
ಕೊಪ್ಪಳ: ಉತ್ತರ ಕರ್ನಾಟಕದ ಪ್ರವಾಹವನ್ನು ನಾನು ಟಿವಿಯಲ್ಲಿ ನೋಡಿದ್ದೇನೆ ಎಂದು ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಹೇಳಿದ್ದಾರೆ. ಜೇಮ್ಸ್ ಸಿನಿಮಾ ಚಿತ್ರೀಕರಣಕ್ಕಾಗಿ ಜಿಲ್ಲೆಗೆ ಬಂದಿರೋ ಪುನೀತ್ ನಾವೆಲ್ಲ ನಮ್ಮ ನಮ್ಮ ಸುರಕ್ಷತೆಯಲ್ಲಿ ಇರೋದು ತುಂಬಾ ಮುಖ್ಯ ಎಂದು ಹೇಳಿದ್ದಾರೆ.
ಮಳೆ ತುಂಬಾ ಜಾಸ್ತಿಯಾಗ್ತಿದೆ. ಚಿತ್ರರಂಗದವರಿಂದ ಸಹಾಯ ಮಾಡೋ ಸಂದರ್ಭ ಬಂದರೆ ನಾವೆಲ್ಲಾ ನೆರೆ ಸಂತ್ರಸ್ತರ ಜೊತೆಗಿರುತ್ತೇವೆ. ನಾವೆಲ್ಲರೂ ಅವರ ಜೊತೆ ನಿಲ್ಲಬೇಕು. ಮನುಷ್ಯತ್ವದ ಪ್ರಕಾರ ನಾವೇನು ಮಾಡಬೇಕು ಅದನ್ನ ಮಾಡಬೇಕು. ನಾನೊಬ್ಬ ಭಾರತೀಯನಾಗಿ ಅವರಿಗೆ ಏನು ಮಾಡಬೇಕೋ ಅದನ್ನ ಮಾಡ್ತೀನಿ ಎಂದು ಪುನೀತ್ ಹೇಳಿದ್ದಾರೆ.
ಪ್ರೇಕ್ಷಕರು ಚಿತ್ರರಂಗಕ್ಕೆ ಬರಲು ಅಪ್ಪು ಮನವಿ
ಇನ್ನು ಚಿತ್ರಮಂದಿರಗಳು ಓಪನ್ ಆದ ವಿಚಾರವಾಗಿ ಪ್ರೇಕ್ಷಕರಿಗೆ ಚಿತ್ರರಂಗಕ್ಕೆ ಬರಲು ಅಪ್ಪು ಮನವಿ ಮಾಡಿಕೊಂಡರು. ಮುಂಜಾಗ್ರತಾ ಕ್ರಮಕೈಗೊಂಡು ಜನರು ಚಿತ್ರಮಂದಿರಕ್ಕೆ ಬರಲಿ ಎಂದು ವಿನಂತಿಸಿದರು.
‘ಕೊಪ್ಪಳ ನನಗೇನು ಹೊಸದಲ್ಲ.. ಅಪ್ಪಾಜಿ ನೆನಪು ಇಲ್ಲಿದೆ’
ಜಿಲ್ಲೆಯ ಬಗ್ಗೆ ಮಾತನಾಡಿದ ಪುನೀತ್ ಕೊಪ್ಪಳ ನನಗೇನು ಹೊಸದಲ್ಲ. ಅಪ್ಪಾಜಿಯ ನೆನಪು ಇಲ್ಲಿದೆ. ಆ ಜಾಗ ನೋಡಿಕೊಂಡು ಬಂದಿದ್ದೇನೆ. ತುಂಬಾ ಖುಷಿಯಾಯ್ತು ಎಂದು ಹೇಳಿದರು. ಆದರೆ, ಇಲ್ಲಿನ ಸ್ಥಳೀಯರು ಮಾಸ್ಕ್ ಧರಿಸುತ್ತಿಲ್ಲ ಎಂದು ಪವರ್ ಸ್ಟಾರ್ ತಮ್ಮ ಬೇಸರವನ್ನು ಹೊರಹಾಕಿದರು.
Published On - 3:38 pm, Sat, 17 October 20