ಬೆಳಗಾವಿ: ಸುರೇಶ್ ಅಂಗಡಿ ಬದುಕಿದ್ದರೆ 2-3 ತಿಂಗಳಲ್ಲಿ ದೊಡ್ಡ ಹುದ್ದೆ ಸಿಗುತ್ತಿತ್ತು ಎಂದು ಗೋಕಾಕ್‌ನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಸುರೇಶ್ ಅಂಗಡಿಗೆ ಒಳ್ಳೆಯ ಭವಿಷ್ಯವಿರುತ್ತಿತ್ತು. ಅವರಿಗೆ ವಿಚಿತ್ರ ಹುದ್ದೆ ಸಿಗುತ್ತಿತ್ತು ಎಂದು ರಮೇಶ್ ಹೇಳಿದ್ದಾರೆ. ಈ ಮೂಲಕ ಸುರೇಶ್ ಅಂಗಡಿ ಸಿಎಂ ಆಗುತ್ತಿದ್ರು ಅಂತಾ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಹೇಳಿಕೆ ಕೊಟ್ರಾ ಅನ್ನೋ ಮಾತು ಕೇಳಿಬಂದಿದೆ.
ಆದರೆ ಸುರೇಶ್ ಅಂಗಡಿ ನಮ್ಮನ್ನಗಲಿದ್ದು ದುರ್ದೈವ. ಒಳ್ಳೆಯವರನ್ನು ಆ ದೇವರು ಬೇಗ ಕರೆದುಕೊಳ್ಳುತ್ತಾನೆ ಎಂದು ಸಚಿವ ರಮೇಶ್ ಹೇಳಿದರು. ಇತ್ತೀಚೆಗೆ, ಸುರೇಶ್ ಅಂಗಡಿ ಸೋದರಮಾವ ಲಿಂಗರಾಜ ಪಾಟೀಲ್ ಇದೇ ರೀತಿಯ ಹೇಳಿಕೆ ನೀಡಿದ್ದರು. ಇದೀಗ, ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.