ಗರ್ಭಿಣಿ ಮಹಿಳೆಗೆ ಸೋಂಕು: KMF ಖರೀದಿಸಿದ ಹಾಲು ಚರಂಡಿಗೆ!
ದೇವನಹಳ್ಳಿ: ಗರ್ಭಿಣಿ ಮಹಿಳೆಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಚಿಕ್ಕಕೊರಟಿ ಗ್ರಾಮದಲ್ಲಿ ಉತ್ಪಾದನೆಯಾಗಿದ್ದ ಭಾರಿ ಪ್ರಮಾಣದ ಹಾಲನ್ನು ಮೋರಿಗೆ ಸುರಿಯಲಾಗಿದೆ. ಹೊಸಕೋಟೆ ತಾಲೂಕಿನ ಚಿಕ್ಕಕೊರಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನಲ್ಲಿ 4 ಸಾವಿರ ಲೀಟರ್ನಷ್ಟು ಹಾಲು ಚರಂಡಿಗೆ ಚೆಲ್ಲಲಾಗಿದೆ. ತಾಲೂಕಿನ ಚಿಕ್ಕಕೊರಟಿ ಗ್ರಾಮದಲ್ಲಿ ಗರ್ಭಿಣಿಗೆ ಸೋಂಕು ಪತ್ತೆ ಹಿನ್ನೆಲೆ ನಿನ್ನೆಯಿಂದ ಗ್ರಾಮದ ಎರಡು ಡೈರಿಗಳಲ್ಲಿ ಸಿಬ್ಬಂದಿ ಹಾಲು ಸಂಗ್ರಹಣೆ ನಿಲ್ಲಿಸಿದ್ದಾರೆ. ಹಾಲು ಖರೀದಿ ಸ್ಥಗಿತಗೊಳಿಸಿದ ಕೆಎಂಎಫ್ ಸಿಬ್ಬಂದಿ, ಶೇಖರಣೆ ಮಾಡಿದ್ದ ಅಷ್ಟೂ […]
ದೇವನಹಳ್ಳಿ: ಗರ್ಭಿಣಿ ಮಹಿಳೆಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಚಿಕ್ಕಕೊರಟಿ ಗ್ರಾಮದಲ್ಲಿ ಉತ್ಪಾದನೆಯಾಗಿದ್ದ ಭಾರಿ ಪ್ರಮಾಣದ ಹಾಲನ್ನು ಮೋರಿಗೆ ಸುರಿಯಲಾಗಿದೆ. ಹೊಸಕೋಟೆ ತಾಲೂಕಿನ ಚಿಕ್ಕಕೊರಟಿ ಗ್ರಾಮದಲ್ಲಿ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನಲ್ಲಿ 4 ಸಾವಿರ ಲೀಟರ್ನಷ್ಟು ಹಾಲು ಚರಂಡಿಗೆ ಚೆಲ್ಲಲಾಗಿದೆ. ತಾಲೂಕಿನ ಚಿಕ್ಕಕೊರಟಿ ಗ್ರಾಮದಲ್ಲಿ ಗರ್ಭಿಣಿಗೆ ಸೋಂಕು ಪತ್ತೆ ಹಿನ್ನೆಲೆ ನಿನ್ನೆಯಿಂದ ಗ್ರಾಮದ ಎರಡು ಡೈರಿಗಳಲ್ಲಿ ಸಿಬ್ಬಂದಿ ಹಾಲು ಸಂಗ್ರಹಣೆ ನಿಲ್ಲಿಸಿದ್ದಾರೆ. ಹಾಲು ಖರೀದಿ ಸ್ಥಗಿತಗೊಳಿಸಿದ ಕೆಎಂಎಫ್ ಸಿಬ್ಬಂದಿ, ಶೇಖರಣೆ ಮಾಡಿದ್ದ ಅಷ್ಟೂ ಹಾಲನ್ನು ಚರಂಡಿಗೆ ಸುರಿದಿದ್ದಾರೆ.
Published On - 6:33 pm, Sat, 23 May 20