ನೂರಾರು ಜನರೊಂದಿಗೆ ಠಾಣೆಯಲ್ಲೇ ಲೇಡಿ PSI ಬರ್ತಡೇ ಸಂಭ್ರಮ, ಎಲ್ಲಿ?
ಯಾದಗಿರಿ: ಕೊರೊನಾ ಸೋಂಕು ರಾಜ್ಯದಲ್ಲಿ ದಿನೇ ದಿನೇ ಏರುತ್ತಲೇ ಇದ್ದು, ಈ ಸಮಯದಲ್ಲಿ ಸಮಾಜಕ್ಕೆ ಮಾರ್ಗದರ್ಶಕರಾಗಬೇಕಿದ್ದ ಪೊಲೀಸರೆ ಸಾಮಾಜಿಕ ಜವಾಬ್ದಾರಿ ಮರೆತು, ನೂರಾರು ಜನರೊಂದಿಗೆ ಸೇರಿ ಜನ್ಮದಿನ ಆಚರಿಸಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿ ನಗರದ ಪೊಲೀಸ್ ಠಾಣೆಯಲ್ಲಿ PSI ಸೌಮ್ಯ ಅವರ ಜನ್ಮ ದಿನಾಚರಣೆಯನ್ನು, ಮಾಸ್ಕ್ ದರಿಸದೆ, ಸಾಮಾಜಿಕ ಅಂತರ ಮರೆತು ನೂರಾರು ಜನ ಸೇರಿ ಆಚರಣೆ ಮಾಡಿರುವ ಘಟನೆ ತಡರಾತ್ರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ವಿಚಾರವಾಗಿ ಈಗ ಸಾರ್ವಜನಿಕರಿಂದ ತೀವ್ರ ಆಕ್ರೋಶ […]
ಯಾದಗಿರಿ: ಕೊರೊನಾ ಸೋಂಕು ರಾಜ್ಯದಲ್ಲಿ ದಿನೇ ದಿನೇ ಏರುತ್ತಲೇ ಇದ್ದು, ಈ ಸಮಯದಲ್ಲಿ ಸಮಾಜಕ್ಕೆ ಮಾರ್ಗದರ್ಶಕರಾಗಬೇಕಿದ್ದ ಪೊಲೀಸರೆ ಸಾಮಾಜಿಕ ಜವಾಬ್ದಾರಿ ಮರೆತು, ನೂರಾರು ಜನರೊಂದಿಗೆ ಸೇರಿ ಜನ್ಮದಿನ ಆಚರಿಸಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ ನಗರದ ಪೊಲೀಸ್ ಠಾಣೆಯಲ್ಲಿ PSI ಸೌಮ್ಯ ಅವರ ಜನ್ಮ ದಿನಾಚರಣೆಯನ್ನು, ಮಾಸ್ಕ್ ದರಿಸದೆ, ಸಾಮಾಜಿಕ ಅಂತರ ಮರೆತು ನೂರಾರು ಜನ ಸೇರಿ ಆಚರಣೆ ಮಾಡಿರುವ ಘಟನೆ ತಡರಾತ್ರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಈ ವಿಚಾರವಾಗಿ ಈಗ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ, ಜೊತೆಗೆ ಸಾಮಾನ್ಯ ಜನರಿಗೆ ಒಂದು ನ್ಯಾಯ, ಅಧಿಕಾರಿಗಳಿಗೆ ಒಂದು ನ್ಯಾಯ ಎಂದು ಪೊಲೀಸರ ವಿರುದ್ಧ ಕಿಡಿಕಾರುತ್ತಿದ್ದಾರೆ.
ಹಾಗೂ ಸಾಮಾಜಿಕ ಜವಾಬ್ದಾರಿ ಮರೆತು ದೈಹಿಕ ಅಂತರವಿಲ್ಲದೆ ಜನ್ಮದಿನ ಆಚರಣೆ ಮಾಡಿದ ಪೊಲೀಸ್ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿನಂತಿ ಮಾಡಿದ್ದಾರೆ.
Published On - 6:21 pm, Mon, 3 August 20