AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು 100 ಮೀಟರ್ ನಡ್ಕೊಂಡು ಹೋಗಬೇಕು.. ಅವರು ಕಾರಲ್ಲಿ ಹೋಗಬಹುದಾ? ಅಶೋಕ್ ಪಾಯಿಂಟ್

ಬೆಂಗಳೂರು: ಕ್ಷೇತ್ರದಲ್ಲಿ ಬಿಜೆಪಿ ಸೇರುವವರ ಪಟ್ಟಿ ಇನ್ನೂ ದೊಡ್ಡದು ಇದೆ. ಚುನಾವಣೆ ಗೆಲ್ಲಲು ಶತಪ್ರಯತ್ನ ಮಾಡುತ್ತೇವೆ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆ ಪ್ರಚಾರದ ವೇಳೆ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ನವೆಂಬರ್ 3ರಂದು ಉಪಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ಆರಂಭವಾಗಿದೆ. ತನ್ನಿಮಿತ್ತ, ಸಚಿವ ಆರ್. ಅಶೋಕ್ ಈ ರೀತಿ ಹೇಳಿದ್ದಾರೆ. ಚುನಾವಣೆ ಗೆಲ್ಲಲು ಶತಪ್ರಯತ್ನ ಮಾಡುತ್ತೇವೆ: ಕ್ಷೇತ್ರದಲ್ಲಿ ಬಿಜೆಪಿ ಸೇರುವವರ ಪಟ್ಟಿ ಇನ್ನೂ ದೊಡ್ಡದಿದೆ. 3-4 ದಿನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಗೆ ಸೇರುತ್ತಾರೆ. ಬರುವವರೆಲ್ಲಾ […]

ನಾವು 100 ಮೀಟರ್ ನಡ್ಕೊಂಡು ಹೋಗಬೇಕು.. ಅವರು ಕಾರಲ್ಲಿ ಹೋಗಬಹುದಾ? ಅಶೋಕ್ ಪಾಯಿಂಟ್
ಆಯೇಷಾ ಬಾನು
|

Updated on:Oct 17, 2020 | 3:08 PM

Share

ಬೆಂಗಳೂರು: ಕ್ಷೇತ್ರದಲ್ಲಿ ಬಿಜೆಪಿ ಸೇರುವವರ ಪಟ್ಟಿ ಇನ್ನೂ ದೊಡ್ಡದು ಇದೆ. ಚುನಾವಣೆ ಗೆಲ್ಲಲು ಶತಪ್ರಯತ್ನ ಮಾಡುತ್ತೇವೆ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆ ಪ್ರಚಾರದ ವೇಳೆ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ನವೆಂಬರ್ 3ರಂದು ಉಪಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ಆರಂಭವಾಗಿದೆ. ತನ್ನಿಮಿತ್ತ, ಸಚಿವ ಆರ್. ಅಶೋಕ್ ಈ ರೀತಿ ಹೇಳಿದ್ದಾರೆ.

ಚುನಾವಣೆ ಗೆಲ್ಲಲು ಶತಪ್ರಯತ್ನ ಮಾಡುತ್ತೇವೆ: ಕ್ಷೇತ್ರದಲ್ಲಿ ಬಿಜೆಪಿ ಸೇರುವವರ ಪಟ್ಟಿ ಇನ್ನೂ ದೊಡ್ಡದಿದೆ. 3-4 ದಿನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಗೆ ಸೇರುತ್ತಾರೆ. ಬರುವವರೆಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರೇ. ಅವರೆಲ್ಲಾ ಬಿಜೆಪಿ ಸೇರಿದರೆ ಬಿಜೆಪಿಗೂ, ಜೆಡಿಎಸ್‌ಗೂ ಹಣಾಹಣಿಯಾದ್ರೂ ಅಚ್ಚರಿ ಇಲ್ಲ. ಸೇರಿಗೆ ಸವ್ವಾಸೇರು ಅಂತಾ ಈಗಾಗಲೇ ಹೇಳಿದ್ದೇನೆ. ಚುನಾವಣೆ ಗೆಲ್ಲಲು ಶತಪ್ರಯತ್ನ ಮಾಡುತ್ತೇವೆ.

ನಿನ್ನೆ ಕಾಂಗ್ರೆಸ್‌ನವರು ನಾಮಿನೇಷನ್ ಧರಣಿ ಮಾಡಿದ್ದಾರೆ. ನನಗೆ ಅನ್ನಿಸುತ್ತಿದೆ ಇವರಿಗೆ ಸಂವಿಧಾನವನ್ನೇ ಚೇಂಜ್ ಮಾಡಬೇಕೇನೋ. ಕಾಂಗ್ರೆಸ್​ನವರು ಕಾರಿನಲ್ಲಿ ಎಷ್ಟು ಜನ ಬೇಕಾದ್ರೂ ಹೋಗಬಹುದು. ಬೇರೆಯವರು ನಿಯಮದಂತೆ ನಾಮಿನೇಷನ್ ಮಾಡಬೇಕು ಎಂದು ಹೇಳಿದರು.

ಡಿಜೆ ಹಳ್ಳಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ ಅಂತಾ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದೆರ ಇದು ಮಾಜಿ ಮೇಯರ್ ಮತ್ತು ಅಖಂಡ ಶ್ರೀನಿವಾಸ ಮೂರ್ತಿ ನಡುವಿನ ಗಲಾಟೆ ಅಂತಾ ಎಲ್ಲರಿಗೂ ಗೊತ್ತಿದೆ. ಪೊಲೀಸ್ FIRನಲ್ಲೂ‌ ಅದು ದಾಖಲಾಗಿದೆ. ಆದರೂ ಕೂಡಾ ಕಾನೂನು ಕೈಗೆತ್ತಿಕೊಂಡಿದ್ದಾರೆ ಎಂದು ಹೇಳುತ್ತಾರೆ.

ಬ್ಯಾರಿಕೇಡ್ ತಳ್ಳಿ ಕಾರಿನಲ್ಲಿ ಹೋಗಿ ಅಂತಾ ನಾವೇನಾದರೂ ಹೇಳಿದ್ದೀವಾ? ಚುನಾವಣೆ ಘೋಷಣೆ ಆದ ಮೇಲೆ ಎಲ್ಲಾ ಅಧಿಕಾರಿಗಳು ಆಯೋಗದ ವ್ಯಾಪ್ತಿಯಲ್ಲಿ ಇರುತ್ತಾರೆ. ನಮಗೆ ಬೇರೆ ನೀತಿ ಸಂಹಿತೆ ಅವರಿಗೆ ಬೇರೆನಾ? ನಾವು ಆಡಳಿತ ಪಕ್ಷದವರು ಕಾರು ಬಿಟ್ಟು ನೂರು ಮೀಟರ್ ನಡ್ಕೊಂಡು ಹೋಗಬೇಕು. ಅವರು ವಿಪಕ್ಷದಲ್ಲಿದ್ದರೂ ಕಾರ್ ತಗೊಂಡು ಹೋಗಬಹುದು? ಎಲ್ಲಿ ಕಾನೂನು? ಎಂದು ಕಾಂಗ್ರೆಸ್​ಗೆ ತರಾಟೆಗೆ ತೆಗೆದುಕೊಂಡ್ರು.

Published On - 3:08 pm, Sat, 17 October 20