ಬೆಂಗಳೂರು: ರಾಜ್ಯದಲ್ಲಿ ರಾಜ್ಯಸಭಾ ಚುನಾವಣಾ ಕಣ ಕಾವೇರಿದೆ. ರಾಜ್ಯಸಭೆಗೆ ಕಾಂಗ್ರೆಸ್ 2ನೇ ಅಭ್ಯರ್ಥಿ ಕಣಕ್ಕಿಳಿಸುತ್ತಿರುವ ಹಿನ್ನೆಲೆ ಕಾಂಗ್ರೆಸ್ಗೆ ಕೌಂಟರ್ ನೀಡಲು ಬಿಜೆಪಿ ನಾಯಕರು ಪ್ಲ್ಯಾನ್ ಮಾಡುತ್ತಿದ್ದಾರೆ. ಬಿಜೆಪಿಯಿಂದ 3ನೇ ಅಭ್ಯರ್ಥಿ ಕಣಕ್ಕಿಳಿಸಲು ಸಿಎಂ ಒಲವು ತೋರಿದ್ದು, ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಪ್ರಾಥಮಿಕ ಸಿದ್ಧತೆಗೆ ಸಿಎಂ ಬೊಮ್ಮಾಯಿ, ಸೂಚನೆ ನೀಡಿದ್ದಾರೆ. ಚುನಾವಣಾ ವರ್ಷ ಹಿನ್ನೆಲೆ 3ನೇ ಅಭ್ಯರ್ಥಿ ಕಣಕ್ಕಿಳಿಸಿದರೆ, ಜೆಡಿಎಸ್ ಬೆಂಬಲ ಸಿಗಲಾರದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಹೀಗಾಗಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆಯಿದ್ದು, ಈ ಬಗ್ಗೆ ಬಿಜೆಪಿಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗುತ್ತಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 2ನೇ ಅಭ್ಯರ್ಥಿ ಕಣಕ್ಕೆ ಸಿದ್ಧವಾಗಿದ್ದು, ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಬೆಂಬಲ ಅನಿವಾರ್ಯವಾಗಿದೆ. ಕಾಂಗ್ರೆಸ್ ಶಾಸಕರ ಬೆಂಬಲದ ನಿರೀಕ್ಷೆಯಲ್ಲಿದ್ದ ಕುಪೇಂದ್ರ ರೆಡ್ಡಿ, ಸದ್ಯ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇದೀಗ ಲೆಕ್ಕಾಚಾರ ತಲೆಕೆಳಗಾದ ಹಿನ್ನೆಲೆ ಬಿಜೆಪಿ ಮತ ಅನಿವಾರ್ಯವಾಗಿದ್ದು, ಬಿಜೆಪಿ ಪಾಳೆಯದ ಮುಂದೆ JDS ಮಂಡಿಯೂರಬೇಕಾದ ಅನಿವಾರ್ಯತೆ ಇದೆ ಎನ್ನಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್, ಜಾತ್ಯತೀತ ಜನತಾ ದಳ ಬಳಿ ಇರುವುದು 32 ಶಾಸಕರು ಮಾತ್ರ. ಬಿಜೆಪಿಯ 2 ಅಭ್ಯರ್ಥಿ ಆಯ್ಕೆ ಬಳಿಕ 28 ಮತ ಉಳಿಯಲಿದೆ. ಕಾಂಗ್ರೆಸ್ನ 2ನೇ ಅಭ್ಯರ್ಥಿಗೆ 24 ಮತಗಳು ಮಾತ್ರ ಉಳಿಯಲಿವೆ. ಕಾಂಗ್ರೆಸ್ ಪಕ್ಷದ 2ನೇ ಅಭ್ಯರ್ಥಿ ಗೆಲುವಿಗೆ ಮತಗಳ ಕೊರತೆಯಿದೆ. ಕಾಂಗ್ರೆಸ್ನ 2ನೇ ಅಭ್ಯರ್ಥಿ ಗೆಲುವಿನ ಹಾದಿ ಕೂಡ ಸುಲಭವಲ್ಲ. JDSನ್ನು ಅಡಕತ್ತರಿಯಲ್ಲಿ ಸಿಲುಕಿಸುವ ಉದ್ದೇಶದಿಂದ 2ನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ನ್ನು ಕಾಂಗ್ರೆಸ್ ಕಣಕ್ಕಿಳಿಸಲಿದೆ.
ಇದನ್ನೂ ಓದಿ: GT vs RR Final: ಆರೆಂಜ್ ಕ್ಯಾಪ್ ಜೊತೆಗೆ ಮೋಸ್ಟ್ ವ್ಯಾಲ್ಯುಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಜೋಸ್ ಬಟ್ಲರ್..!
ರಾಜ್ಯ ಸಭೆಯ ಅಭ್ಯರ್ಥಿ ಆಯ್ಕೆಗೆ 45 ಮತಗಳು ಬೇಕು. ಬಿಜೆಪಿ ಸೀಟ್ 122, ಕಾಂಗ್ರೆಸ್ ಸೀಟ್ 71, ಜೆಡಿಎಸ್ ಸೀಟ್ 32 ಸದ್ಯ ಮೂರು ಪಕ್ಷದವರ ಬಳಿ ಇರುವ ಮತಗಳ ಸಂಖ್ಯೆ. ಕಾಂಗ್ರೆಸ್ ಮೊದಲ ಅಭ್ಯರ್ಥಿಗೆ 47 ಮತ ಹಂಚಿಕೆಮಾಡಿದ್ದೆ ಆದರೆ, ಕಾಂಗ್ರೆಸ್ ಬಳಿ 24 ಮತಗಳು ಹೆಚ್ಚುವರಿಯಾಗಿ ಉಳಿಯುತ್ತೆ. ಬಿಜೆಪಿ ತನ್ನ 2 ಅಭ್ಯರ್ಥಿಗೆ ತಲಾ 47 ಮತ ಹಂಚಿಕೆಮಾಡಿದ್ದೆ ಆದರೆ, ಬಿಜೆಪಿ ಬಳಿ ಹೆಚ್ಚವರಿಯಾಗಿ 28 ಮತಗಳು ಉಳಿಯುತ್ತವೆ. ಆದರೆ ಇದುವರೆಗೂ ಬಿಜೆಪಿ ಮೂರನೇ ಅಭ್ಯರ್ಥಿಯನ್ನ ಘೋಷಿಸಿಲ್ಲ. 2016ರಲ್ಲಿ ಜೆಡಿಎಸ್ನ 7 ಶಾಸಕರರಿಂದ ಕ್ರಾಸ್ ವೋಟಿಂಗ್ ಮಾಡಿತ್ತು. ಅದರ ಮೂಲಕ ಮೂರನೇ ಅಭ್ಯರ್ಥಿ ಗೆಲ್ಲಿಸಿದಿದ್ದ ಕಾಂಗ್ರೆಸ್, ಜೆಡಿಎಸ್ 5 ಶಾಸಕರು ಕ್ರಾಸ್ ವೋಟ್ ಮಾಡುವುದೆಂದು ಕಾಂಗ್ರೆಸ್ ನೀರಿಕ್ಷೆ ಇದೆ. ಜೆಡಿಎಸ್ನ ಭಿನ್ನ ಮತಿಯರ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. 5 ಮತಗಳು ಕಾಂಗ್ರೆಸ್ ಪರ ವಾಲಿದರೆ ಕಾಂಗ್ರೆಸ್ಗೆ 29 ಮತಗಳಾಗುತ್ತವೆ. ಅಲ್ಪ ಮತದ ಮೂಲಕ 2ನೇ ಅಭ್ಯರ್ಥಿ ಗೆಲ್ಲಿಸುವುದು ಕಾಂಗ್ರೆಸ್ ಲೆಕ್ಕಚಾರವಾಗಿದೆ.
ಜೆಡಿಎಸ್ ಬಳಿ ಸದ್ಯ ಇರುವುದೇ ಕೇವಲ 32 ಮತಗಳು. ಜೆಡಿಎಸ್ ತನ್ನ ಅಭ್ಯರ್ಥಿಯ ಪೂರ್ಣ ಗೆಲುವಿಗೆ ನೆರವು ಅಗತ್ಯವಾಗಿದೆ. ಬೇರೆ ಪಕ್ಷದ ಮತಗಳು ಜೆಡಿಎಸ್ಗೆ ಅನಿವಾರ್ಯವಾಗಲಿದೆ. ಬೇರೆ ಪಕ್ಷದ ಮತಗಳು ಸಿಕ್ಕರೆ ಮಾತ್ರ ಅಭ್ಯರ್ಥಿ ಗೆಲುವು ಸಾಧ್ಯತೆಯಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.