AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂದ್ಯ ಗೆದ್ದುಕೊಡಬಲ್ಲ ಮಿಡ್ಲ್ ಅರ್ಡರ್ ಬ್ಯಾಟ್ಸ್​ಮನ್​ಗಳು ಆರ್​ಸಿಬಿಗೆ ಬೇಕು | RCB needs match-winning middle order batters

ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಶುಕ್ರವಾರದಂದು ಎಲಿಮಿನೇಟರ್ ಪಂದ್ಯದ ನಂತರ ಟೀಮಿನ ಡಗ್​ ಔಟ್​ನಲ್ಲಿ ಉಳಿದ ಆಟಗಾರರಿಗಿಂತ ದೂರದಲ್ಲಿ ಕೂತಿದ್ದ ವಿರಾಟ್ ಕೊಹ್ಲಿ ಮುಖದ ಮೇಲಿನ ಪ್ರೇತಕಳೆ ಮಿಕ್ಕಿದೆಲ್ಲವನ್ನು ವ್ಯಾಖ್ಯಾನಿಸುವಂತಿತ್ತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಮತ್ತೊಂದು ನಿರಾಶಾದಾಯಕ ಅಭಿಯಾನ ಮುಗಿಸಿದೆ. ಅತ್ಯಂತ ಪ್ರಯಾಸದಿಂದ ಪ್ಲೇ ಆಫ್ ಹಂತಕ್ಕೆ ಅರ್ಹತೆ ಗಳಿಸಿ ಎಲಿಮಿನೇಟರ್ ಸುತ್ತಿನ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಟೀಮಿನ ವಿರುದ್ಧ ಸೋಲುವುದರೊಂದಿಗೆ ಕೊಹ್ಲಿಯ ತಂಡ ಈ ಸಲವೂ ತನ್ನ ಕೋಟ್ಯಾಂತರ ಅಭಿಮಾನಿಗಳ […]

ಪಂದ್ಯ ಗೆದ್ದುಕೊಡಬಲ್ಲ ಮಿಡ್ಲ್ ಅರ್ಡರ್ ಬ್ಯಾಟ್ಸ್​ಮನ್​ಗಳು ಆರ್​ಸಿಬಿಗೆ ಬೇಕು | RCB needs match-winning middle order batters
ವಿರಾಟ್ ಕೊಹ್ಲಿ
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 07, 2020 | 5:33 PM

Share

ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಶುಕ್ರವಾರದಂದು ಎಲಿಮಿನೇಟರ್ ಪಂದ್ಯದ ನಂತರ ಟೀಮಿನ ಡಗ್​ ಔಟ್​ನಲ್ಲಿ ಉಳಿದ ಆಟಗಾರರಿಗಿಂತ ದೂರದಲ್ಲಿ ಕೂತಿದ್ದ ವಿರಾಟ್ ಕೊಹ್ಲಿ ಮುಖದ ಮೇಲಿನ ಪ್ರೇತಕಳೆ ಮಿಕ್ಕಿದೆಲ್ಲವನ್ನು ವ್ಯಾಖ್ಯಾನಿಸುವಂತಿತ್ತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಮತ್ತೊಂದು ನಿರಾಶಾದಾಯಕ ಅಭಿಯಾನ ಮುಗಿಸಿದೆ. ಅತ್ಯಂತ ಪ್ರಯಾಸದಿಂದ ಪ್ಲೇ ಆಫ್ ಹಂತಕ್ಕೆ ಅರ್ಹತೆ ಗಳಿಸಿ ಎಲಿಮಿನೇಟರ್ ಸುತ್ತಿನ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಟೀಮಿನ ವಿರುದ್ಧ ಸೋಲುವುದರೊಂದಿಗೆ ಕೊಹ್ಲಿಯ ತಂಡ ಈ ಸಲವೂ ತನ್ನ ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ. 13ನೇ ಅವೃತ್ತಿ ಶುರುವಾಗುವ ಮೊದಲೇ ‘ಈ ಸಲ ಕಪ್ ನಮ್ದೇ’ ಅಂತಿದ್ದ ಆರ್​ಸಿಬಿಯ ಕಟ್ಟಾ ಅಭಿಮಾನಿಗಳು ಯಾಕಾದರೂ ನಾವು ಈ ಟೀಮನ್ನು ಇಷ್ಟೊಂದು ಪ್ರೀತಿಸುತ್ತೇವೆ, ಇಷ್ಟಪಡುತ್ತೇವೆ ಅಂತ ವ್ಯಥೆಪಡುತ್ತಿದ್ದಾರೆ.

ಅಭಿಮಾನಿಗಳಿಗೆ ಪ್ರತಿಸಲ ನಿರಾಶೆ ಕಟ್ಟಿಟ್ಟ ಬುತ್ತಿಯಂತಾಗಿಬಿಟ್ಟಿದೆ. ಆದರೂ ಅವರು ಹಿಂದಿನ ಸೀಸನ್​ಗಳ ಕಹಿಗಳನ್ನೆಲ್ಲ ಮರೆತು ಮತ್ತೊಂದು ಸೀಸನ್​ಗಾಗಿ ಕಾಯಲಾರಂಭಿಸುತ್ತಾರೆ. ಕಳೆದ 13 ವರ್ಷಗಳಿಂದ ಇದೇ ನಡೆದುಕೊಂಡು ಬಂದಿದೆ.

ಈ ಕ್ರೀಡೆಯೇ ಹಾಗೆ, ಮೋಘ ಅನಿಶ್ಚಿತತೆಗಳ ಆಟ. ಆದರೆ ಟೀಮಿನ ಅಥವಾ ನಾಯಕ ಕೊಹ್ಲಿಯ ಸ್ವಯಂಕೃತಾಪರಾಧಗಳನ್ನು ಕಡೆಗಣಿಸುವಂತಿಲ್ಲ. ಟೀಮಿನ ಕಾಂಪೊಸಿಷನ್ ಬಗ್ಗೆ ಹಲವಾರು ಮಾತುಗಳು ಕೇಳಿಬರುತ್ತಿವೆ. ಕ್ರಿಸ್ ಗೇಲ್ ಸ್ಥಾನಕ್ಕೆ ಆರ್​ಸಿಬಿಯ ಧಣಿಗಳು ಖರೀದಿಸಿದ್ದು ಆಸ್ಟ್ರೇಲಿಯಾದ ಆರನ್ ಫಿಂಚ್​ರನ್ನು. ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ತನ್ನ ದೇಶದ ನಾಯಕನಾಗಿರುವ ಫಿಂಚ್ ನಿಸ್ಸಂದೇಹವಾಗಿ ವಿಸ್ಫೋಟಕ ಬ್ಯಾಟ್ಸ್​ಮನ್. ಟಿ20 ಅಂತರರಾಷ್ಸ್ರೀಯ ಪಂದ್ಯಗಳಲ್ಲಿ ಅವರ ಸ್ಟ್ರೈಕ್​ರೇಟ್ 155 ರಷ್ಟಿದೆ ಮತ್ತು ಸರಾಸರಿ 38.44 ಇದೆ. ಆದರೆ ಐಪಿಎಲ್ 2020ನಲ್ಲಿ 12 ಪಂದ್ಯಗಳಾಡಿದ ಫಿಂಚ್, ಕೇವಲ 22.33 ಸರಾಸರಿಯಲ್ಲಿ 268 ರನ್ ಗಳಿಸಿದರು, ಇಲ್ಲಿ ಅವರ ಸ್ಟ್ರೈಕ್​ರೇಟ್ ಕೇವಲ 111 ರಷ್ಟಿದೆ.

ಎಲಿಮಿನೇಟರ್ ಪಂದ್ಯದಲ್ಲಿ ಅವರನ್ನು ಆಡಿಸಿದ್ದು ಸರಿಯರಬಹುದು ಯಾಕೆಂದರೆ, ಜೊಷುವಾ ಫಿಲಿಪ್ ಪದೇಪದೆ ವಿಫಲರಾಗುತ್ತಿದ್ದರಿಂದ ಕೊಹ್ಲಿ ಮತ್ತು ಇತರ ಮಧ್ಯಮ ಕ್ರಮಾಂಕದ ಆಟಗಾರರ ಮೇಲೆ ಒತ್ತಡ ಹೆಚ್ಚಾಗಿತ್ತು. ಆದರೆ, ಫಿಂಚ್ ಓಪನಿಂಗ್ ಬ್ಯಾಟ್ಸ್​ಮನ್ ಆಗಿರುವುದರಿಂದ ಅವರ ಸ್ಥಾನದಲ್ಲಿ ತಾನು ಇನ್ನಿಂಗ್ಸ್ ಆರಂಭಿಸಿ ಕೊಹ್ಲಿ ಟ್ಯಾಕ್ಟಿಕಲ್ ಪ್ರಮಾದವೆಸಗಿದರು. ಪಂದ್ಯ ಮುಗಿದ ನಂತರ ಮಿಡ್ಲ್ ಆರ್ಡರ್ ಮೇಲಿನ ಒತ್ತಡ ಕಡಿಮೆ ಮಾಡಲು ಹಾಗೆ ಮಾಡಿದೆ ಅಂತ ಕೊಹ್ಲಿ ಹೇಳಿದರು. ಅವರ ವಾದ ಆರ್​ಸಿಬಿಯ ಅಭಿಮಾನಿಗಳಿಗೆ ಅರ್ಥವಾಗಲೇ ಇಲ್ಲ. ವಾಸ್ತವದಲ್ಲಿ, ಫಿಂಚ್ ಆರಂಭಿಕನಾಗಿ ಮತ್ತು ತಾನು ಎಂದಿನ 3ನೇ ಸ್ಥಾನದಲ್ಲಿ ಆಡಿದ್ದರೆ ಮಧ್ಯಮ ಕ್ರಮಾಂಕಕ್ಕೆ ಧೃಡತೆ ಸಿಗುತಿತ್ತು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಫಿಂಚ್​ರನ್ನು ಕೆಲ ಪಂದ್ಯಗಳ ನಂತರ ವಾಪಸ್ಸು ತರಲಾಗಿತ್ತು. ನೆಟ್ಸ್​ನಲ್ಲಿ ಕಾಣುವ ಸ್ಪರ್ಶ ಮ್ಯಾಚ್ ಸಿಚುಯೇಷನ್​ನಲ್ಲಿ ಕಾಣದಂತಾಗುವ ಅನೇಕ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಫಿಂಚ್ ವಿಷಯದಲ್ಲೂ ಅದೇ ಆಗಿದ್ದು.

ಮೊಯಿನ್ ಅಲಿ ಅವರನ್ನು ಈ ಪಂದ್ಯದಲ್ಲಿ ಯಾಕೆ ಅಡಿಸಲಾಯಿತೆಂದು ಕೊಹ್ಲಿಯೇ ಹೇಳಬೇಕು. ಹಿಂದಿನ ಪಂದ್ಯಗಳಲ್ಲಿ ಅವರಿಂದ ಕಳಪೆ ಪ್ರದರ್ಶನಗಳು ಬಂದಾಗ್ಯೂ ಅವರನ್ನು ಆಡಿಸಿದ್ದು ದೊಡ್ಡ ಬ್ಲಂಡರ್​. ಅಲಿಯಲ್ಲಿ ಬೇಸಿಕ್ ಕಾಮನ್ ಸೆನ್ಸ್ ಸಹ ಇಲ್ಲದೇ ಹೋಗಿದ್ದು ಅತ್ಯಂತ ವಿಷಾದನೀಯ. ಫ್ರೀ ಹಿಟ್ ಎದುರಿಸುವಾಗ ಒಬ್ಬ ಬ್ಯಾಟ್ಸ್​ಮನ್ ರನೌಟ್ ಆಗುವುದು ಕ್ರಿಕೆಟ್ ಮೈದಾನಗಳಲ್ಲಿ ಅಪರೂಪಕ್ಕೊಮ್ಮೆ ಕಂಡುಬರುತ್ತದೆ. ಅವರ ಸ್ಥಾನದಲ್ಲಿ ಗುರ್ಕೀರತ್ ಮಾನ್ ಇಲ್ಲವೇ ಇಡೀ ಸೀಸನ್ ಬೆಂಚ್ ಕಾಯಿಸಿದ ಪಾರ್ಥೀವ್ ಪಟೇಲ್​ರನ್ನು ಆಡಿಸಿದರೆ ಸೂಕ್ತವೆನಿಸುತ್ತಿತ್ತು. ಮಿಡ್ಲ್​ ಆರ್ಡರ್ ದುರ್ಬಲವಾಗಿದೆ ಎಂದು ಹೇಳುತ್ತಿದ್ದ ಕೊಹ್ಲಿ ಅದನ್ನು ಬಲಪಡಿಸುವ ಪ್ರಯತ್ನ ಮಾಡಬೇಕಿತ್ತು.

ಪ್ರತಿಸಲದಂತೆ ಈ ಬಾರಿಯೂ, ಟೀಮಿನ ಬ್ಯಾಟಿಂಗ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಅವರನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿದ್ದು ಮುಳುವಾಯಿತು. ಅವರಿಬ್ಬರು ಮತ್ತು ಟಾಪ್ ಆರ್ಡರ್​ನಲ್ಲಿ ದೇವದತ್ ಪಡಿಕ್ಕಲ್ ಫೇಲಾದರೆ ಟೀಮಿನ ಕತೆ ಮುಗಿದಂತೆಯೇ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಮೊದಲ ಮೂರು ಇನ್ನಿಂಗ್ಸ್​ಗಳಲ್ಲಿ 14, 1, 3 ರನ್ ಗಳಿಸಿ ನಂತರದ 4 ಪಂದ್ಯಗಳಲ್ಲಿ 9, 7, 29 ಮತ್ತು 6 ರನ್ ಗಳಿಸಿದ ಕೊಹ್ಲಿ ಲೀಗ್​ನ ಮಧ್ಯಮ ಹಂತದ ಪಂದ್ಯಗಲ್ಲಿ ಮಾತ್ರ ಚೆನ್ನಾಗಿ ಆಡಿದರು. ಎಬಿಡಿ ಸಹ ಕೆಲವು ಪಂದ್ಯಗಳಲ್ಲಿ ಮಾತ್ರ ತಮ್ಮ ಖ್ಯಾತಿಗೆ ತಕ್ಕ ಆಟವಾಡಿದರು.

ಗುರ್ಕೀರತ್, ಮತ್ತು ಆಲ್​ರೌಂಡರ್​ಗಳಾದ, ಶಿವಮ್ ದುಬೆ ಹಾಗೂ ವಾಷಿಂಗ್ಟನ್ ಸುಂದರ್ ಅವರ ಬ್ಯಾಟ್​ಗಳಿಂದ ರನ್​ಗಳೇ ಬರಲಿಲ್ಲ. ಈ ಟೀಮಿಗೆ ಮಧ್ಯಮ ಕ್ರಮಾಂಕದಲ್ಲಿ ಪಂದ್ಯ ಗೆದ್ದುಕೊಡಬಲ್ಲ ಬ್ಯಾಟ್ಸ್​ಮನ್​ಗಳು ಬೇಕಾಗಿದ್ದಾರೆ. ಌಡಂ ಜಂಪಾ ಅವರನ್ನು ಇನ್ನಷ್ಟು ಪಂದ್ಯಗಳಲ್ಲಿ ಆಡಿಸಿದರೆ ಚೆನ್ನಾಗಿರುತ್ತಿತ್ತು. ಶುಕ್ರವಾರ ಅವರು ಹೈದರಾಬಾದ್ ವಿರುದ್ಧ ಚಾಂಪಿಯನ್​ನಂತೆ ಬೌಲಿಂಗ್ ಪ್ರದರ್ಶನ ನೀಡಿದರು.

ಯುಜ್ವೇಂದ್ರ ಚಹಲ್, ಸುಂದರ್, ನವದೀಪ್ ಸೈನಿ ತಮ್ಮ ಕರ್ತವ್ಯಗಳನ್ನು ಸೂಕ್ತವಾಗಿ ನಿಭಾಯಿಸಿದರೆ, ಡೇಲ್ ಸ್ಟೀನ್ ಮತ್ತು ಉಮೇಶ್ ಯಾದವ್ ಟೀಮಿಗೆ ಹೊರೆಯೆನಿಸಿದರು. ಶಹಾಬಾಜ್ ಅಹ್ಮದ್​ಗೆ ಜಾಸ್ತಿ ಅವಕಾಶಗಳು ಸಿಗಲಿಲ್ಲ. ಇಸುರು ಉದಾನಾ ತಕ್ಕಮಟ್ಟಿನ ಪ್ರದರ್ಶನಗಳನ್ನು ನೀಡಿದರು.

ಮೊದಲ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದರೂ ನಂತರದ 4 ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಸೋತ ಆರ್​ಸಿಬಿ ಪಡಿಕ್ಕಲ್ ಮತ್ತು ಸ್ಪಿನ್ನರ್​ಗಳ ಯಶಸ್ಸಿನ ಹೊರತಾಗಿ ಮತ್ತೇನನ್ನು ಸಾಧಿಸದೆ ಈ ಸಲದ ಕ್ಯಾಂಪೇನ್ ಮುಗಿಸಿದೆ. ಅದರ ಅಭಿಮಾನಿ ಕೆಲ ದಿನಗಳ ನಂತರ ಮತ್ತೊಂದು ಸೀಸನ್​ಗಾಗಿ ಎದುರು ನೋಡಲಾರಂಭಿಸುತ್ತಾನೆ. ಅವನಿಗೆ ಬೇರೆ ವಿಧಿಯೇ ಇಲ್ಲ.

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ