ಬೆಂಗಳೂರು: ಸಿಲಿಕಾನ್ ಸಿಟಿಯ ಖಾಸಗಿ ಕಂಪನಿ ‘ಟೀಂ ಲೀಡರ್ ’ ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಮಹದೇವಪುರದಲ್ಲಿ ಮಾರ್ಚ್ 13ರಂದು ಈ ಘಟನೆ ನಡೆದಿದೆ. ಬೀದರ್ ಮೂಲದ ಜೀವನ್ ಅಂಬಾಟೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಇಂಟರ್ನೆಟ್ನಲ್ಲಿ ಸರ್ಚ್ ಮಾಡಿ ಸೂಸೈಡ್ ಮಾಡಿಕೊಂಡ
ಮಾರ್ಚ್ 13ಎಂದು ಖಾಸಗಿ ಕಂಪನಿಯ ಉದ್ಯೋಗಿ ಜೀವನ್ ಅಂಬಾಟೆ ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಹೌ ಟು ಡೈ ಈಸಿಲಿ’, ಎಂದು ಸುಲಭವಾಗಿ ಸಾಯುವ ಬಗ್ಗೆ ಯುಟ್ಯೂಬ್‌ನಲ್ಲಿ ಹುಡುಕಾಡಿದ್ದ ಜೀವನ್ಗೆ ಗ್ಯಾಸ್ ಸಿಲಿಂಡರ್ನಲ್ಲಿ ಬರುವ ಮೊನಾಕ್ಸೈಡ್ ಮೂಲಕ ಸುಲಭವಾಗಿ ಸಾಯಬಹುದು ಎಂದು ಗೊತ್ತಾಗಿದೆ. ಹೀಗಾಗಿ ಮುಖಕ್ಕೆ ಮಾಸ್ಕ್ ಧರಿಸಿ ಸಿಲಿಂಡರ್ ಪೈಪ್ನ ಮೂಗಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇಹದ ಒಳಗೆ ಮೊನಾಕ್ಸೈಡ್ ಹೋಗಿ ಕೂತಲ್ಲೇ ಜೀವನ್ ಪ್ರಾಣ ಕಳೆದುಕೊಂಡಿದ್ದಾನೆ.
ಮನೆ ಬಾಗಿಲಿಗೆ ಡೈಯಾಗ್ರಾಮ್ ಅಂಟಿಸಿದ್ದ ಯುವಕ
ಇನ್ನು ಆತ್ಮಹತ್ಯೆಗೂ ಮೊದಲು ಜೀವನ್ ತನ್ನ ಮನೆ ಬಾಗಿಲಿಗೆ ಪೋಸ್ಟ್ ಅಂಟಿಸಿದ್ದ. ಗ್ಯಾಸ್ ಸಿಲಿಂಡರ್ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ಜೀವನ್, ತನ್ನ ಸಾವಿನ ನಂತರ ಮನೆಗೆ ಬರುವ ಮಂದಿಗೆ ಯಾವುದೇ ಪ್ರಾಣಾಪಾಯವಾಗಬಾರದೆಂದು ಚಿಂತಿಸಿ ಮನೆಗೆ ಬರುವ ಜನರು ಏನೆಲ್ಲ ಮಾಡಬೇಕೆಂದು ತನ್ನ ಮನೆ ಬಾಗಿಲಿಗೆ ಡೈಯಾಗ್ರಾಮ್ ಅಂಟಿಸಿದ್ದ. ಮನೆ ಬಾಗಿಲು ಓಪನ್ ಮಾಡಿದ ತಕ್ಷಣ ಕಿಟಕಿ ಓಪನ್ ಮಾಡಿ. ಯಾರೂ ಲೈಟ್ಸ್ ಆನ್ ಮಾಡಬೇಡಿ ಎಂದು ಬರೆದಿದ್ದ. ಆತ್ಮಹತ್ಯೆ ಮಾಡಿಕೊಂಡ 3 ದಿನದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು. ಜೀವನ್ ಫೋನ್ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ನೇಹಿತರು ಜೀವನ್ ಮನೆ ಬಳಿ ಬಂದು ನೋಡಿದಾಗ ಅನಾಹುತ ಬಯಲಾಗಿದೆ. ಡೆತ್‌ನೋಟ್ ಬರೆದಿಟ್ಟು ಜೀವನ್ ಆತ್ಮಹತ್ಯೆಗೆ ಶರಣಾಗಿದ್ದ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವನ್ ಬರೆದ ಡೆತ್ನೋಟ್ನಲ್ಲೇನಿದೆ?
ಮನೆಯವರು ನನಗೆ ಫೋನ್ ಮಾಡ್ತಿಲ್ಲ, ನನ್ನ ಬಗ್ಗೆ ಕೇರ್ ಮಾಡ್ತಿಲ್ಲ, ಲೈಫ್ ಬ್ಯೂಟಿಫುಲ್ ಆಗಿರಬೇಕು ಅಂತಾ ಬೀದರ್ನಿಂದ ಬೆಂಗಳೂರಿಗೆ ಬಂದೆ. ಆದ್ರೆ ಇಲ್ಲಿ ನಾನು ಅನ್ಕೊಂಡ ಹಾಗೇ ಏನು ನಡೀತಿಲ್ಲ. ಲೈಪು ಬೋರಾಗಿದೆ ಅಂತಾ ಜೀವನ್ ಡೆತ್ನೋಟ್ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಮೊಬೈಲ್ನಲ್ಲಿ ಹೆಚ್ಚು ಮಾತನಾಡಬೇಡ ಎಂದು ಹೇಳಿದ್ದೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣವಾಯ್ತಾ?