AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಕಿನಿಂದ ಗುಣಮುಖರಾದ ಪುತ್ತಿಗೆ ಸ್ವಾಮೀಜಿ ಕಿವಿಮಾತು ಇದು..

ಉಡುಪಿ: ಕೊರೊನಾ ಲಕ್ಷಾಂತರ ಜನರಿಗೆ ಬಾಧೆ ಕೊಟ್ಟಿದೆ. ನಾನೂ ಬಾಧೆಗೆ ಒಳಗಾಗಿ ಮಣಿಪಾಲ  ಆಸ್ಪತ್ರೆಗೆ ದಾಖಲಾದೆ. ಸಮಸ್ಯೆಗೆ ಏನು ಕಾರಣ ಎಂದು ಆಲೋಚಿಸಿದೆ. ಶಾಶ್ವತ ಪರಿಹಾರ ಏನು ಎಂಬ ಬಗ್ಗೆ ಚಿಂತನೆ ಮಾಡಿದೆ. ನನಗೆ ಅನುಭವಕ್ಕೆ ಬಂದ ವಿಚಾರ ಹಂಚಿಕೊಳ್ತೇನೆ. ಲಸಿಕೆ ಅಥವಾ ಔಷಧ ಕಂಡು ಹಿಡಿದರೂ ಕೊರೊನಾ ಸಮಸ್ಯೆ ಪೂರ್ಣ ಬಗೆಹರಿಯಲ್ಲ. ಪ್ರತಿಯೊಬ್ಬರಲ್ಲೂ ಪ್ರತಿರೋಧ ಶಕ್ತಿ ಕುಂಠಿತವಾಗಿದೆ. ಕೊರೊನಾ ಮಾತ್ರವಲ್ಲ ಮುಂದೆ ಇನ್ನೂ ಅನೇಕ ಸಮಸ್ಯೆ ಬರಬಹುದು. ಪ್ರತಿರೋಧ ಶಕ್ತಿ ಚೆನ್ನಾಗಿದ್ರೆ ನಮಗೆ ಯಾವ ರೋಗವೂ […]

ಸೋಂಕಿನಿಂದ ಗುಣಮುಖರಾದ ಪುತ್ತಿಗೆ ಸ್ವಾಮೀಜಿ ಕಿವಿಮಾತು ಇದು..
ಸಾಧು ಶ್ರೀನಾಥ್​
|

Updated on: Aug 03, 2020 | 5:15 PM

Share

ಉಡುಪಿ: ಕೊರೊನಾ ಲಕ್ಷಾಂತರ ಜನರಿಗೆ ಬಾಧೆ ಕೊಟ್ಟಿದೆ. ನಾನೂ ಬಾಧೆಗೆ ಒಳಗಾಗಿ ಮಣಿಪಾಲ  ಆಸ್ಪತ್ರೆಗೆ ದಾಖಲಾದೆ. ಸಮಸ್ಯೆಗೆ ಏನು ಕಾರಣ ಎಂದು ಆಲೋಚಿಸಿದೆ. ಶಾಶ್ವತ ಪರಿಹಾರ ಏನು ಎಂಬ ಬಗ್ಗೆ ಚಿಂತನೆ ಮಾಡಿದೆ. ನನಗೆ ಅನುಭವಕ್ಕೆ ಬಂದ ವಿಚಾರ ಹಂಚಿಕೊಳ್ತೇನೆ. ಲಸಿಕೆ ಅಥವಾ ಔಷಧ ಕಂಡು ಹಿಡಿದರೂ ಕೊರೊನಾ ಸಮಸ್ಯೆ ಪೂರ್ಣ ಬಗೆಹರಿಯಲ್ಲ.

ಪ್ರತಿಯೊಬ್ಬರಲ್ಲೂ ಪ್ರತಿರೋಧ ಶಕ್ತಿ ಕುಂಠಿತವಾಗಿದೆ. ಕೊರೊನಾ ಮಾತ್ರವಲ್ಲ ಮುಂದೆ ಇನ್ನೂ ಅನೇಕ ಸಮಸ್ಯೆ ಬರಬಹುದು. ಪ್ರತಿರೋಧ ಶಕ್ತಿ ಚೆನ್ನಾಗಿದ್ರೆ ನಮಗೆ ಯಾವ ರೋಗವೂ ತಟ್ಟಲ್ಲ. ಪ್ರತಿರೋಧ ಶಕ್ತಿ ವೃದ್ಧಿಯೊಂದೇ ಎಲ್ಲಾ ಕಾಯಿಲೆಗೂ ಪರಿಹಾರ.

ನನಗೆ ಯಾವತ್ತೂ ಬೆಳಿಗ್ಗೆ ನಾಲ್ಕು ಗಂಟೆಗೆ ಕೆಮ್ಮು ಪ್ರಾರಂಭವಾಗ್ತಿತ್ತು. ರಾತ್ರಿ ಬೇಗ ಮಲಗಿ ಅಂತ ವೈದ್ಯರು ಹೇಳಿದ್ರು,  ರಾತ್ರಿ ಎಂಟು ಗಂಟೆಗೆ ಮಲಗಿದಾಗ ಸಮಸ್ಯೆ ಪರಿಹಾರ ಆಯ್ತು. ಆಸ್ಪತ್ರೆಯಲ್ಲಿ ಇದ್ದಾಗ, ಬೇಗ ಮಲಗಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡೆ.

ಸಕಾಲಕ್ಕೆ ಆಹಾರ, ನಿದ್ರೆ ಮಾಡಿದ್ರೆ ಯಾವ ರೋಗವೂ ಬರಲ್ಲ.. ನಮ್ಮ ಸನಾತನ ಜೀವನ ಪದ್ಧತಿ, ಭಗವದ್ಗೀತೆಯೂ ಅದನ್ನೇ ಹೇಳಿದೆ. ಆರೋಗ್ಯದ ಬಗ್ಗೆ ಕೃಷ್ಣನೂ ಅದೇ ಸೂಚನೆ ನೀಡಿದ್ದಾನೆ. ಸಕಾಲಕ್ಕೆ ಆಹಾರ, ನಿದ್ರೆ ಮಾಡಿದ್ರೆ ಯಾವ ರೋಗವೂ ಬರಲ್ಲ.

ಸೂರ್ಯಾಸ್ಥದ ಮೊದಲು ಆಹಾರ, ಸೂರ್ಯಾಸ್ತದ ಎರಡು ಗಂಟೆಯಲ್ಲಿ ನಿದ್ರೆ ಮಾಡಬೇಕು. ಇದರಿಂದ ಪ್ರತಿರೋಧ ಶಕ್ತಿ ಜಾಗೃತವಾಗುತ್ತೆ. ಇದನ್ನು ನನ್ನ ಅನುಭವದಲ್ಲಿ ಕಂಡುಕೊಂಡಿದ್ದೇನೆ.

ಬಿಡುವಿಲ್ಲದ ದಿನಚರಿಯಲ್ಲಿ ಶುದ್ಧ ಆಹಾರ ಸ್ವೀಕರಿಸಿರೂ ಆರೋಗ್ಯದ ಸಮಸ್ಯೆ ಬರಲು ಕಾರಣ ಏನು ಅಂತ ಆಲೋಚಿಸಿದೆ. ಸಕಾಲದಲ್ಲಿ ಆಹಾರ ನಿದ್ರೆ ಮಾಡದೇ ಇರುವುದೇ ಕೊರೊನಾ ಬರಲು ಕಾರಣವಾಯ್ತು. ನಿರೋಧಕ ಶಕ್ತಿ ಇಲ್ಲವಾದ್ರೆ ಎಷ್ಟೇ ಸಾತ್ವಿಕ ಆಹಾರ ಸ್ವೀಕರಿಸಿದರೂ ಆರೋಗ್ಯ ಹಿಡಿತಕ್ಕೆ ಬರಲ್ಲ.

ಚೀನಾ ದೇಶದ ಕುಂತಂತ್ರದಿಂದ ಪಾಕಿಸ್ತಾನದ ಜೊತೆ ಸೇರಿ ನಮ್ಮ ದೇಶದ ಮೇಲೆ ಜೈವಿಕ ಅಸ್ತ್ರ ಪ್ರಯೋಗ ಆಗುತ್ತೆ ಅನ್ನೋ ವಾರ್ತೆ ಕೇಳ್ತಾ ಇದ್ದೇವೆ. ವಿವಿಧ ಜೈವಿಕ ಅಸ್ತ್ರ ಪ್ರಯೋಗಕ್ಕೆ ಪ್ರತಿರೋಧಕ ಶಕ್ತಿಯೇ ಉತ್ತರ. ದೇಶ ಮತ್ತು ಸೈನ್ಯದ ಹಿತದೃಷ್ಟಿಯಿಂದ ಪ್ರತಿರೋಧಕ ಶಕ್ತಿ ಜಾಗೃತವಾಗಿಟ್ಟುಕೊಳ್ಳಬೇಕು. ಅಧುನಿಕ ಜೀವನ ಶೈಲಿಯಿಂದಲೇ ಸಮಸ್ಯೆ ಉಂಟಾಗುತ್ತಿದೆ. ಆರೋಗ್ಯಕ್ಕೆ ಇದರಿಂದ ಹಾನಿಯಾಗುತ್ತಿದೆ.

ರಾತ್ರಿ ಎಂಟರಿಂದ ಬೆಳಿಗ್ಗೆ ನಾಲ್ಕರವರೆಗು ರಾಷ್ಟ್ರೀಯ ವಿಶ್ರಾಂತಿ ಸಮಯ ಘೋಷಿಸಬೇಕು.. ಹಾಗಾಗಿ ಜೀವನ ಪದ್ಧತಿಯಲ್ಲಿ ಬದಲಾವಣೆ ಮಾಡಲೇಬೇಕು. ಕಚೇರಿಗಳು ಬೆಳಿಗ್ಗೆ ಆರೇಳು ಗಂಟೆಗೆ ಆರಂಭವಾಗಿ ಮಧ್ಯಾಹ್ನ ಮೂರು ನಾಲ್ಕು ಗಂಟೆಗೆ ಮುಗಿದರೆ ಜನರಿಗೂ ಅನುಕೂಲ ಆಗುತ್ತೆ. ಸೂರ್ಯಾಸ್ತದ ಒಳಗೆ ಆಹಾರ ಸ್ವೀಕರಿಸಿ ಎಂಟು ಗಂಟೆಯ ನಂತ್ರ ವಿಶ್ರಾಂತಿ ಪಡೆಯಬೇಕು. ಎಂಟರ ನಂತರ ಯಾವುದೇ ಟಿವಿ ಚಾನೆಲ್, ಸೀರಿಯಲ್ ಬರಬಾದು. ಅಂಗಡಿ ಮಳಿಗೆಗಳು ಎಂಟು ಗಂಟೆಗೆ ಮುಚ್ಚಬೇಕು. ಕೂನೂನಿನ ಮುಖಾಂತರ ಈ ಕೆಲಸ ಮಾಡಬೇಕು.ರಾತ್ರಿ ಎಂಟರಿಂದ ಬೆಳಿಗ್ಗೆ ನಾಲ್ಕರವರೆಗು ರಾಷ್ಟ್ರೀಯ ವಿಶ್ರಾಂತಿ ಸಮಯ ಘೋಷಿಸಬೇಕು. ಲಾಕ್ ಡೌನ್ ಥರ ಕಟ್ಟುನಿಟ್ಟಿನ ನಿಯಮ ಬರಲಿ.

ಕೊರೊನಾದಂತಹ ಭವಿಷ್ಯದ ಸಮಸ್ಯೆಗಳನ್ನು ಎದುರಿಸಬೇಕು ಅಂದ್ರೆ ಈ ಕೆಲಸ ಆಗಬೇಕು. ಮೋದಿಯವರು ಈ ಬಗ್ಗೆ ವಿಶೇಷ ಗಮನಹರಿಸಿ. ಮಕ್ಕಳಿಗೆ ಬಾಲ್ಯದಿಂದಲೇ ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎಳುವ ಕ್ರಮ ಅಭ್ಯಾಸವಾಗಲಿ. ಅಮೇರಿಕಾದಲ್ಲಿ ಶತಾಯುಷಿಗಳ ಸಂಖ್ಯೆ ಜಾಸ್ತಿಯಾಗಿದೆ.

ಕಾರಣ ಏನಂದ್ರೆ ಸೂರ್ಯಾಸ್ತಕ್ಕೆ ಮೊದಲೇ ಅವರು ಆಹಾರ ಸ್ವೀಕಾರ ಮಾಡ್ತಾರೆ. ಸೂರ್ಯಾಸ್ತದ ನಂತರ ಆಹಾರ ಇಲ್ಲ. ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡೋಣ, ಇದರಿಂದ ಹೆಚ್ಚು ಹುರುಪು ಚೈತನ್ಯ ಪಡೆಯಲು ಸಾಧ್ಯ. ಇದು ನನ್ನ ಅನುಭವಕ್ಕೂ ಬಂದಿದೆ. ಎಂಟರ ನಂತರ ಟಿವಿ ಮೊಬೈಲ್ ಬಳಸಲ್ಲ ಅಂದ್ರೆ ಪ್ರತಿರೋಧ ಶಕ್ತಿ ವೃದ್ಧಿಯಾಗುತ್ತೆ.ಈ ಎಲ್ಲಾ ಬದಲಾವಣೆಗೆ ಸರ್ಕಾರಗಳು ಪೂರಕ ಶಾಸನ ತರಲಿ ಎಂದು ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. -ಹರೀಶ್ ಪಾಲೆಚ್ಚಾರ್

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?