ತಾರೆ. ಚಿತ್ರತಂಡ ಅಭಿಮಾನಿಗಳ ಮಾತನ್ನ ಹೇಗೆ ಸಮರ್ಥಿಸಿಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಕ್ಯೂರಿಯಾಸಿಟಿ ಹುಟ್ಟಿಸಿದ ಹೊಂಬಾಳೆ ಫಿಲಮ್ಸ್, ಇಂದು ಮಧ್ಯಾಹ್ನ ಬಯಲಾಗುತ್ತೆ ಪ್ಯಾನ್ ಇಂಡಿಯಾ ಸೀಕ್ರೆಟ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada