ಬಿಜೆಪಿ ಹಿರಿಯ ನಾಯಕರನ್ನೆಲ್ಲ ಮೋದಿ ಮೂಲೆಗುಂಪು ಮಾಡ್ತಿದ್ದಾರೆ..  ಆ ಸಾಲಿಗೆ ಈಗ ಯಡಿಯೂರಪ್ಪ ಸೇರ್ಪಡೆ: ರಣದೀಪ್ ಸಿಂಗ್​​ ಸುರ್ಜೇವಾಲಾ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ಹಿರಿಯ ನಾಯಕರನ್ನು ಪದೇಪದೆ ಅವಮಾನಿಸುತ್ತಿದ್ದಾರೆ. ಮತ್ತು ಅವರನ್ನು ಶಾಶ್ವತವಾಗಿ ಇತಿಹಾಸದ ಕಸದಬುಟ್ಟಿಗೆ ಹಾಕುತ್ತಿದ್ದಾರೆ ಎಂದು ರಣದೀಪ್​ ಸಿಂಗ್​ ಸುರ್ಜೇವಾಲಾ ಹೇಳಿದ್ದಾರೆ.

ಬಿಜೆಪಿ ಹಿರಿಯ ನಾಯಕರನ್ನೆಲ್ಲ ಮೋದಿ ಮೂಲೆಗುಂಪು ಮಾಡ್ತಿದ್ದಾರೆ..  ಆ ಸಾಲಿಗೆ ಈಗ ಯಡಿಯೂರಪ್ಪ ಸೇರ್ಪಡೆ: ರಣದೀಪ್ ಸಿಂಗ್​​ ಸುರ್ಜೇವಾಲಾ
ರಣ​ದೀಪ್ ಸುರ್ಜೇವಾಲಾ
Follow us
| Updated By: Lakshmi Hegde

Updated on:Jul 26, 2021 | 3:06 PM

ಮುಖ್ಯಮಂತ್ರಿ ಯಡಿಯೂರಪ್ಪ(BS Yediyurappa) ನವರ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್​ನಿಂದ ಟೀಕೆಗಳ ಸುರಿಮಳೆಯೇ ಬರುತ್ತಿದೆ. ರಾಜ್ಯ ಕಾಂಗ್ರೆಸ್​, ಕಾಂಗ್ರೆಸ್​ ನಾಯಕರು ಈಗಾಗಲೇ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೇ ಇದೀಗ ರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್​​ ಸುರ್ಜೇವಾಲಾ (Randeep Singh Surjewala) ಕೂಡ ಸರಣಿ ಟ್ವೀಟ್​ ಮೂಲಕ ಬಿಜೆಪಿಯನ್ನು ಟೀಕಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಹುಟ್ಟಿಕೊಂಡಿದ್ದೇ ಭ್ರಷ್ಟಾಚಾರ ಮತ್ತು ಪಕ್ಷಾಂತರ ಪ್ರಕ್ರಿಯೆಯಿಂದ. ಇದು ನ್ಯಾಯಸಮ್ಮತ ಸರ್ಕಾರವಲ್ಲ. ವ್ಯಾಧಿಯೆಂಬುದು ಈ ಭ್ರಷ್ಟ ಬಿಜೆಪಿ ಸರ್ಕಾರದ ಒಂದು ಭಾಗವಾಗಿಯೇ ಇದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸಮರ್ಪಕವಾಗಿ ಆಡಳಿತ ನಡೆಸಿದೆ. ಈಗ ನಾಯಕನನ್ನು ಬದಲಿಸಿದ ಮಾತ್ರಕ್ಕೆ ಬಿಜೆಪಿಯ ಕುಟಿಲ ಸ್ವಭಾವ ಬದಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ಹಿರಿಯ ನಾಯಕರನ್ನು ಪದೇಪದೆ ಅವಮಾನಿಸುತ್ತಿದ್ದಾರೆ. ಮತ್ತು ಅವರನ್ನು ಶಾಶ್ವತವಾಗಿ ಇತಿಹಾಸದ ಕಸದಬುಟ್ಟಿಗೆ ಹಾಕುತ್ತಿದ್ದಾರೆ. ಅಡ್ವಾಣಿ ಜೀ, ಎಂ.ಎಂ.ಜೋಶಿ, ಕೇಶುಭಾಯ್​ ಪಟೇಲ್​, ಶಾಂತಾ ಕುಮಾರ್​​, ಯಶ್ವಂತ್​ ಸಿನ್ಹಾ ಸೇರಿ ಹಲವು ಹಿರಿಯ ನಾಯಕರಿಗೆ ಬಲವಂತವಾಗಿ ನಿವೃತ್ತಿ ಕೊಡಿಸಿದ್ದೂ ಕೂಡ ಪ್ರಧಾನಿ ಮೋದಿಯವರ ದಾಖಲೆಯೇ ಆಗಿದೆ. ಹೀಗೆ ಮೋದಿಯವರಿಂದ ಸಂತ್ರಸ್ತರಾದವರ ಪಟ್ಟಿ ಉದ್ದವಾಗಿದ್ದು, ಸುಮಿತ್ರಾ ಮಹಾಜನ್​, ಉಮಾ ಭಾರತಿ, ಎ.ಕೆ.ಪಟೇಲ್​, ಹರಿಣ್​ ಪಾಠಕ್​, ಕಲ್ಯಾಣ್​ ಸಿಂಗ್​ ಸೇರಿದ್ದಾರೆ. ಇನ್ನು ಡಾ. ಹರ್ಷವರ್ಧನ್​, ರವಿಶಂಕರ್​ ಪ್ರಸಾದ್​, ಸುಶೀಲ್​ ಮೋದಿ ಇತ್ತೀಚೆಗೆ ಸೇರ್ಪಡೆಯಾದವರು.

ಈಗ ಬಿ.ಎಸ್​.ಯಡಿಯೂರಪ್ಪನವರಿಗೆ ಅವಮಾನ ಮಾಡಿ, ಹಿಂಸೆ ನೀಡಿ ರಾಜೀನಾಮೆ ಪಡೆಯಲಾಗಿದೆ. ಬಲವಂತವಾಗಿ ನಿವೃತ್ತರಾದವರ ಕ್ಲಬ್​​ಗೆ ಬಿಎಸ್​ವೈ ಹೊಸ ಸದಸ್ಯರಾಗಿದ್ದಾರೆ. ದೆಹಲಿಯಲ್ಲಿರುವ ನಿರಂಕುಶ ಅಧಿಕಾರಿಗಳು ಮುಖ್ಯಮಂತ್ರಿಯನ್ನು ನಿರ್ಧರಿಸುತ್ತಾರೆಯೇ ಹೊರತು, ಬಿಜೆಪಿ ಶಾಸಕರ ಇಚ್ಛೆಯಂತೆ ಏನೂ ಆಗೋದಿಲ್ಲ ಎಂಬುದು ನಮಗೆ ಗೊತ್ತಿದೆ ಎಂದು ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. ಈ ಮೂಲಕ ರಣದೀಪ್​ ಸಿಂಗ್​ ಸುರ್ಜೇವಾಲಾ ಬಿ.ಎಸ್​.ಯಡಿಯೂರಪ್ಪನವರ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ.

Randeep Singh Surjewala tweet about BS Yediyurappa resignation and BJP Highcommand

Published On - 2:51 pm, Mon, 26 July 21

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ