
ವಿಶ್ವದ ಸಿನಿಮಾ ಪ್ರಿಯರು ಕಾಯುವ ಗಳಿಗೆಯೊಂದಿದೆ. ಅದೇ ಆಸ್ಕರ್ ನಾಮನಿರ್ದೇಶನ ಪ್ರಕಟಣೆ. ಇದನ್ನು ಇಂಗ್ಲಿಷಿನಲ್ಲಿ Oscar Nomination Announcement ಎಂದು ಕರೆಯುತ್ತಾರೆ. ಎಂಬತ್ತರ ದಶಕದಲ್ಲಿ ಕಳೆದು ಹೋದವರ ಮಾಹಿತಿಯನ್ನು ಕೊಡುತ್ತಿದ್ದ ದೂರದರ್ಶನದ ಬೋರಿಂಗ್ ಕಾರ್ಯಕ್ರಮದಂತೆ ಇರುವುದಿಲ್ಲ. ಆಸ್ಕರ್ ನಾಮನಿರ್ದೇಶನ ಪ್ರಕಟಣೆಯೇ ಒಂದು ಹಬ್ಬ. ಈ ಕಾರ್ಯಕ್ರಮ ನಡೆಸಿಕೊಡುವುದನ್ನು ವಿಶ್ವಾದ್ಯಂತ ಕೋಟ್ಯಾಂತರ ಜನ ನೋಡಿ ಆನಂದಿಸುತ್ತಾರೆ. ಸಾಕರ್ ಪಂದ್ಯದಲ್ಲಿ ತಮ್ಮ ನೆಚ್ಚಿನ ಆಟಗಾರ ಗೋಲು ಹೊಡೆದಾಗ ಹುಚ್ಚೆದ್ದು ಕುಣಿವಂತೆ, ಟಿವಿ ಪರದೆ ಮುಂದೆ ಕುಳಿತ ಜನ ಈ ಆಸ್ಕರ್ ನಾಮನಿರ್ದೇಶನ ಪ್ರಕಟಣೆಯನ್ನು ನೋಡುತ್ತ ಹುಚ್ಚೆದ್ದು ಕುಣಿಯುತ್ತಾರೆ. ಈ ಬಾರಿ ಆಸ್ಕರ್ ನಾಮನಿರ್ದೇಶನ ಪ್ರಕಟಣೆಯನ್ನು ಮಾಡುವ ಗೌರವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅವಳ ಗಂಡ ನಿಕ್ ಜೊನಾಸ್ ಅವರ ಪಾಲಾಗಿದೆ. ಈ ಬಾರಿ ಮಾರ್ಚ್ 15 ರ ಬೆಳಿಗ್ಗೆ 5.15 (ಭಾರತೀಯ ಕಾಲಮಾನ) ಗಂಟೆಗೆ ಸರಿಯಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಿಯಾಂಕಾ ಚೋಪ್ರಾ ತಮ್ಮ ಟ್ವಿಟರ್ ಸಂದೇಶದ ಮೂಲಕ ಹಂಚಿಕೊಂಡಿದ್ದಾರೆ.
ಅಕಾಡೆಮಿ ಅವಾರ್ಡ್ ಎಂದು ಕರೆಯಲ್ಪಡುವ ಈ ಕಾರ್ಯಕ್ರಮವನ್ನು ನಾನೊಬ್ಬನೇ ನಡೆಸಿಕೊಡುವೆ ಎಂದು ತಮಾಷೆ ಮಾಡಿದ್ದಾರೆ ಪ್ರಿಯಾಂಕಾ.
ಪ್ರತಿವರ್ಷ ಫೆಬ್ರುವರಿ ಕೊನೆಯ ವಾರ ನಡೆಯುತ್ತಿದ್ದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷ ಕೊವಿಡ್ನಿಂದಾಗಿ ಮುಂದಕ್ಕೆ ಹೋಗಿ ಏಪ್ರಿಲ್ 25 ಕ್ಕೆ ನಿಶ್ಚಯವಾಗಿದೆ. ಇದಕ್ಕೆ ಮೊದಲು ಮಾರ್ಚ್ 15 ಪ್ರಕಟಣೆ ಹೊರಬೀಳಲಿದೆ. ಈ ಕಾರ್ಯಕ್ರಮವನ್ನು ಲೈವ್ಸ್ಟ್ರೀಮ್ ಮೂಲಕ Oscar.org ಯಲ್ಲಿ ನೋಡಬಹುದಾಗಿದೆ. 93ನೇ ಆಸ್ಕರ್ ಅಂದರೆ ಅಕಾಡೆಮಿ ಅವಾರ್ಡ್ ನಾಮನಿರ್ದೇಶನಕ್ಕೆ ಕಾಯ್ದಿರುವ ಚಲನಚಿತ್ರಗಳೆಂದರೆ ಕ್ಲೋ ಝಾವೋ ಅವರ ನೋಮಾಡ್ಲ್ಯಾಂಡ್ (Chloe Zhao’s Nomadland), ಆರೋನ್ ಸೋರ್ಕಿನ್ ಅವರ ದಿ ಟ್ರಾಯಲ್ ಆಫ್ ಚಿಕಾಗೋ-7 (Aaron Sorkin’s The Trial of the Chicago 7) ಮತ್ತು ಎಮೆರಾಲ್ಡ್ ಫೆನೆಲ್ಸ್ ಅವರ ಪ್ರಾಮಿಸಿಂಗ್ ಯಂಗ್ ವುಮನ್ (Emerald Fennell’s Promising Young Woman).
ಆದರೆ ಇಲ್ಲಿ ಒಂದು ಟ್ವಿಸ್ಟ್ ಇದೆ. ಈ ಬಾರಿ ಕಾರ್ಯಕ್ರಮ ಈ ಹಿಂದಿನಂತೆ ನಡೆಯುತ್ತದೆಯೋ ಅಥವಾ online ನಲ್ಲಿ ಕಾರ್ಯಕ್ರಮ ನಡೆಯುತ್ತದೆಯೋ ಎಂಬ ವಿವರ ಇನ್ನೂ ಹೊರಬಿದ್ದಿಲ್ಲ. ಸದ್ಯಕ್ಕೆ ಇರುವ ಮಾಹಿತಿಯಂತೆ, ಕೊವಿಡ್ ಮುನ್ನೆಚ್ಚರಿಕೆ ತೆಗೆದುಕೊಂಡು ಈ ಹಿಂದಿನಂತೆ ಕಾರ್ಯಕ್ರಮ ನಡೆಯುತ್ತದೆ ಎಂದು ಹೇಳಲಾಗಿದ್ದರೂ, ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.
ಇದನ್ನೂ ಓದಿ: ಬಾಲಿವುಡ್ ನಟ ರಣಬೀರ್ ಕಪೂರ್ಗೆ ಕೊರೊನಾ ಪಾಸಿಟಿವ್; ಹೋಮ್ ಕ್ವಾರಂಟೈನ್ನಲ್ಲಿ ಇದ್ದಾರೆ ಎಂದ ನೀತು ಕಪೂರ್
ಹಿಂದಿ ಭಾಷಿಕರಿಂದ ಅವಮಾನಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದ ಈ ನಟಿ ಇಂದು ಬಾಲಿವುಡ್ನ ಸ್ಟಾರ್ ಕಲಾವಿದೆ!
Published On - 5:33 pm, Thu, 11 March 21